ತೆರೆ ಮೇಲೆ ಬರಲಿದೆ ರತನ್ ಟಾಟಾ ಬಯೋಪಿಕ್: ಟಾಟಾ ಪಾತ್ರಕ್ಕೆ ಜೀವ ತುಂಬುವ ಆ ನಟ ಯಾರು?

Written by Soma Shekar

Published on:

---Join Our Channel---

ಕಮರ್ಷಿಯಲ್ ಸಿನಿಮಾ ನಡುವೆಯೇ ಇತ್ತೀಚಿನ ವರ್ಷಗಳಲ್ಲಿ ದಿಗ್ಗಜರೆನಿಸಿದ ಸಾಧಕರ ಬಯೋಪಿಕ್ ಅಥವಾ ಜೀವನಾಧಾರಿತ ಕತೆಗಳನ್ನು ಆಧರಿಸಿದ ಕತೆಗಳು ಸಹಾ ಸಿನಿಮಾ ಆಗಿ ಜನರ ಮೆಚ್ಚುಗೆ ಪಡೆದು ಯಶಸ್ಸನ್ನು ಪಡೆದುಕೊಳ್ಳುತ್ತಿವೆ. ಈಗ ಅದೇ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಉದ್ಯಮಿ ಹಾಗೂ ಜನರ ಅಪಾರವಾದ ಗೌರವವನ್ನು ಪಡೆದುಕೊಂಡಿರುವ ರತನ್ ಟಾಟಾ ಅವರ ಜೀವನ ಸಿನಿಮಾ ಆಗಿ ತೆರೆಯ ಮೇಲೆ ಬರಲು ಸಜ್ಜಾಗಿದೆ ಎನ್ನುವ ವಿಷಯ ಎಲ್ಲರ ಗಮನವನ್ನು ಸೆಳೆದಿದೆ. ಈ ಹೊಸ ಅಪ್ಡೇಟ್ ಹೊರ ಬಂದ ಮೇಲೆ ಸಿನಿ ಪ್ರೇಮಿಗಳು ಬಹಳ ಎಕ್ಸೈಟ್ ಆಗಿದ್ದು, ಈ ಹೊಸ ಸಿನಿಮಾ ಬಗ್ಗೆ ತಿಳಿಯಲು ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸೂರರೈ ಪೊಟ್ರು ಸಿನಿಮಾ ನಿರ್ದೇಶನದ ಮೂಲಕ ನಿರ್ದೇಶಕಿ ಸುಧಾ ಕೊಂಗರ ದೊಡ್ಡ ಜನಪ್ರಿಯತೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದೀಗ ದಕ್ಷಿಣದಲ್ಲಿ ಸೂಪರ್ ಹಿಟ್ ಆದ ಸೂರರೈ ಪೊಟ್ರು ಸಿನಿಮಾವನ್ನು ಅವರು ಹಿಂದಿಗೂ ಸಹಾ ರೀಮೇಕ್ ಮಾಡುತ್ತಿದ್ದು, ಅದರ ನಡುವೆಯೇ ಈಗ ಸುಧಾ ಕೊಂಗರ ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಅವರ ಹೊಸ ಸಿನಿಮಾದ ಅಪ್ಡೇಟ್ ಹೊರ ಬಂದಿದ್ದು, ಭಾರತ ಮಾತ್ರವೇ ಅಲ್ಲದೇ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿರುವ ರತನ್ ಟಾಟಾ ಅವರ ಜೀವನವನ್ನು ಆಧರಿಸಿದ ಬಯೋಪಿಕ್ ನಿರ್ದೇಶನ ಮಾಡಲು ಈ ಸಜ್ಜಾಗಿದ್ದಾರೆ.

ಹಿಂದಿಯಲ್ಲಿ ಸುಧಾ ಕೊಂಗರ ಅವರು ನಿರ್ದೇಶನ ಮಾಡುತ್ತಿರುವ ಸೂರರೈ ಪೊಟ್ರು ಸಿನಿಮಾದ ರೀಮೇಕ್ ನಲ್ಲಿ ನಟ ಅಕ್ಷಯ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ದೇಶದ ಪ್ರಮುಖ ಹಾಗೂ ಹೆಸರಾಂತ ಉದ್ಯಮಿ ರತನ್ ಟಾಟಾ ಅವರ ಬಯೋಪಿಕ್ ಗೆ ನಿರ್ದೇಶಕಿ ಚಾಲನೆ ನೀಡಲಿದ್ದಾರೆ. ರತನ್ ಟಾಟಾ ಅವರ ಜೀವನವನ್ನು ಸಿನಿಮಾ ಮಾಡುವುದು ಖಂಡಿತ ಒಂದು ಹೆಮ್ಮೆಯ ವಿಷಯವಾಗಿದೆ. ಅಲ್ಲದೇ ಈ ಸಿನಿಮಾ ಮೂಲಕ ಟಾಡಾ ಅವರ ಜೀವನದ ಕುರಿತಾಗಿ ಜನರಿಗೆ ತಿಳಿಯದೇ ಇರುವ ಒಂದಷ್ಟು ವಿಶೇಷ ವಿಚಾರಗಳನ್ನು ಜನರ ಮುಂದೆ ತರುವ ಪ್ರಯತ್ನ ಸಹಾ ಮಾಡಲಾಗುವುದು ಎನ್ನಲಾಗಿದೆ.

ಟಾಟಾ ಅವರ ಬಗ್ಗೆ ಸಮಾಜಕ್ಕೆ ಗೊತ್ತಿರದ ಒಂದಷ್ಟು ವಿಚಾರಗಳನ್ನು ತಿಳಿಸುವುದು ಸಿನಿಮಾ ಉದ್ದೇಶವಾಗಲಿದೆ. ಪ್ರಸ್ತುತ ಸಿನಿಮಾ ಸ್ಕ್ರಿಪ್ಟ್ ಕೆಲಸವು ಪ್ರಗತಿಯಲ್ಲಿದೆ. ಆದರೆ ಎಲ್ಲದಕ್ಕೂ ಹೆಚ್ಚು ಆಸಕ್ತಿಯನ್ನು ಮೂಡಿಸಿರುವ ಪ್ರಶ್ನೆ ರತನ್ ಟಾಟಾ ಅವರ ಪಾತ್ರವನ್ನು ಪೋಷಿಸಲಿರುವ ನಟ ಯಾರು ? ಎನ್ನುವುದಾಗಿದೆ‌. ಮಾಹಿತಿಗಳ ಪ್ರಕಾರ ನಿರ್ದೇಶಕಿ ಸುಧಾ ಕೊಂಗರ ಅವರ ಆಯ್ಕೆ ತಮಿಳು ನಟ ಸೂರ್ಯ ಅಥವಾ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಇಬ್ಬರಲ್ಲಿ ಒಬ್ಬರು ಎನ್ನಲಾಗುತ್ತಿದ್ದು, ಯಾರ ರತನ್ ಟಾಟಾ ಪಾತ್ರಕ್ಕೆ ಜೀವ ತುಂಬುತ್ತಾರೆ ಎನ್ನುವುದಕ್ಕೆ ಅಧಿಕೃತ ಘೋಷಣೆ ವರೆಗೆ ಕಾಯಬೇಕಾಗಿದೆ.

Leave a Comment