ತನ್ನ ಪಾತ್ರದಿಂದ ಹೊರ ನಡೆದ ಪಾರು ಸೀರಿಯಲ್ ಖ್ಯಾತಿಯ ನಟಿ ಮೋಕ್ಷಿತಾ: ಶಾಕಿಂಗ್ ಸುದ್ದಿ ನೀಡಿದ ನಟಿ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಪಾರು ಕೂಡಾ ಒಂದಾಗಿದೆ. ಹಿರಿಯ ನಟ ವಿನಯ ಪ್ರಸಾದ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಾರು ವರ್ಷಗಳಿಂದ ಕಿರುತೆರೆಯ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಪಾರು ಸೀರಿಯಲ್ ನಲ್ಲಿ ನಾಯಕಿ ಪಾರು ಪಾತ್ರ ಜನ ಮೆಚ್ಚುಗೆಯ ಪಾತ್ರವಾಗಿದೆ. ಈ ಪಾತ್ರದ ಮೂಲಕವೇ ಕಿರುತೆರೆಗೆ ಎಂಟ್ರಿ ನೀಡಿದವರು ನಟಿ ಮೋಕ್ಷಿತಾ ಪೈ ಅವರು. ಪಾರು ಪಾತ್ರ ಅವರಿಗೆ ಇಡೀ ರಾಜ್ಯದಲ್ಲಿ ಅಪಾರ ಜನ ಮೆಚ್ಚುಗೆಯನ್ನು ತಂದು ಕೊಟ್ಟಿದೆ ಹಾಗೂ ಆ ಪಾತ್ರವು ಅನೇಕರ ಅಚ್ಚು ಮೆಚ್ಚಿನ ಪಾತ್ರವೂ ಆಗಿದೆ. ಮೋಕ್ಷಿತ ಅವರು ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿದ್ದು, ದೊಡ್ಡ ಸಂಖ್ಯೆಯ ಹಿಂಬಾಲಕರನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯ ಮೂಲಕ ಜನಪ್ರಿಯತೆ ಪಡೆದುಕೊಂಡ ದೊಡ್ಡ ಸಂಖ್ಯೆಯ ನಟ, ನಟಿಯರು ತೆಲುಗು ಮತ್ತು ತಮಿಳು ಕಿರುತೆರೆಯ ಜನಪ್ರಿಯ ಸೀರಿಯಲ್ ಗಳಲ್ಲಿ ನಾಯಕ, ನಾಯಕಿ, ಖಳ ನಟರು ಹಾಗೂ ಇನ್ನಿತರೆ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ನೆರೆ ರಾಜ್ಯಗಳಲ್ಲಿ ಸಹಾ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇದೇ ಹಾದಿಯಲ್ಲಿ ಹೆಜ್ಜೆ ಹಾಕಿದ್ದ ಪಾರು ಸೀರಿಯಲ್ ಖ್ಯಾತಿಯ ನಟಿ ಮೋಕ್ಷಿತಾ ಸಹಾ ತಮಿಳಿನ ಮೀನಾಕ್ಷಿ ಪೊನ್ನುಂಗಾ ( ಮೀನಾಕ್ಷಿಯ ಹೆಣ್ಮಕ್ಕಳು ) ಸೀರಿಯಲ್ ನಲ್ಲಿ ಶಕ್ತಿ ಎನ್ನುವ ಪಾತ್ರವನ್ನು ನಿರ್ವಹಿಸುತ್ತಿದ್ದರು. ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ತಮಿಳು ರಿಮೇಕ್ ಮೀನಾಕ್ಷಿ ಪೊನ್ನುಂಗಾ.

ಕನ್ನಡದಲ್ಲಿ ಪುಟ್ಟಕ್ಕನ ಮಗಳು ಸ್ನೇಹ ಪಾತ್ರ ತಮಿಳಿನಲ್ಲಿ ಮೀನಾಕ್ಷಿ ಮಗಳು ಶಕ್ತಿ. ಇದೇ ಪಾತ್ರದಲ್ಲಿ ಮೋಕ್ಷಿತಾ ಅವರು ಕಾಣಿಸಿಕೊಂಡಿದ್ದರು. ಆದರೆ ಈಗ ನಟಿ ತಮಿಳು ಸೀರಿಯಲ್ ನಿಂದ ನಟಿ ಹೊರ ಬಂದಿದ್ದಾರೆ. ಈ ವಿಷಯವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಮೋಕ್ಷಿತಾ ಅವರು ತಿಳಿಸಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ತಾನು ಸೀರಿಯಲ್ ನಿಂದ ಹೊರ ಬಂದಿರುವುದಾಗಿ, ಶಕ್ತಿ ಪಾತ್ರದಲ್ಲಿ ಮತ್ತು ಮೀನಾಕ್ಷಿ ಪೊನ್ನುಂಗಾ ಸೀರಿಯಲ್ ನಲ್ಲಿ ಮಾಡಿದ್ದು ಒಂದು ಅದ್ಭುತ ಅನುಭವ ಎಂದು ಹೇಳಿದ್ದಾರೆ. ಎಲ್ಲಾ ಕಲಾವಿದರು ನನಗೆ ಸಪೋರ್ಟ್ ಮಾಡಿದ್ದಾರೆ, ನನ್ನನ್ನು ಶಕ್ತಿ ಪಾತ್ರದಲ್ಲಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು.

https://www.instagram.com/p/ClWHsG7yeb2/?igshid=YmMyMTA2M2Y=

ಇಲ್ಲಿ ಕೆಲಸ ಮಾಡುವ ಮೂಲಕ ತಮಿಳು ಸೇರಿದಂತೆ ಬಹಳಷ್ಟು ವಿಷಯಗಳನ್ನು ನಾನು ಕಲಿತುಕೊಂಡೆ. ಎಲ್ಲರಿಗೂ ಧನ್ಯವಾದಗಳು. ಶಕ್ತಿ ಪಾತ್ರವನ್ನು ಮತ್ತು ಇಡೀ ತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಮೋಕ್ಷಿತಾ ಬರೆದುಕೊಂಡಿದ್ದಾರೆ. ಪಾರು ಮತ್ತು ತಮಿಳು ಸೀರಿಯಲ್ ಎರಡನ್ನೂ ನಿಭಾಯಿಸಿಕೊಂಡು ಬರುತ್ತಿದ್ದ ನಟಿಯು ಈಗ ತಮಿಳು ಸೀರಿಯಲ್ ನಿಂದ ಹೊರ ಬಂದಿರುವುದು ಅಲ್ಲಿನ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ. ‌ಇದೇ ವೇಳೆ ಪಾರು ನನ್ನ ಮೊದಲ ಸೀರಿಯಲ್, ಅದಕ್ಕೆ ನನ್ನ ಮೊದಲ ಆದ್ಯತೆ ಎಂದೂ ನಟಿ ಹೇಳಿಕೊಂಡಿದ್ದಾರೆ.

Leave a Comment