ಪ್ಯಾಂಟ್ ಬಿಚ್ಚಿ ಪೋಸ್ ನೀಡಿ ಪ್ರೋಗ್ರಾಂಗೆ ಬನ್ನಿ ಎಂದ ನಟಿ: ಉರ್ಫಿ ಅವರಕ್ಕ ಅಂತ ಟ್ರೋಲ್ ಮಾಡಿದ ನೆಟ್ಟಿಗರು

Written by Soma Shekar

Published on:

---Join Our Channel---

ಬಾಲಿವುಡ್ ನ ಹಾಟ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬರಾಗಿದ್ದಾರೆ ದಿಶಾ ಪಟಾನಿ(Disha Patani). ಈ ನಟಿಯು ತಮ್ಮ ಸಿನಿಮಾಗಳು ಮತ್ತು ನಟನೆಗಿಂತ ಹೆಚ್ಚು ಸದ್ದು ಮಾಡುವುದು ತಮ್ಮ ಹಾಟ್ ಮತ್ತು ಬೋಲ್ಡ್ ಲುಕ್ (Disha Patani hot and bold) ನಿಂದಾಗಿ. ದಿಶಾ ಪಟಾನಿ ಎಂ ಎಸ್ ಧೋನಿ ದಿ ಅನ್ ಟೋಲ್ಡ್ ಲವ್ ಸ್ಟೋರಿ ಸಿನಿಮಾದ ಮೂಲಕ ಬಾಲಿವುಡ್ ಚಿತ್ರ ಜಗತ್ತಿಗೆ ಎಂಟ್ರಿ ನೀಡಿದರು. ದಕ್ಷಿಣದ ಸಿನಿಮಾದಲ್ಲಿ ನಟಿಸಿದ್ದ ದಿಶಾ ಮೆಗಾ ಕುಟುಂಬದ ಕುಡಿಯದ ವರುಣ್ ತೇಜ್(Varun Tej) ಜೊತೆಗೆ ನಾಯಕಿಯಾಗಿ ಲೋಫರ್ ಸಿನಿಮಾದಲ್ಲಿ ನಟಿಸಿದ್ದರು.

ಒಂದರ್ಥದಲ್ಲಿ ಈ ನಟಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದು ತೆಲುಗು ಸಿನಿಮಾದಿಂದಲೇ ಎನ್ನುವುದು ಸತ್ಯ‌. ದಿಶಾ ಪಟಾನಿ ಚೀನಾದ(Disha Patni Chinese movie) ಒಂದು ಸಿನಿಮಾದಲ್ಲಿ ಕೂಡಾ ನಟಿಸಿದ್ದಾರೆ. ದಿಶಾ ಪಾಟ್ನಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದು ನಟಿಯು ಶೇರ್ ಮಾಡಿಕೊಳ್ಳುವ ಸಿಕ್ಕಾಪಟ್ಟೆ ಹಾಟ್ ಆಗಿರುವ ಫೋಟೋಗಳಿಂದಾಗಿ ಅವರ ಹಿಂಬಾಲಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿಂದೆ ಬಾಲಿವುಡ್ ನಟ ಟೈಗರ್ ಶ್ರಾಫ್(Tiger Shroff) ಜೊತೆಗಿನ ಡೇಟಿಂಗ್ ವಿಚಾರದಿಂದ ನಟಿ ಸಾಕಷ್ಟು ಸುದ್ದಿಯಾಗುತ್ತಿದ್ದರು.

ನಂತರ ಅವರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅದು ನಿಜವೇ ಎನ್ನುವಂತರ ದಿಶಾ ಇತ್ತೀಚಿಗಷ್ಟೇ ತಮ್ಮ ಹೊಸ ಬಾಯ್ ಫ್ರೆಂಡ್ ಅನ್ನು ಕೂಡ ಪರಿಚಯ ಮಾಡಿದ್ದರು. ಅಲೆಕ್ಸಾಂಡರ್ ಅಲೆಕ್ಸ್ ಹೆಸರಿನ ಬಾಯ್ ಫ್ರೆಂಡ್ ಅನ್ನು ಜಿಮ್ ಟ್ರೈನರ್ ಎಂದು ನಟಿಯು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದರು. ಇನ್ನು ಇತ್ತೀಚಿನ ದಿನಗಳಲ್ಲಿ ಕೆಲವು ನಟಿಯರು ಅತ್ಯಂತ ಕಡಿಮೆ ಉಡುಪುಗಳನ್ನು ಧರಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮ ಸುದ್ದಿಗಳಲ್ಲಿ ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆದುಕೊಳ್ಳುತ್ತಿದ್ದಾರೆ.

ದಿಶಾ ಕೂಡಾ ಅದೇ ಹಾದಿಗೆ ಅಡಿ ಇಟ್ಟಿದ್ದು ಬಹುಕಾಲವಾಗಿದೆ. ನಟಿಯು ಸಾಕಷ್ಟು ಹಾಟ್ ಮತ್ತು ಬೋಲ್ಡ್ ಫೋಟೋಗಳನ್ನು ಈಗಾಗಲೇ ಶೇರ್ ಮಾಡಿಕೊಂಡಿದ್ದಾರೆ. ಆದರೆ ಈಗ ನಟಿಯು ಅನ್ ಬಟನ್ ಪ್ಯಾಂಟ್(Disha Patani unbutton pant) ಧರಿಸಿದ್ದು, ತಮ್ಮ ಒಳ ಉಡುಪನ್ನು ಪ್ರದರ್ಶನ ಮಾಡಿದ್ದಾರೆ. ನಟಿ ಇನ್ಸ್ಟಾಗ್ರಾಂ ನಲ್ಲಿ ಈ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡ ನಂತರ ಅಭಿಮಾನಿಗಳಿಂದ ಮೆಚ್ಚುಗೆ ದೊರೆತಿದೆ, ಆದರೆ ಇದೇ ವೇಳೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ ದಿಶಾ.

ಹಲವರು ಕಾಮೆಟ್ ಕಾಮೆಂಟ್ ಗಳಲ್ಲಿ ದಿಶಾ ಬಹುಶಃ ಉರ್ಫಿ(Urfi Javed) ಗೆ ಸ್ಪರ್ಧೆ ನೀಡಲು ಮುಂದಾದಂತೆ ಕಾಣುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಉರ್ಫಿ ಈಗಾಗಲೇ ಚಿತ್ರ ವಿಚಿತ್ರವಾದ ತುಂಡು ಉಡುಗೆ ತೊಟ್ಟು, ವಸ್ತುಗಳನ್ನು ಬಳಸಿ ದೇಹ ಮುಚ್ಚಿಕೊಂಡು ಫೋಟೋ ಶೂಟ್ ಗಳನ್ನು ಮಾಡಿಸಿಕೊಂಡು ಸಾಕಷ್ಟು ಸುದ್ದಿಯಾಗಿದ್ದಾರೆ. ಆದ್ದರಿಂದಲೇ ಬೇರೆ ಯಾವುದೇ ನಟಿಯರು ತುಂಡು ಬಟ್ಟೆ ತೊಟ್ಟರೆ ಸಾಕು ನೆಟ್ಟಿಗರು ಅವರನ್ನು ಉರ್ಸಿಗೆ ಹೋಲಿಕೆ ಮಾಡಿ ಟ್ರೋಲ್ ಮಾಡುವುದು ತೀರಾ ಸಾಮಾನ್ಯವಾಗಿದೆ.

Leave a Comment