ದಕ್ಷಿಣ ಸಿನಿಮಾ ರಂಗಕ್ಕೆ ಶಾ ಕ್ ಕೊಟ್ಟ ಲೇಡಿ ಸೂಪರ್ ಸ್ಟಾರ್ ನಯನತಾರ: ಬಾಲಿವುಡ್ ಗೆ ಎಂಟ್ರಿ ಕೊಟ್ಟ ಎಫೆಕ್ಟಾ ಇದು?

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾ ರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ನಟಿ ನಯನತಾರಾ. ನಟಿ ನಯನತಾರಾ ನಂತರ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಸದ್ದು ಮಾಡಿದ ಬಹಳಷ್ಟು ಜನ ನಟಿಯರು ಈಗಾಗಲೇ ಸಿನಿಮಾಗಳಿಂದ ನಾಪತ್ತೆಯಾಗಿದ್ದಾರೆ, ಇಲ್ಲವೇ ಅಲ್ಲೊಂದು ಇಲ್ಲೊಂದು ಸಿನಿಮಾವನ್ನು ಮಾಡುತ್ತಿದ್ದಾರೆ. ಆದರೆ ನಟಿ ನಯನತಾರಾ ಮಾತ್ರ ಇನ್ನೂ ಸ್ಟಾರ್ ನಟಿಯಾಗಿ, ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ನಟಿ ನಯನತಾರ ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಸ್ಟಾರ್ ನಟರ ಪಕ್ಕ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ.

ನಯನತಾರಾ ಸ್ಟಾರ್ ನಟರ ಜೊತೆ ನಟಿಸಿದ್ದರೂ ತಮ್ಮ ಪಾತ್ರಕ್ಕೆ ಅಲ್ಲೊಂದು ವಿಶೇಷತೆ ಇರುವಂತೆ ಎಚ್ಚರಿಕೆ ವಹಿಸಿ ಪಾತ್ರದ ಆಯ್ಕೆ ಮಾಡಿಕೊಂಡಿರುತ್ತಾರೆ. ದಕ್ಷಿಣ ಸಿನಿಮಾ ರಂಗದಲ್ಲಿ ವಿಶೇಷವಾಗಿ ತೆಲುಗು, ತಮಿಳಿನ ಎಲ್ಲಾ ಸ್ಟಾರ್ ನಟರ ಜೊತೆಗೆ ನಟಿಸಿರುವ ನಟಿ, ವೈವಿದ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವುದು ಮಾತ್ರವೇ ಅಲ್ಲದೇ ಅಪಾರ ಅಭಿಮಾನಿಗಳನ್ನು ಸಹಾ ಪಡೆದುಕೊಂಡಿದ್ದಾರೆ. ಈಗ ಇವೆಲ್ಲವುಗಳ ನಡುವೆಯೇ ನಯನತಾರ ಹೊಸದೊಂದು ದಾಖಲೆ ಮಾಡಲು ಸಜ್ಜಾಗುತ್ತಿದ್ದಾರೆ. ಅವರ ಅಭಿಮಾನಿಗಳು ಈ ವಿಷಯ ಕೇಳಿ ಥ್ರಿಲ್ ಆಗಿದ್ದಾರೆ.

ಬಾಕಿವುಡ್ ನಲ್ಲಿ ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವುದು ಗೊತ್ತಿರುವ ವಿಷಯವೇ ಆಗಿದೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಸಾಲಿನಲ್ಲಿ ಸದ್ಯಕ್ಕೆ ದೀಪಿಕಾ ಪಡುಕೋಣೆ ಮತ್ತು ಆಲಿಯಾ ಭಟ್ ಇಬ್ಬರೂ ಇದ್ದು, ಇವರು ಹತ್ತು ಕೋಟಿಗಿಂತಲೂ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ. ಈಗ ಹೀಗೆ ಬಾಲಿವುಡ್ ನಟಿಯರ ಹಾಗೆ ದೊಡ್ಡ ಮೊತ್ತದ ಸಂಭಾವನೆ ಪಡೆದ ನಟಿಯಾಗಲು ಹೊರಟಿದ್ದಾರೆ ನಟಿ ನಯನತಾರಾ. ಅವರು ತಮ್ಮ ಹೊಸ ಸಿನಿಮಾಕ್ಕೆ ಪಡೆಯಲಿರುವ ಸಂಭಾವನೆ ವಿಚಾರ ಈಗ ಸಖತ್ ಸುದ್ದಿಯಾಗಿದೆ.

ಹೌದು, ದಕ್ಷಿಣ ಸಿನಿಮಾ ರಂಗದ ನಟಿಯೊಬ್ಬರು ಎಲೈಟ್ ಕ್ಲಬ್ ಎಂಟ್ರಿ ಕೊಡುವುದು ಎಂದರೆ ಅದು ಸುಲಭದ ಮಾತಲ್ಲ. ಆದರೆ ಈಗ ಈ ಮಾತನ್ನು ನಿಜ ಮಾಡಲು ಹೊರಟಿದ್ದಾರೆ ನಯನತಾರ. ಈ ನಟಿಯು ತಾವು ನಟಿಸುತ್ತಿರುವ ತಮ್ಮ 75 ನೇ ಸಿನಿಮಾಕ್ಕೆ ಬರೋಬ್ಬರಿ 10 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಈ ಮೂಲಕ ಅಷ್ಟೊಂದು ದೊಡ್ಡ ಮೊತ್ತದ ಸಂಭಾವನೆ ಪಡೆದ ದಕ್ಷಿಣದ ಮೊದಲ ನಟಿಯೂ ಆಗುತ್ತಿದ್ದಾರೆ ನಯನತಾರಾ. ಪ್ರಸ್ತುತ ನಟಿಯು ಬಾಲಿವುಡ್ ನಟ ಶಾರೂಖ್ ಖಾನ್ ನಾಯಕನಾಗಿ ನಟಿಸುತ್ತಿರುವ ಜವಾನ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.

Leave a Comment