ತನ್ನ ಜೀವನದಲ್ಲಿ 6 ವರ್ಷಗಳ ಕಾಲ ನಿತ್ಯ ನರಕ ತೋರಿಸಿದ್ದ ಆ ವ್ಯಕ್ತಿಯ ಬಗ್ಗೆ ಬಾಯ್ಬಿಟ್ಟ ನಟಿ ನಿತ್ಯ ಮೆನನ್

Written by Soma Shekar

Published on:

---Join Our Channel---

ದಕ್ಷಿಣ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಹಿಂದಿ ಸಿನಿಮಾದಲ್ಲಿ ಕೂಡಾ ನಟಿಸುವ ಮೂಲಕ ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ ದಕ್ಷಿಣ ಸಿನಿರಂಗದ ಜನಪ್ರಿಯ ಮತ್ತು ಸ್ಟಾರ್ ನಟಿ ನಿತ್ಯಾ ಮೆನನ್. ಅತ್ಯುತ್ತಮ ನಟಿಯಾಗಿ ತಮಗಾಗಿ ಒಂದು ಸ್ಥಾನವನ್ನು ಪಡೆದುಕೊಂಡಿರುವ ಈ ನಟಿಯ ನಟನೆಯ ವಿಚಾರ ಬಂದಾಗ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತವೆ. ನಟಿ ನಿತ್ಯಾ ಮೆನನ್ ಅವರಿಗೆ ಇಂತಹದೊಂದು ಯಶಸ್ಸು ಸುಲಭವಾಗಿ ದಕ್ಕಿದ್ದಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ ಅವರು ಆ ಎಲ್ಲಾ‌ ಅಡೆ ತಡೆಗಳನ್ನು ದಾಟಿ ಇಂದು ದಕ್ಷಿಣ ಸಿನಿಮಾರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಸಿನಿಮಾರಂಗದಲ್ಲಿ ಯಶಸ್ಸನ್ನು ಕಂಡಿರುವ ಈ ನಟಿಗೆ ಸುಮಾರು ಆರು ವರ್ಷಗಳ ಕಾಲ ಚಿತ್ರ ವಿಮರ್ಶಕನೊಬ್ಬ ನಿಂದ ಸಾಕಷ್ಟು ಸಂಕಷ್ಟ ಎದುರಾಗಿತ್ತು ಎನ್ನಲಾಗಿದ್ದು, ಆತನಿಂದ ಆದ ದೌ ರ್ಜ ನ್ಯ ವನ್ನು ತಾನು ಎದುರಿಸಬೇಕಾಯಿತು ಎಂದು ನಿತ್ಯ ಮೆನನ್ ಅವರು ಹೇಳಿಕೊಂಡಿದ್ದಾರೆ. ನಟಿ ನಿತ್ಯ ಮೆನೆನ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಚಿತ್ರ ವಿಮರ್ಶಕನ ಹೆಸರನ್ನು ಹೇಳದೇ ಆತನಿಂದ ತಾವು ಅನುಭವಿಸಿದ ಯಾತನೆ, ಮತ್ತು ನೋವನ್ನು ಹಾಗೂ ಆತನಿಂದ ಎದುರಾದ ದೌ ರ್ಜ ನ್ಯ ದ ಕುರಿತಾಗಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಿತ್ಯ ಮೆನನ್ ಮಾತನಾಡುತ್ತಾ, ಅವನು ಏನನ್ನು ಹೇಳುತ್ತಾನೆ ಅದನ್ನು ನಂಬುವವರು ನಿಜವಾದ ಮೂರ್ಖರು. ಸಾಕಷ್ಟು ಸಮಯದಿಂದ ಆತ ನನ್ನ ಮೇಲೆ ದೌ ರ್ಜ ನ್ಯ ನಡೆಸುತ್ತಿದ್ದಾನೆ. ವೈರಲ್ ಆಗುತ್ತಿದ್ದಂತೆ, ಆತ ನನ್ನ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದ. ಸುಮಾರು ಆರು ವರ್ಷಗಳಿಗೂ ಅಧಿಕ ಕಾಲ ಆತ ನನಗೆ ಬಹಳ ತಲೆನೋವನ್ನು ನೀಡಿದ್ದಾನೆ. ಬಹಳಷ್ಟು ಜನರು ಪೊಲೀಸರಿಗೆ ದೂರನ್ನೂ ನೀಡಲು ಹೇಳಿದರು. ನಾನು ಈ ವಿಚಾರವಾಗಿ ನನ್ನ ಪಾಲಕರ ಬಳಿ ಹೇಳಿದೆ. ಆಗ ಅವರು ಅವನ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.

ನನ್ನ ತಾಯಿ ಕ್ಯಾನ್ಸರ್ ನಿಂದ ಗುಣಮುಖವಾಗುತ್ತಿದ್ದ ಸಮಯದಲ್ಲಿ ಅವನು ನನಗೆ ಪ್ರತಿದಿನ ಕಾಲ್ ಮಾಡುತ್ತಿದ್ದ. ಸದಾ ಕೂಲ್ ಆಗಿ ಇರುತ್ತಿದ್ದ, ಬಹಳ ಶಾಂತ ಸ್ವಭಾವದ ನನ್ನ ತಂದೆ-ತಾಯಿ ಅವನೊಂದಿಗೆ ಬಹಳ ಸಿಟ್ಟಿನಿಂದ ಮಾತನಾಡುತ್ತಿದ್ದರು. ಅವನ ಸುಮಾರು 30 ನಂಬರ್ ಗಳನ್ನು ನಾನು ಬ್ಲಾಕ್ ಮಾಡಿದ್ದೇನೆ ಎಂದು ನಿತ್ಯಾ ಮೆನನ್ ಅವರು ಚಿತ್ರ ವಿಮರ್ಶಕನೊಬ್ಬ ನಿಂದ ತನಗೆ ಎದುರಾದ ಸಂಕಷ್ಟದ ದಿನಗಳನ್ನು ಕುರಿತಾಗಿ, ಆತ ಮಾಡಿದಂತಹ ದೌರ್ಜನ್ಯದ ಕುರಿತಾಗಿ ಮಾಧ್ಯಮದ ಮುಂದೆ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ.

Leave a Comment