ದೀಪಿಕಾ ತೊಟ್ಟ ಬಿಕಿನಿ ಕಂಡು ಪ್ರಶಾಂತ್ ಸಂಬರ್ಗಿ ಆಕ್ರೋಶ: ಟ್ರೆಂಡ್ ಆಗ್ತಿದೆ Boycottpathan

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನ(Bollywood) ದೊಡ್ಡ ದೊಡ್ಡ ಸ್ಟಾರ್ ಗಳ ಹೊಸ ಸಿನಿಮಾಗಳು ತೆರೆಗೆ ಬರಲು ಸಜ್ಜಾದ ಕೂಡಲೇ ಬಾಯ್ಕಾಟ್ ಟ್ರೆಂಡ್ ಶುರುವಾಗುತ್ತಿದೆ. ಇದರ ಪರಿಣಾಮವಾಗಿ ಈಗಾಗಲೇ ಬಾಲಿವುಡ್ ನಲ್ಲಿ ಹಲವು ಸಿನಿಮಾಗಳು ನೆಲಕಚ್ಚಿವೆ. ಸ್ಟಾರ್ ಗಳ ಸಿನಿಮಾಗಳು ಹೀನಾಯ ಸೋಲನ್ನು ಕಂಡಿವೆ. ದೊಡ್ಡ ನಿರೀಕ್ಷೆಗಳೊಂದಿಗೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಾಲಿವುಡ್ ಸಿನಿಮಾಗಳು ಕೂಡಾ ಥಿಯೇಟರ್ ಗಳಲ್ಲಿ ತಮ್ಮ ಮೋಡಿ ಮಾಡುವಲ್ಲಿ ವಿಫಲವಾಗುತ್ತಿವೆ. ಇದು ಬಾಲಿವುಡ್ ನ ಕೆಲವು ನಟರು, ನಿರ್ದೇಶಕರನ್ನು ಕೆರಳುವಂತೆ ಮಾಡಿದ್ದು, ಬಾಲಿವುಡ್ ಸಿನಿಮಾಗಳ ಸೋಲಿಗೆ ದಕ್ಷಿಣದ ಸಿನಿಮಾಗಳೇ ಕಾರಣ ಎಂದು ಕಿಡಿಕಾರುತ್ತಾ, ತಮ್ಮ ಸಿಟ್ಟು, ಅಸಮಾಧಾನವನ್ನು ಮತ್ತು ಹತಾಶೆಯನ್ನು ಹೊರ ಹಾಕುತ್ತಿದ್ದಾರೆ.

ಈಗ ಇವೆಲ್ಲವುಗಳ ನಡುವೆಯೇ ವರ್ಷಗಳ ಬಳಿಕ ಬಾಲಿವುಡ್ ನ ಕಿಂಗ್ ಖಾನ್ ಶಾರೂಖ್ ಖಾನ್ (Shahrukh Khan) ನಾಯಕನಾಗಿರುವ ಬಹುನಿರೀಕ್ಷಿತ ಸಿನಿಮಾ ಪಠಾಣ್ (Pathan) ತೆರೆಗೆ ಬರಲು ಸಜ್ಜಾಗಿರುವಾಗಲೇ, ಸಿನಿಮಾ ಭಾರೀ ವಿ ವಾ ದಕ್ಕೆ ಸಹಾ ಕಾರಣವಾಗಿದೆ. ಎಲ್ಲೆಲ್ಲೂ ಬಾಯ್ಕಾಟ್ ಪಠಾಣ್ (Boycottpathan) ಟ್ರೆಂಡ್ ಆಗುತ್ತಾ ಸಾಗುತ್ತಿದೆ. ಇನ್ನು ಮೊನ್ನೆಯಷ್ಟೇ ಬಿಡುಗಡೆಯಾದ ಈ ಸಿನಿಮಾದ ಬೇಷರಮ್ ರಂಗ್ ಹಾಡಿನಲ್ಲಿ ದೀಪಿಕಾ ಪಡುಕೋಣೆ (Deepika Padukone bikini) ಕೇಸರಿ ಬಣ್ಣದ ಬಿಕಿನಿ ಯನ್ನು ಧರಿಸಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಪವಿತ್ರ ಬಣ್ಣಕ್ಕೆ ಅ ಪ ಮಾನ ಮಾಡಲಾಗಿದೆ ಎಂದು ಸಿಟ್ಟಾಗಿದ್ದಾರೆ. ದೀಪಿಕಾ ಕೇಸರಿ ಬಣ್ಣದ ಬಿ ಕಿ ನಿ ತೊಟ್ಟು ಹಿಂದೂಗಳ ಭಾವನೆಗೆ ಧ ಕ್ಕೆಯನ್ನು ತಂದಿದ್ದಾರೆ ಎಂದು ಟ್ವಿಟರ್ ನಲ್ಲಿ ದೊಡ್ಡ ಚರ್ಚೆಯೇ ನಡೆದಿದೆ.

ಇದು ದೊಡ್ಡ ವಿ ವಾ ದ ಕ್ಕೆ ಇದು ಕಾರಣವಾಗಿದೆ ಮತ್ತು ಭಾರೀ ಪ್ರಮಾಣದಲ್ಲಿ ಆ ಕ್ರೋ ಶ ವ್ಯಕ್ತವಾಗಿದ್ದು, ಟೀಕೆಗಳು ಸಹಾ ದೊಡ್ಡ ಪ್ರಮಾಣದಲ್ಲಿಯೇ ಹರಿದು ಬರುತ್ತಿದ್ದು, ಸಿನಿಮಾ ಬಾಯ್ಕಾಟ್ ಮಾಡಿ ಎನ್ನುವ ಕೂಗು ಜೋರಾಗಿದೆ.
ಈಗ ಇವೆಲ್ಲವುಗಳ ನಡುವೆ ಬಿಗ್ ಬಾಸ್ ಖ್ಯಾತಿಯ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ (Prashant Sambargi) ಅವರು ಪಠಾಣ್ (Pathan) ಸಿನಿಮಾದ ಕುರಿತಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಮಾತನಾಡುತ್ತಾ, ದೀಪಿಕಾ ಪಡುಕೋಣೆ (Deepika Padukone) ಹಾಕಿರುವ ಬಟ್ಟೆ ನಮ್ಮ ಕೇಸರಿ ಬಣ್ಣದ್ದಾಗಿದೆ. ಇದು ಬೇಕು ಬೇಕಂತಲೇ ಸಿನಿಮಾದಲ್ಲೇ ಹಾಕಲಾಗಿದೆ. ಇದು ನಮ್ಮ ಭಗ್ವ ಧ್ವಜದ ಬಣ್ಣ, ಹಿಂದೂ ಸಂಕೇತವಾದ ಕೇಸರಿ ಬಣ್ಣವನ್ನು ದೀಪಿಕಾಗೆ ತೊಡಿಸಿದ್ದಾರೆ.

ಬೇಷರಮ್ ರಂಗ್ ಅಂದ್ರೆ ನಾಚಿಕೆ ಆಗಬೇಕು ನಿಮ್ಮ ಬಣ್ಣಕ್ಕೆ ಎಂಬುದು ಹಾಡಿನ ಅರ್ಥವಾಗಿದೆ. ಇದೊಂದೇ ಹಾಡಿನಿಂದ ಈ ರೀತಿ ಅವಮಾನ ಮಾಡುತ್ತಿಲ್ಲ, 25 ವರ್ಷಗಳಿಂದಲೂ ಬಾಲಿವುಡ್ ಸಿನಿಮಾಗಳು ಹಿಂದೂ ವಿ ರೋ ಧಿ ಸಿನಿಮಾಗಳಾಗಿವೆ ಎನ್ನುವುದನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಪ್ರೊ. ಧೀರೇಂದ್ರ ಕುಮಾರ್ ಅವರು ಎರಡು ಸಾವಿರ ಸಿನಿಮಾಗಳನ್ನು ರೀಸರ್ಚ್ ಮಾಡಿ ದಾಖಲೆ ನೀಡಿದ್ದಾರೆನ್ನುವ ಮಾತನ್ನು ಸಹಾ ಈ ವೇಳೆ ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ. ಅಲ್ಲದೇ ಅವರು ಬಾಲಿವುಡ್ ಬಗ್ಗೆ ಸಾಕಷ್ಟು ಟೀಕೆಗಳನ್ನು ಸಹಾ ಮಾಡಿದ್ದಾರೆ.

Leave a Comment