ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರನ್ನು ಸ್ಮರಿಸಿ, ಅದ್ಭುತ ಗೌರವ ನೀಡಿದ ತೆಲುಗು ಚಿತ್ರ ತಂಡ

Written by Soma Shekar

Updated on:

---Join Our Channel---

ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಆಕಸ್ಮಿಕ ಹಾಗೂ ದು ರಂ ತ ಸಾವು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ನೋವಿನ ನೆನಪುಗಳಾಗಿ ಉಳಿದಿದೆ. ನಾಡು ಕಂಡಂತಹ ಅತ್ಯುತ್ತಮ ಹಾಗೂ ದಕ್ಷ ಐಎಎಸ್ ಅಧಿಕಾರಿ ಎನಿಸಿಕೊಂಡಿದ್ದ ಡಿ ಕೆ ರವಿ ಅವರನ್ನು ತೆಲುಗು ಸಿನಿಮಾ ಒಂದು ಸ್ಮರಿಸಿ, ಅವರಿಗೆ ಶ್ರದ್ಧಾಂಜಲಿ ಯನ್ನು ಕೋರಿದೆ. ಹೌದು ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿಯಾದ ಸಾಯಿ ಧರಂ ತೇಜ ನಾಯಕ ನಟನಾಗಿರುವ ಹೊಸ ಸಿನಿಮಾ ರಿಪಬ್ಲಿಕ್ ಚಿತ್ರತಂಡವೂ ಡಿಕೆ ರವಿ ಅವರನ್ನು ಸ್ಮರಿಸಿದೆ. ಈ ಸಿನಿಮಾ ಕೂಡ ಐಎಎಸ್ ಅಧಿಕಾರಿ ಹಾಗೂ ರಾಜಕೀಯ ನಾಯಕರ ನಡುವೆ ನಡೆಯುವ ಹೋರಾಟದ ಕಥೆಯಾಗಿದೆ.

ಈ ಸಿನಿಮಾ ತಂಡ ಇದೀಗ ಡಿ ಕೆ ರವಿ ಅವರನ್ನು ಸ್ಮರಿಸುತ್ತಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಕೋಲಾರದ ಡಿ ಸಿ ಆಗಿದ್ದ ಡಿಕೆ ರವಿ ಯವರು ಮರಳು ಮಾಫಿಯಾ ಮತ್ತು ಭೂಮಾಫಿಯಾ ವಿರುದ್ಧ ಸಮರವನ್ನೇ ಸಾರಿದ್ದರು. ಜನರನ್ನು ದೋಚುವುದೇ ಉದ್ಯೋಗ ಎಂದುಕೊಂಡಿದ್ದ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅವರು ಹೋರಾಟವನ್ನು ಸಾರಿದ್ದರು. ಮೂಲಭೂತ ಸೌಕರ್ಯ ವಿತರಣೆಯಲ್ಲಿ ಉಂಟಾಗಿದ್ದ ವಂಚನೆಯ ವಿರುದ್ಧ ಧ್ವನಿಯನ್ನು ಎತ್ತಿದ್ದರು ಎಂಬುದಾಗಿ ಸಿನಿಮಾ ತಂಡ ವಿವರಿಸಿದೆ.

ಭ್ರಷ್ಟರ ಕುತಂತ್ರದಿಂದ ಅವರನ್ನು ಆದಾಯ ತೆರಿಗೆ ಇಲಾಖೆಗೆ ಕೆಲವೇ ದಿನಗಳಲ್ಲಿ ವರ್ಗಾವಣೆ ಮಾಡಲಾಯಿತು. ಆದರೆ ಅದರಿಂದಾಗಿ ರವಿ ಅವರ ಹೋರಾಟದ ಕಿಚ್ಚು ನಂದಲಿಲ್ಲ. ಅವರು ಅದೇ ಇಲಾಖೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ತೆರಿಗೆ ವಂಚಕ ರಾದ ವ್ಯಾಪಾರಿಗಳನ್ನು ಪತ್ತೆ ಹಚ್ಚಿದ್ದರು, ಹಲವರಿಗೆ ನೋಟಿಸ್ ಜಾರಿ ಮಾಡಿದರು. ಕೆಲವೇ ತಿಂಗಳುಗಳಲ್ಲಿ ದೊಡ್ಡಮಟ್ಟದ ತೆರಿಗೆ ಹಣವನ್ನು ಸಂಗ್ರಹಿಸಿದರು ಎಂದು ರವಿ ಅವರ ಸಾಧನೆಯನ್ನು ಹೊಗಳಲಾಗಿದೆ.

ರಾಜಕಾರಣಿಗಳು, ರೌಡಿಗಳು ಹಾಗೂ ಮಾಫಿಯಾದವರಿಂದ ಪ್ರತಿದಿನವೂ ಅವರು ಬೆದರಿಕೆಗಳನ್ನು ಎದುರಿಸುತ್ತಿದ್ದರು. ಇಂತಹ ವ್ಯಕ್ತಿಗೆ ಕೇವಲ 35 ನೇ ವಯಸ್ಸಿನಲ್ಲಿ ತಾವು ಬಂದೊದಗಿತ್ತು. ಹಿಂದೊಮ್ಮೆ ಮಧ್ಯಪ್ರದೇಶದಲ್ಲಿ ವ್ಯಾಪಂ ಹಗರಣದಲ್ಲಿ 82 ವಿಷಲ್ ಬ್ಲೋವರ್‌ಗಳು ಸತ್ತಾಗ ಎಲ್ಲರ ಸಾವು ಆತ್ಮಹತ್ಯೆ, ನೈಸರ್ಗಿಕ ಸಾವು ಎಂದು ಘೋಷಿಸಿದ್ಎ ಕೇಂದ್ರ ತನಿಖಾ ಸಂಸ್ಥೆಗಳು , ಡಿ.ಕೆ.ರವಿ ಸಾವನ್ನು ಸಹ ಆತ್ಮಹತ್ಯೆ ಎಂದೇ ಹೇಳಿದವು.

ಡಿ ಕೆ ರವಿ ಅಂತಹ ಸೈನಿಕರ ಸಾವಿಗೆ ಕಾರಣವೇನು? ಅದಕ್ಕೆ ಕಾರಣರಾದವರು ಯಾರು?? ಎಂಬುದನ್ನು ಹುಡುಕಿ ಅವರಿಗೆ ಶಿಕ್ಷೆ ನೀಡಲಾಗದ ಸ್ಥಿತಿ ಕಾನೂನು ವ್ಯವಸ್ಥೆಯದ್ದಾಗಿದೆ. ಆದರೆ ಅವರು ಸಾವನ್ನು ಕೂಡಾ ಗೆದ್ದು, ಅದರಿಂದಾಚೆಗೆ ನಮ್ಮೊಂದಿಗೆ ಇರುವ ಸೈನಿಕ ಎಂದು ಹೇಳುವ ಮೂಲಕ ರಿಪಬ್ಲಿಕ್ ಚಿತ್ರತಂಡವು ದಿವಂಗತ ಐಎಎಸ್ ಅಧಿಕಾರಿ ಕೆ ರವಿ ಅವರಿಗೆ ಶ್ರದ್ಧಾಂಜಲಿ ಎಂದು ಕೋರಿದೆ.

ಡಿ.ಕೆ. ರವಿ ಅವರ ಜೀವನವನ್ನು ಕುರಿತಾದ ಕಥೆಯನ್ನಾಧರಿಸಿದ ಸಿನಿಮಾ ಕನ್ನಡದಲ್ಲಿ ಬಂದಿದೆ‌. ದಕ್ಷ ಅಧಿಕಾರಿಯಾಗಿದ್ದು ಇವರು ಮಡಿದಾಗ ಕೋಲಾರ ಜಿಲ್ಲೆಯ ಜನರು ಮಾತ್ರವಲ್ಲದೇ ಅನೇಕ ಮಂದಿ ದುಃಖ ಪಟ್ಟಿದ್ದರು. ಡಿ ಕೆ. ರವಿ ಅವರ ಸಾವಿನ ಸುತ್ತ ನೂರು ಅನುಮಾನಗಳು, ಸಾವಿರ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಅವೆಲ್ಲವುಗಳು ಕೂಡಾ ಪ್ರಶ್ನೆ ಹಾಗೂ ಅನುಮಾನ ಗಳಾಗಿ ಉಳಿದಿವೆ‌

Leave a Comment