ತಮಿಳು ನಟ ವಿಶಾಲ್ ಗೆ ಶಾಕ್ ಕೊಟ್ಟ ಹೈಕೋರ್ಟ್: ಮೂರು ವಾರಗಳ ಗಡುವು ನೀಡಿದ ಕೋರ್ಟ್!!

Written by Soma Shekar

Published on:

---Join Our Channel---

ಸಿನಿಮಾ ಸೆಲೆಬ್ರಿಟಿಗಳು ಆಗಾಗ ಯಾವುದಾದರೊಂದು ವಿ ವಾ ದದ ವಿಚಾರವಾಗಿ ಸುದ್ದಿಯಾಗುವುದು ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯ ಎನಿಸಿದೆ. ಒಂದಲ್ಲಾ ಒಂದು ವಿಷಯದಲ್ಲಿ ಸಮಸ್ಯೆ ಎದುರಾಗಿ, ಅದು ಕೋರ್ಟ್ ಮೆಟ್ಟಿಲೇರಿ ದೊಡ್ಡ ಮಟ್ಟದಲ್ಲಿ ಚರ್ಚಿತ ವಿಷಯವಾಗಿ ಮಾರ್ಪಾಟಾಗುತ್ತದೆ. ಪ್ರಸ್ತುತ ಅಂತಹುದೇ ಒಂದು ಸಮಸ್ಯೆಗೆ ಸಿಲುಕಿದ್ದಾರೆ ತಮಿಳು ನಟ ವಿಶಾಲ್. ನಟ ವಿಶಾಲ್ ಗೆ ಚೆನ್ನೈ ಹೈಕೋರ್ಟ್ ಮೂರು ವಾರಗಳ ಸಮಯವನ್ನು ನೀಡುತ್ತಾ, ಕೋರ್ಟ್ ರಿಜಿಸ್ಟ್ರಾರ್ ಜನರಲ್ ಹೆಸರಿನಲ್ಲಿ 15 ಕೋಟಿ. ರೂ. ಡೆಪಾಸಿಟ್ ಮಾಡುವಂತೆ ಆದೇಶವನ್ನು ನೀಡಿದೆ.

ಹೌದು, ನಟ ವಿಶಾಲ್ ತಮ್ಮ ಬಳಿ ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸದೇ ಹೊಸ ಸಿನಿಮಾವನ್ನು ಪ್ರಾರಂಭ ಮಾಡಿದ್ದಾರೆ ಎಂದು ಲೈಕಾ ಸಂಸ್ಥೆ ಆ ರೋ ಪ ವನ್ನು ಮಾಡಿದೆ. ಲೈಕಾ ಸಂಸ್ಥೆಯು ವಿಶಾಲ್ ಕಡೆಯಿಂದ ತಮಗೆ ಬಡ್ಡಿಯನ್ನು ಸಹಾ ಸೇರಿಸಿ ಒಟ್ಟು 21.68 ಕೋಟಿ ರೂಪಾಯಿಗಳ ಮೊತ್ತವನ್ನು ರಿಕವರಿ ಮಾಡಿಕೊಳ್ಳಲು ಕೋರ್ಟ್ ಆದೇಶವನ್ನು ನೀಡಬೇಕು ಎನ್ನುವ ಮನವಿಯನ್ನು ಮಾಡಿಕೊಂಡಿದೆ. ನಿರ್ಮಾಣ ಸಂಸ್ಥೆಯ ಪಿಟೀಷನ್ ಅನ್ನು ಜಸ್ಟಿಸ್ ಸೆಂಥಿಲ್ ಕುಮಾರ್ ರಾಮಮೂರ್ತಿ ಇತ್ತೀಚಿಗೆ ಮಧ್ಯಂತರ ಆದೇಶ ಜಾರಿ ಮಾಡಿದ್ದಾರೆ.

ಕೋರ್ಟ್ ನ ಪ್ರಧಾನ ರಿಜಿಸ್ಟ್ರಾರ್ ಜನರಲ್ ಹೆಸರಿನಲ್ಲಿ ನಟ 15 ಕೋಟಿ ರೂ.ಗಳನ್ನು ಮೂರು ವಾರಗಳ ಸಮಯದೊಳಗೆ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಬೇಕು ಎನ್ನುವ ಆದೇಶವನ್ನು ನೀಡಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 22 ಕ್ಕೆ ಕೋರ್ಟ್ ಮುಂದೂಡಿದೆ. ವಿಶಾಲ್ ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಹಣ ಹಿಂತಿರುಗಿಸದೇ ವೀರಮೇ ವಾಗೈ ಸುಡು ಸಿನಿಮಾವನ್ನು ಬಿಡುಗಡೆಗೆ, ಸ್ಯಾಟಲೈಟ್, ಓಟಿಟಿ ಹಕ್ಕುಗಳನ್ನು ಪಡೆಯಲು ಸಿದ್ಧವಾಗಿದ್ದಾರೆ.

ವಿಶಾಲ್ ಅವರ ಮಾಡಲು ಹೊರಟಿರುವ ಈ ಕಾರ್ಯಗಳ ಮೇಲೆ ನಿಷೇಧವನ್ನು ಸೇರಬೇಕೆಂದು, ಲೈಕಾ ಸಂಸ್ಥೆಯು ಹೈಕೋರ್ಟ್ ನ ಮೊರೆ ಹೋಗಿತ್ತು. ನ್ಯಾಯಾಧೀಶರಾದ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರು, ಅಗ್ರಿಮೆಂಟ್ ನಲ್ಲಿ ಲೈಕಾ ಸಂಸ್ಥೆಗೆ ಸಾಲ ಮರುಪಾವತಿ ಮಾಡಬೇಕಾಗಿರುವ ವಿಷಯದ ಪ್ರಸ್ತಾವನೆ ಇರುವುದನ್ನು ಒತ್ತಿ ಹೇಳಿದ್ದಾರೆ. ಆದರೆ ವಿಶಾಲ್ ಅವರ ಪರ ವಕೀಲರು ಲೈಕಾ ಸಂಸ್ಥೆ ಮಾಡಿರುವ ಆ ರೋ ಪವು ತಪ್ಪು ಎಂದು ವಾದಿಸಿದ್ದಾರೆ.

Leave a Comment