ದೀಪಿಕಾ ದಾಸ್ ನ ಖಂಡಿತ ನೀವು ಹೀಗೆ ನೋಡಿರಲ್ಲ: ದೀಪಿಕಾ ಅಬ್ಬರಕ್ಕೆ ದಂಗಾದ ಬಿಗ್ ಬಾಸ್ ಮನೆ ಮಂದಿ

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯಲ್ಲಿ (Big Boss Kannada) ಹದಿಮೂರನೇ ವಾರದ ಆಟವು ನಾಲ್ಕನೇ ದಿನವನ್ನು ದಾಟಿದೆ. ಇನ್ನೇನು ಈ ದಿನ ಕಳೆದರೆ ಈ ವಾರಾಂತ್ಯ ಕೂಡಾ ಬರಲಿದ್ದು, ಎಲ್ಲರ ಗಮನ ಈಗ ಪ್ರಮುಖವಾಗಿ ಎರಡು ವಿಷಯಗಳನ್ನು ತಿಳಿಯುವ ಕಡೆಗೆ ಇದೆ. ಈ ವಾರದ ಅತ್ಯುತ್ತಮ ಸದಸ್ಯ ಮತ್ತು ಕಳಪೆ ಸದಸ್ಯ ಯಾರು ಎನ್ನುವುದು ಹಾಗೂ ಈ ವಾರಾಂತ್ಯಕ್ಕೆ ಬಿಗ್ ಬಾಸ್(Big Boss Kannada) ಮನೆಯಲ್ಲಿ ಯಾರ ಜರ್ನಿ ಮುಕ್ತಾಯವಾಗಲಿದೆ ಎನ್ನುವುದು. ಆದರೆ ಅದಕ್ಕೂ ಮುನ್ನ ಈಗ ಬಿಗ್ ಬಾಸ್ ಮನೆಯಲ್ಲಿ ದೀಪಿಕಾ ದಾಸ್ (Deepika Das) ಅವರು ನೀಡಿದ ಮನರಂಜನೆ ಎಲ್ಲರ ಗಮನವನ್ನು ಸೆಳೆದಿದೆ. ಸೋಶಿಯಲ್ ಮೀಡಿಯಾಗಳಲ್ಲಿ ದೀಪಿಕಾ ದಾಸ್(Deepika Das) ಅವರ ಅಭಿಮಾನಿಗಳು ನಟಿಗೆ ಸಾಕಷ್ಟು ಮೆಚ್ಚುಗೆಗಳನ್ನು ಸಹಾ ನೀಡುತ್ತಿದ್ದಾರೆ.

ಇದನ್ನೂ ಓದಿ: ರೂಪೇಶ್ ರಾಜಣ್ಣನ ಶ್ರಮಕ್ಕೆ ಬೆಲೆ ಇಲ್ವಾ? ದೀಪಿಕಾ ದಾಸ್ ಮಾತಿಗೆ ಅಸಮಾಧಾನಗೊಂಡ ರಾಜಣ್ಣ

ದೀಪಿಕಾ ದಾಸ್(Deepika Das) ಅವರು ಬಿಗ್ ಬಾಸ್ ಮನೆಯಲ್ಲಿ ಯಾರೊಂದಿಗೂ ಅಷ್ಟಾಗಿ ಬೆರೆಯುವುದಿಲ್ಲ ಹಾಗೂ ಅವರು ಅನ್ಯ ಸದಸ್ಯರಿಂದ ಅಂತರ ಕಾಯ್ದುಕೊಳ್ಳುತ್ತಾರೆ ಮಾತ್ರವಲ್ಲದೇ ಮನರಂಜನೆ ವಿಚಾರದಲ್ಲಿ ಸಹಾ ಅವರು ಒಂದು ಹೆಜ್ಜೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ದೀಪಿಕಾ (Deepika Das Elimination) ಮನೆಯಿಂದ ಎಲಿಮಿನೇಟ್ ಕೂಡಾ ಆದರು. ಆದರೆ ಅನಂತರ ವೈಲ್ಡ್ ಕಾರ್ಡ್ (Wild Card) ಮೂಲಕ ಮತ್ತೆ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ನೀಡಿದ ದೀಪಿಕಾ ದಾಸ್ (Deepika Das) ತಾನು ಹಿಂದೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಆಟವಾಡುವ ಅವಕಾಶವನ್ನು ಮತ್ತೆ ಪಡೆದುಕೊಂಡಿದ್ದರು. ಅವರು ಈ ಅವಕಾಶವನ್ನು ಬಹಳ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ.

ಟಾಸ್ಕ್ (Task) ವಿಚಾರದಲ್ಲಿ ತಾನು ಸ್ಟ್ರಾಂಗ್ ಸ್ಪರ್ಧಿ ಎನ್ನುವುದನ್ನು ಈಗಾಗಲೇ ಸಾಬೀತು ಮಾಡಿರುವ ದೀಪಿಕಾ, ಈಗ ಮನೆಯಲ್ಲಿ ಎಲ್ಲರೊಡನೆ ಬೆರೆಯುವುದು ಮಾತ್ರವೇ ಅಲ್ಲದೇ ಮನರಂಜನೆ ನೀಡುವುದರಲ್ಲಿಯೂ ಮುಂದೆ ಇದ್ದಾರೆ. ನಿನ್ನೆ ದೀಪಿಕಾ ದಾಸ್(Deepika Das) ಅರುಣ್ ಸಾಗರ್ (Arun Sagar) ಅವರ ಜೊತೆಗೆ ಒಂದು ಹೊಸ ಗೆಟಪ್ ನಲ್ಲಿ ಮನೆ ಮಂದಿ ಮುಂದೆ ಬಂದಿದ್ದಾರೆ. ಇದು ಪ್ರೇಕ್ಷಕರಿಗೆ ಸಹಾ ಭರ್ಜರಿಯಾಗಿ ಮನರಂಜನೆ ನೀಡಿದೆ. ದೀಪಿಕಾ ಹುಬ್ಬು ಹಲ್ಲು, ಕಣ್ಣಿಗೆ ಕನ್ನಡಕ, ಒಂದು ಅಚ್ಚುಕಟ್ಟಾದ ಸೀರೆ, ಹೊಸ ಬಾಡಿ ಲಾಂಗ್ವೇಜ್ ನೊಂದಿಗೆ ಅರುಣ್ ಸಾಗರ್ ಅವರ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಈ ವೇಳೆ ಅರುಣ್ ಸಾಗರ್(Arun Sagar) ಮತ್ತು ರೂಪೇಶ್ ಶೆಟ್ಟಿ(Roopesh Shetty) ಕೂಡಾ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ಸೇರಿ ಭರ್ಜರಿ ಮನರಂಜನೆಯನ್ನು ನೀಡಿದ್ದಾರೆ. ಈ ವೇಳೆ ದೀಪಿಕಾ ದಾಸ್(Deepika Das) ಗೆಟಪ್ ಮತ್ತು ಅವರ ಮಾತುಗಳನ್ನು ಕೇಳಿ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಮುಗ್ಧ, ಪೆದ್ದ , ಅಮಾಯಕ ಹೆಣ್ಣಿನ ಹಾಗೆ ದೀಪಿಕಾ ಹಾಸ್ಯದ ಹೊನಲನ್ನು ಹರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಹಾ ದೀಪಿಕಾ ಅವರ ಈ ಗೆಟಪ್ ಮತ್ತು ನೀಡಿದ ಮನರಂಜನೆಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬಂದಿದೆ. ದೀಪಿಕಾ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

Leave a Comment