ಡಾಕ್ಟರೇಟ್ ಪಡೆದು ತಂದೆಯನ್ನು ಸ್ಮರಿಸಿದ ನಟ ರಮೇಶ್: ಶುಭಾಶಯ ಹೇಳಿ ಪ್ರಶ್ನೆಯೊಂದನ್ನು ಕೇಳಿದ ನಟಿ ರಮ್ಯ

Written by Soma Shekar

Published on:

---Join Our Channel---

ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ, ಜನಪ್ರಿಯ ನಟ ರಮೇಶ್ ಅರವಿಂದ್ ಅವರಿಗೆ ಸೇರಿ ಮೂರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ರಾಣಿ ಚೆನ್ನಮ್ಮ ವಿವಿಯ ಹತ್ತನೇ ಘಟಿಕೋತ್ಸವದಲ್ಲಿ ಇಂತಹುದೊಂದು ಗೌರವವನ್ನು ಪ್ರಧಾನ ಮಾಡಲಾಗಿದೆ. ಚಿತ್ರರಂಗದಲ್ಲಿ ನಟ ರಮೇಶ್ ಅರವಿಂದ್ ಅವರ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಇದೇ ವೇಳೆ ಸಮಾಜ ಸೇವಾ ಕ್ಷೇತ್ರದಲ್ಲಿ ವಿ.ರವಿಚಂದರ್ ಅವರಿಗೆ ಮತ್ತು ಧಾರ್ಮಿಕ ಕ್ಷೇತ್ರದ ಸೇವೆಗಳಿಗಾಗಿ ಮಾತೆ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಲಾಗಿದೆ.

ತನಗೆ ಗೌರವ ಡಾಕ್ಟರೇಟ್ ಪದವಿಯನ್ನು ದಕ್ಕಿರುವ ಸಂತೋಷದ ಸಂದರ್ಭದಲ್ಲಿ ಮಾತನಾಡಿದ ನಟ ರಮೇಶ್ ಅರವಿಂದ್ ಅವರು ಸಿನಿಮಾ ರಂಗದಲ್ಲಿನ ತಮ್ಮ ಮೂವತ್ತು ವರ್ಷದ ಸೇವೆಗೆ ಗೌರವ ಡಾಕ್ಟರೇಟ್ ಸಿಕ್ಕಿದೆ. ಥಿಯೇಟರ್ ನಲ್ಲಿ ಟಿಕೆಟ್ ಪಡೆದು ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೂ ಸಹಾ ನಾನು ಋಣಿಯಾಗಿದ್ದೇನೆ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ. ನಟ ರಮೇಶ್ ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ಸಿಕ್ಕಿದ ಈ ಶುಭ ಸಂದರ್ಭದಲ್ಲಿ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ನಟನಿಗೆ ಶುಭಾಶಯವನ್ನು ಕೋರುವ ಜೊತೆಗೆ ಅವರ ಮುಂದೆ ಒಂದು ಪ್ರಶ್ನೆಯನ್ನು ಸಹಾ ಇಟ್ಟಿದ್ದಾರೆ.

ಡಾಕ್ಟರೇಟ್ ಪಡೆದ ಸಂದರ್ಭದಲ್ಲಿ ನಟ ರಮೇಶ್ ಅವರು ತಮ್ಮ ತಂದೆಯನ್ನು ಸ್ಮರಿಸಿ ಭಾವುಕರಾಗಿದ್ದಾರೆ. ಸಂಭ್ರಮದ ಈ ಕ್ಷಣದಲ್ಲಿ ನನ್ನ ತಂದೆ ಇರಬೇಕಿತ್ತು. ಡಾಕ್ಟರೇಟ್ ಬಂದ ವಿಚಾರವನ್ನು ಸಂಬಂಧಿಕರಿಗೆ ವಾಟ್ಸಾಪ್ ಮೆಸೆಜ್ ಮೂಲಕ ತಿಳಿಸಿದೆ. ಅಭಿನಂದನೆಗಳ ಜೊತೆಗೆ ತಂದೆ ಇರಬೇಕಿತ್ತು ಎನ್ನುವ ಪ್ರತಿಕ್ರಿಯೆಗಳು ಬಂದವು ಎಂದು ತಮ್ಮ ತಂದೆಯನ್ನು ಸ್ಮರಿಸಿದ ಅವರು, ಇದೇ ವೇಳೆ ಸಿನಿಮಾ ರಂಗದಲ್ಲಿ ತನ್ನ ಸೇವೆಗೆ ದಕ್ಕಿರುವ ಈ ಗೌರವಕ್ಕೆ ಟಿಕೆಟ್ ಪಡೆದು ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಚಕನಿಗೂ ಸಹಾ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ತಮ್ಮ ಸಹ ಕಲಾವಿದರನ್ನು ಸ್ಮರಿಸುವುದಾಗಿ, ಅವರ ಸಹಕಾರವೇ ಈ ಸಾಧನೆಗೆ ಕಾರಣ ಎಂದಿದ್ದಾರೆ.

ಡಾಕ್ಟರೇಟ್ ಪಡೆದ ನಟ ರಮೇಶ್ ಅರವಿಂದ್ ಅವರಿಗೆ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಶುಭಾಶಯ ತಿಳಿಸುತ್ತಾ, ನಾನು ಚಿಕ್ಕ ಹುಡುಗಿಯಾಗಿದ್ದಾಗ ಥಿಯೇಟರ್ ನಲ್ಲಿ ಎರಡು ಸಲ ನೋಡಿದ ಏಕೈಕ ಸಿನಿಮಾ ಅಂದರೆ ಅದು ಅಮೆರಿಕಾ ಅಮೆರಿಕಾ. ನಾಗತಿಹಳ್ಳಿ ಚಂದ್ರಶೇಖರ್ ಅವರ ಜೊತೆ ಸಿನಿಮಾ ಮಾಡಬೇಕು ಎನ್ನುವ ಕಾರಣಕ್ಕೆ ಅಮೃತಧಾರೆ ಸಿನಿಮಾ ಮಾಡಿದೆ. ಡಾ.ರ‌ಮೇಶ್ ಅರವಿಂದ್, ನಿಮ್ಮ ನೆಚ್ಚಿನ ಸಿನಿಮಾ ಯಾವುದು? ಎಂದು ನಟಿ ರಮ್ಯ ಪ್ರಶ್ನೆಯನ್ನು ಮಾಡಿದ್ದಾರೆ. ಅವರ ಪ್ರಶ್ನೆಗೆ ಉತ್ತರ ನೀಡ್ತಾರಾ ನಟ ರಮೇಶ್ ? ಕಾದು ನೋಡಬೇಕಾಗಿದೆ.

Leave a Comment