ತಿರುಪತಿಯ ಯಾತ್ರೆ 4-5 ದಿನ ಮುಂದೂಡಿ: ಭಕ್ತರಿಗೆ ಟಿಟಿಡಿ ಮಾಡಿದ ಮನವಿ, ಇದಕ್ಕೆ ಕಾರಣವೇನು?

Written by Soma Shekar

Published on:

---Join Our Channel---

ಕಲಿಯುಗ ಪ್ರತ್ಯಕ್ಷ ದೈವ ಎನಿಸಿರುವ ತಿರುಮಲ ತಿರುಪತಿಯ ಶ್ರೀವೆಂಕಟೇಶ್ವರ ಸ್ವಾಮಿಯ ಭಕ್ತರು ದೇಶದಲ್ಲಿ ಮಾತ್ರವೇ ಅಲ್ಲದೇ ವಿದೇಶಗಳಲ್ಲಿ ಕೂಡಾ ಇದ್ದಾರೆ. ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿರುವ ತಿರುಮಲ ಶ್ರೀ ಕ್ಷೇತ್ರಕ್ಕೆ ಪ್ರತಿ ದಿನವೂ ಸಹಾ ಅಸಂಖ್ಯಾತ ಭಕ್ತ ಸಮೂಹವು ವೆಂಕಟೇಶ್ವರನ ದರ್ಶನಕ್ಕಾಗಿ ಆಗಮಿಸುತ್ತದೆ. ಬರುವ ಭಕ್ತರಲ್ಲಿ ಅನೇಕ ಮಂದಿ ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಹತ್ತಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಪಡೆಯುವರು. ತಿರುಮಲದ ಪುಣ್ಯ ವಾತಾವರಣದಲ್ಲಿ ಪುನೀತರಾಗುವರು.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಸದಾ ಹೆಚ್ಚಾಗಿಯೇ ಇರುತ್ತದೆ. ಕೋವಿಡ್ ನ ಕಾಲದಲ್ಲಿ ಅಳವಡಿಸಲಾಗಿದ್ದ ಲಾಕ್ ಡೌನ್ ಕಾರಣದಿಂದಾಗಿ ತಿರುಮಲದಲ್ಲಿ ಭಕ್ತರಿಗೆ ಕೆಲವು ತಿಂಗಳುಗಳ ವೆಂಕಟೇಶ್ವರ ನ ದರ್ಶನಕ್ಕೆ ಅವಕಾಶ ಇರಲಿಲ್ಲ. ಅನಂತರ ಲಾಕ್ ಡೌನ್ ತೆರವುಗೊಂಡ ಮೇಲೆ ಹಂತ ಹಂತವಾಗಿ ಭಕ್ತರಿಗೆ ಅವಕಾಶ ನೀಡುತ್ತಾ ಬಂದು, ಇತ್ತೀಚಿಗೆ ಸರ್ವ ದರ್ಶನಕ್ಕೂ ಸಹಾ ಹಿಂದಿನಂತೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗಿದೆ.

ಸರ್ವದರ್ಶನಕ್ಕೆ ಅನುಮತಿ ದೊರೆತ ನಂತರ ಇತ್ತೀಚಿನ ದಿನಗಳಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಪ್ರತಿದಿನ ತಿರುಮಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ನೋಡಿದ ಟಿಟಿಡಿ ಇದೀಗ ನಾಲ್ಕೈದು ದಿನಗಳ ಕಾಲ ತಿರುಪತಿಗೆ ಬರುವುದನ್ನು ಮುಂದೂಡಿ ಎನ್ನುವ ಮನವಿಯೊಂದನ್ನು ಮಾಡಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರ ಕ್ಯೂ ಸುಮಾರು ಎರಡು ಕಿಮೀ ಗಳ ವರೆಗೂ ಇತ್ತು ಎನ್ನಲಾಗಿದೆ. ಅಲ್ಲದೇ ಕ್ಯೂ ನಲ್ಲಿ ಇದ್ದವರಿಗೆ 48 ಗಂಟೆಗಳ ನಂತರ ಸ್ವಾಮಿಯ ದರ್ಶನವಾಗಿದೆ ಎನ್ನಲಾಗಿದೆ.

ತಿರುಪತಿಯಲ್ಲಿ ಲಗೇಜ್ ಕೌಂಟರ್, ಲಡ್ಡು ಕೌಂಟರ್ ,ಬಸ್ ನಿಲ್ದಾಣ, ಅನ್ನ ಪ್ರಸಾದ ಕಾಂಪ್ಲೆಕ್ಸ್ ಗಳ ಬಳಿಯೂ ಸಹಾ ಭಕ್ತರ ಸಂಖ್ಯೆ ವಿಪರೀತವಿದೆ ಎನ್ನಲಾಗಿದೆ. ತಿರುಮಲದಲ್ಲಿ ರಸ್ತೆಗಳಲ್ಲಿ ಸಹಾ ಜನ ಕ್ಯೂ ಗಳಲ್ಲಿ ನಿಲ್ಲುವಂತಾಗಿದೆ. ಭಕ್ತರು ದೊಡ್ಡ ಸಂಖ್ಯೆಯಲ್ಲಿ ತಿರುಮಲಕ್ಕೆ ಆಗಮಿಸುತ್ತಿರುವ ಕಾರಣದಿಂದ ಟಿಟಿಡಿ ಭಕ್ತರು ತಮ್ಮ ಪ್ರಯಾಣವನ್ನು ಸ್ವಲ್ಪ ದಿನಗಳ ಕಾಲ‌ ಮುಂದೂಡುವಂತೆ ಮನವಿಯನ್ನು ಮಾಡಿದೆ.

Leave a Comment