ಆಸ್ಕರ್ ಅಂಗಳದಲ್ಲಿ RRR ಜಯಭೇರಿ: ಹೊಸ ಇತಿಹಾಸ ರಚಿಸಿದ ನಾಟು ನಾಟು ಹಾಡು

Written by Soma Shekar

Published on:

---Join Our Channel---

Kannada News: ತ್ರಿಬಲ್ ಆರ್(RRR) ಸಿನಿಮಾ ಭಾರತದ ಸಿನಿಮಾ ರಂಗಕ್ಕೊಂದು ಹೊಸ ಮೆರುಗನ್ನು ನೀಡಿದೆ ಎನ್ನುವುದರಲ್ಲಿ ಎರಡು ಮಾತು ಖಂಡಿತ ಇಲ್ಲ. ವಿಶ್ವ ಸಿನಿಮಾ ರಂಗ ಕೂಡಾ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ತ್ರಿಬಲ್ ಆರ್ ಇದೀಗ ವಿಶ್ವ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿ ಆಸ್ಕರ್(Oscar) ಅನ್ನು ಮುಡಿಗೇರಿಸಿಕೊಂಡು ಬೀಗುತ್ತಿದೆ. ಹೌದು, ತ್ರಿಬಲ್ ಆರ್ ಸಿನಿಮಾದ ನಾಟು ನಾಟು(Natu Natu song) ಹಾಡು ಆಸ್ಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, ಹೊಸ ಇತಿಹಾಸವನ್ನು ಬರೆದಿದೆ. ಭಾರತೀಯ ಸಿನಿಮಾ ರಂಗದ ಸೆಲೆಬ್ರಿಟಿಗಳು ಸಹಾ ಈ ಸಂತೋಷವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಎಸ್‌ಎಸ್ ರಾಜಮೌಳಿ (SS Rajamouli) ಅವರ ಆರ್‌ ಆರ್‌ ಆರ್‌ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ದಿ ಅಪ್ಲಾಸ್ (ಟೆಲ್ ಇಟ್ ಲೈಕ್ ಎ ವುಮನ್), ಹೋಲ್ಡ್ ಮೈ ಹ್ಯಾಂಡ್ (ಟಾಪ್ ಗನ್ ಮೇವರಿಕ್), ಲಿಫ್ಟ್ ಮಿ ಅಪ್ (ಬ್ಲ್ಯಾಕ್ ಪಥರ್ ವಕಾಂಡಾ ಫಾರೆವರ್), ಮತ್ತು ದಿಸ್ ಈಸ್ ಎ ಲೈಫ್ (ಎವೆರಿಥಿಂಗ್ ಎವೆರಿಥಿಂಗ್ ಆಲ್ ಅಟ್) ಒಳಗೊಂಡಿರುವ ಇತರೆ ನಾಮಿನೇಷನ್ ಆಗಿದ್ದ ಹಾಡುಗಳನ್ನು ಹಿಂದೆ ಹಾಕಿ ನಾಟು ನಾಟು ಹಾಡು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ನಮಸ್ಕಾರ ಮಾಡುತ್ತಾ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಮೂಲಕ ಈ ಚಲನಚಿತ್ರವು ಯಾವುದೇ ಭಾರತೀಯ ನಿರ್ಮಾಣ ಸಂಸ್ಥೆಯಿಂದ ನಿರ್ಮಿತವಾಗಿ, ಪ್ರಶಸ್ತಿಯನ್ನು ಗೆದ್ದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2009 ರಲ್ಲಿ ಇದೇ ವಿಭಾಗದಲ್ಲಿ ಸ್ಲಮ್‌ ಡಾಗ್ ಮಿಲಿಯನೇರ್‌ನ ಜೈ ಹೋ ಗೆ ಪ್ರಶಸ್ತಿಯನ್ನು ಗೆದ್ದ ನಂತರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಹಾಡು ಇದಾಗಿದೆ. ಆದರೆ ಸ್ಲಮ್ ಡಾಗ್ ಮಿಲಿಯನೇರ್ ನ ನಿರ್ಮಾಣ ಸಂಸ್ಥೆ ಭಾರತದ ಮೂಲದ್ದಾಗಿರಲಿಲ್ಲ. ಭಾರತ ಮೂಲದ ನಿರ್ಮಾಣ ಸಂಸ್ಥೆ ಯಿಂದ ನಿರ್ಮಿತವಾಗಿ ಪ್ರಶಸ್ತಿ ಗೆದ್ದ ಮೊದಲ ಹಾಡು ನಾಟು ನಾಟು ಆಗಿದೆ.

Leave a Comment