ಡ್ಯಾನ್ಸ್ ಸ್ಕೂಲ್ ಆದ ಬಿಗ್ ಬಾಸ್ ಮನೆ: ಕ್ಯೂಟ್ ಆಂಟಿ ಆಗಿ ಬದಲಾದ ಪ್ರಶಾಂತ್ ಸಂಬರ್ಗಿ!!

Written by Soma Shekar

Published on:

---Join Our Channel---

ಕನ್ನಡ ಬಿಗ್ ಬಾಸ್ ಸೀಸನ್ ಒಂಬತ್ತರ ಮತ್ತೊಂದು ಹೊಸ ವೀಕ್ ಆರಂಭವಾಗಿದೆ. ವಾರಾಂತ್ಯದ ಎಪಿಸೋಡ್ ನಲ್ಲಿ ಕಿರುತೆರೆಯ ಜನಪ್ರಿಯ ನಟಿ ಕಾವ್ಯ ಶ್ರೀ ಗೌಡ ಅವರು ಎಲಿಮಿನೇಷನ್ ಎದುರಿಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಿದೆ. ಇನ್ನು ಈಗ ಹನ್ನೊಂದನೇ ವಾರದ ಆಟ ಆರಂಭವಾಗಿದ್ದು, ವಾರದ ಮೊದಲ ದಿನವು ಬಹಳ ಉತ್ಸಾಹದಿಂದ ಆರಂಭವಾಗಿರುವುದು ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸ್ಪಷ್ಟವಾಗಿ ಕಂಡಿದೆ. ಹೌದು, ಬಿಗ್ ಬಾಸ್ ಅನುಪಮಾ ಗೌಡ ಅವರು ಪ್ರತಿ ಸಲ ನೀರು ಕುಡಿಯಬೇಕಾದರೆ ಒಂದು ನಿಯಮವನ್ನು ಪಾಲಿಸಬೇಕೆಂದು ಸೂಚನೆಯನ್ನು ನೀಡಿದ್ದು, ಆ ನಿಯಮ ಕೂಡಾ ಬಹಳ ಫನ್ನಿಯಾಗಿದೆ.

ಹೌದು, ಅನುಪಮಾ ಅವರು ನೀರು ಕುಡಿಯಬೇಕಾದರೆ ಮನೆಯ ಒಬ್ಬ ಪುರುಷ ಸದಸ್ಯನಿಗೆ ಡ್ಯಾನ್ಸ್ ಹೇಳಿ ಕೊಡಬೇಕು ಎಂದು ಬಿಗ್ ಬಾಸ್ ಸೂಚನೆ ನೀಡಿದ್ದಾರೆ. ಅದರ ಪ್ರಕಾರವೇ ಅನುಪಮಾ ಅವರು ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ, ಆರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ಶೆಟ್ಟಿ ಹೀಗೆ ಒಬ್ಬರ ನಂತರ ಇನ್ನೊಬ್ಬರಿಗೆ ಡ್ಯಾನ್ಸ್ ಸ್ಟೆಪ್ ಗಳನ್ನು ಹೇಳಿಕೊಟ್ಟಿದ್ದು, ಮನೆಯ ಪುರುಷ ಸದಸ್ಯರು ಡ್ಯಾನ್ಸ್ ಮಾಡುವ ವಿಧಾನ ನೋಡಿ ಮನೆ ಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ. ವೈರಲ್ ಆದ ಪ್ರೋಮೋ ನೋಡಿ ವೀಕ್ಷಕರು ಸಹಾ ಈಗ ನಗ್ತಾ ಇದ್ದಾರೆ.

ಡ್ಯಾನ್ಸ್ ಗಾಗಿ ಪ್ರಶಾಂತ್ ಸಂಬರ್ಗಿ ಹೆಣ್ಣಿನಂತೆ ಅಂದವಾಗಿ ಅಲಂಕರಿಸಿಕೊಂಡಿದ್ದು, ಅವರ ಈ ಅವತಾರ ನೋಡಿದರೆ ಶಾಕ್ ಆಗೋದು ಖಂಡಿತ. ಹೆಣ್ಣಿನ ಉಡುಗೆಯಲ್ಲಿದ್ದ ಸಂಬರ್ಗಿಗೆ ಅನುಪಮಾ ಮತ್ತು ದೀಪಿಕಾ ದಾಸ್ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ. ಕಳಪೆ ಪಟ್ಟ ಪಡೆದು ಜೈಲಿನಲ್ಲಿ ಇರುವ ಆರ್ಯವರ್ಧನ್ ಗುರೂಜಿಗೆ ಅಲ್ಲೇ ಡ್ಯಾನ್ಸ್ ಹೇಳಿಕೊಟ್ಟಿದ್ದಾರೆ ಅನುಪಮಾ. ಅನಂತರ ರೂಪೇಶ್ ಶೆಟ್ಟಿಗೆ ಬೆಲ್ಲಿ ಡ್ಯಾನ್ಸ್ ಹೇಳಿಕೊಟ್ಟಿದ್ದು, ರೂಪೇಶ್ ಡ್ಯಾನ್ಸ್ ನೋಡಿ ಮನೆ ಮಂದಿ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆ ಒಂದು ಫನ್ನಿ ಡ್ಯಾನ್ಸ್ ಕ್ಲಾಸ್ ಆಗಿ ಮಾರ್ಪಟ್ಟಿದೆ.

ಮನೆಯ ಸದಸ್ಯರು ಬಹಳ ಖುಷಿಯಿಂದ ಡ್ಯಾನ್ಸ್ ಕಲಿಕೆ ಮತ್ತು ಡ್ಯಾನ್ಸ್ ಪ್ರದರ್ಶನವನ್ನು ಎಂಜಾಯ್ ಮಾಡಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ ಡ್ಯಾನ್ಸ್ ಈಗ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಪ್ರಶಾಂತ್ ಸಂಬರ್ಗಿ ಅವರನ್ನು ಇಂತಹ ಒಂದು ಹೊಸ ರೂಪದಲ್ಲಿ ನೋಡ್ತೀವಿ ಅಂತ ಪ್ರೇಕ್ಷಕರು ಸಹಾ ಊಹೆ ಮಾಡಿರಲಿಲ್ಲ ಎಂದರೆ ಅದು ಸುಳ್ಳಲ್ಲ. ಸದಾ ಮಾತಿನ ಚಕಮಕಿಗೆ ಹೆಸರಾಗಿದ್ದ ಪ್ರಶಾಂತ್ ಸಂಬರ್ಗಿ ಹೊಸ ರೂಪ ಭರ್ಜರಿ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ

Leave a Comment