ಜೊತೆ ಜೊತೆಯಲಿ ಸೀರಿಯಲ್: ಹರೀಶ್ ರಾಜ್ ಎಂಟ್ರಿ ಪಕ್ಕಾ!! ಆದ್ರೆ ಆರ್ಯವರ್ಧನ್ ಪಾತ್ರಕ್ಕೆ ಅಲ್ವಂತೆ?? ಆಸಕ್ತಿಕರ ಸುದ್ದಿ

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ ಪಾತ್ರವನ್ನು ನಿರ್ವಹಿಸುತ್ತಿದ್ದ ನಟ ಅನಿರುದ್ಧ ಅವರನ್ನು ಸೀರಿಯಲ್ ತಂಡ ಕೈ ಬಿಟ್ಟ ನಂತರ ಆ ಪಾತ್ರಕ್ಕೆ ಯಾರು ಬರಲಿದ್ದಾರೆ ಎನ್ನುವ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಒಂದಷ್ಟು ಚರ್ಚೆಗಳು ನಡೆದಿದ್ದು ಮಾತ್ರವೇ ಅಲ್ಲದೇ, ಕನ್ನಡದ ಕೆಲವು ಜನಪ್ರಿಯ ನಟರ ಹೆಸರುಗಳು ಹರಿದಾಡಿದ್ದವು. ಆ ಹೆಸರುಗಳಲ್ಲಿ ಕನ್ನಡ ಸಿನಿಮಾ ರಂಗ ಮತ್ತು ಕಿರುತೆರೆ ಎರಡರಲ್ಲೂ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ಪ್ರತಿಭಾವಂತ ನಟ ಹರೀಶ್ ರಾಜ್ ಅವರು ಹೆಸರು ಪಕ್ಕಾ ಎಂದು ಹೇಳಲಾಗಿತ್ತು. ಅವರು ಈ ಸೀರಿಯಲ್ ನಲ್ಲಿ ಆರ್ಯವರ್ಧನ್ ಪಾತ್ರಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು.

ನಟ ಹರೀಶ್ ರಾಜ್ ಅವರ ಬಗ್ಗೆ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ, ನಟ ಹರೀಶ್ ರಾಜ್ ಅವರು ಮಾಧ್ಯಮಗಳಿಗೆ ಆ ವಿಚಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದು, ತನಗೆ ಧಾರಾವಾಹಿಯ ತಂಡದ ಕಡೆಯಿಂದ ಕರೆ ಬಂದಿದ್ದು ನಿಜ. ಆದರೆ, ತಾನು ಒಂದಷ್ಟು ಷರತ್ತುಗಳನ್ನು ವಿಧಿಸಿರುವುದು ನಿಜ ಎನ್ನುವ ಮಾತುಗಳನ್ನು ಹೇಳಿಕೊಂಡಿದ್ದಾರೆ. ತಾನು ವಿಧಿಸಿರುವ ಷರತ್ತು ಗಳಿಗೆ ಒಪ್ಪಿಕೊಂಡರೆ, ಆ ಧಾರಾವಾಹಿಯಲ್ಲಿ ತಾನು ನಟಿಸುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ. ಈಗ ಹೊಸ ಸುದ್ದಿಗಳ ಪ್ರಕಾರ ವಾಹಿನಿ ಹಾಗೂ ಧಾರಾವಾಹಿ ತಂಡವು ಹರೀಶ್ ರಾಜ್ ಅವರು ವಿಧಿಸಿದ ಷರತ್ತು ಗಳಿಗೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಸಿನಿಮಾ ರಂಗದಲ್ಲೂ ಸಹ ಅವರು ಸಕ್ರಿಯ ನಟ ಆಗಿರುವ ಕಾರಣ ಸಿನಿಮಾಗಳಲ್ಲಿ ಹದಿನೈದು ದಿನ, ಅನಂತರ ಧಾರಾವಾಹಿಯಲ್ಲಿ 15 ದಿನ ನಟಿಸುವ ಬಗ್ಗೆ ವಾಹಿನಿಗೆ ಮಾಹಿತಿಯನ್ನು ನೀಡಿದ್ದರು ಎನ್ನಲಾಗಿತ್ತು. ಅವರು ಹೇಳಿದ ಈ ವಿಚಾರಕ್ಕೆ ವಾಹಿನಿ ಮತ್ತು ಸೀರಿಯಲ್ ತಂಡ ಒಪ್ಪಿಗೆ ನೀಡಿದೆ ಎನ್ನಲಾಗಿದ್ದು, ಬಹಳ ಬೇಗ ನಟ ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಧಾರವಾಹಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿತ್ತಿದೆ. ಆದರೆ ಅದೇ ವೇಳೆ ಇಲ್ಲಿ ಮತ್ತೊಂದು ವಿಶೇಷ ಅಥವಾ ಕುತೂಹಲಕಾರಿ ವಿಷಯವು ಸಹಾ ಹೊರಗೆ ಬಂದಿದೆ.

ಆ ಬಹಳ ಆಸಕ್ತಿಕರ ವಿಷಯ ಏನು ಎನ್ನುವುದಾದರೆ, ಹರೀಶ್ ರಾಜ್ ಅವರ ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ಆರ್ಯವರ್ಧನ್ ಪಾತ್ರಕ್ಕೆ ಬರುತ್ತಿಲ್ಲ ಎನ್ನಲಾಗುತ್ತಿದೆ. ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರ ಮಾಡುತ್ತಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಈಗ ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಅಲ್ಲ, ಬದಲಾಗಿ ಅವರು ಬೇರೊಂದು ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರ ಪಾತ್ರಕ್ಕೂ, ನಾಯಕ ಆರ್ಯವರ್ಧನ್ ಪಾತ್ರಕ್ಕೂ ಏನಾದರೂ ಸಂಬಂಧ ಇದೆಯಾ? ಇದ್ದರೆ ಅದು ಹೇಗೆ? ಇದು ಯಾವ ಹೊಸ ತಿರುವಿಗೆ ಕಾರಣವಾಗಲಿದೆ? ಎನ್ನುವ ಕುತೂಹಲವನ್ನು ಮೂಡಿಸಿದೆ.

Leave a Comment