ಜೀರ್ಣಶಕ್ತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವವರೆಗೆ ಹುಣಸೇ ಹಣ್ಣಿನ ಲಾಭಗಳು ಅನೇಕ

Written by Soma Shekar

Published on:

---Join Our Channel---

ಹುಣಸೇ ಹಣ್ಣು ತಿನ್ನುವುದು ಅನೇಕರಿಗೆ ಬಹಳ ಇಷ್ಟ. ಅದರ ಹುಳಿ ಸ್ವಾದವು ಅನೇಕರಿಗೆ ಅಚ್ಚು ಮೆಚ್ಚು ಎಂದರೂ ತಪ್ಪಾಗಲಾರದು. ನಮ್ಮ ದೇಶದಲ್ಲಿ ಹುಣಸೇಯನ್ನು ಅನೇಕ ರೀತಿಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಕೂಡಾ ಬಳಸುವುದರಿಂದ ಅದು ನಮ್ಮ ಆಹಾರದ ಒಂದು ಭಾಗವೂ ಆಗಿದೆ. ಹುಣಸೇ ಕಾಯಿ ಬಳಸಿ ಉಪ್ಪಿನ ಕಾಯಿ ಕೂಡಾ ಸಿದ್ಧಪಡಿಸಲಾಗುತ್ತದೆ. ಇದು ಆಹಾರಕ್ಕೆ ರುಚಿಯನ್ನು ನೀಡುವುದು ಮಾತ್ರವೇ ಅಲ್ಲದೇ ನಮ್ಮ ದೇಹದ ಆರೋಗ್ಯಕ್ಕೂ ಇದು ನೆರವನ್ನು ನೀಡುತ್ತದೆ. ಹಾಗಾದರೆ ಹುಣಸೇ ಹಣ್ಣಿನ ಸಮರ್ಪಕವಾದ ಸೇವನೆಯಿಂದ ನಮಗೆ ಸಿಗುವ ಲಾಭಗಳು ಏನೆಂದು ತಿಳಿಯೋಣ ಬನ್ನಿ.

ದೇಹದ ತೂಕ ಕಡಿಮೆ ಮಾಡಲು : ಹುಣಸೇ ಹಣ್ಣಿನಲ್ಲಿ ಫೈಬರ್ ನ ಪ್ರಮಾಣ ಹೇರಳವಾಗಿರುತ್ತದೆ. ಆದ ಕಾರಣ ಇದು ದೇಹದ ತೂಕವನ್ನು ಕಡಿಮೆ ಮಾಡಲು ನೆರವನ್ನು ನೀಡುತ್ತದೆ. ಇದರಲ್ಲಿ ಪ್ಲೆವೊನಾಯ್ಡ್ ಹಾಗೂ ಪಾಲಿಫೆನೋಲ್ ಅಂಶಗಳು ಇದ್ದು ಇದು ನಮ್ಮ ಜೀರ್ಣ ಕ್ರಿಯೆಯನ್ನು ಅಥವಾ ಪಚನ ಕ್ರಿಯೆಯನ್ನು ಸಮರ್ಪಕವಾಗಿರಿಸಿ ದೇಹದ ತೂಕವನ್ನು ತಗ್ಗಿಸಲು ನೆರವನ್ನು ನೀಡುತ್ತದೆ. ದೇಹದ ತೂಕವನ್ನು ಸಮತೋಲನವಾಗಿ ಇರಿಸಲು ಹುಣಸೆಯು ಸಹಾಯವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ಹುಣಸೇ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ. ಇವು ದೇಹದಲ್ಲಿ ಪಚನ ಕ್ರಿಯೆಯನ್ನು ಬಲಪಡಿಸುವುದು ಮಾತ್ರವೇ ಅಲ್ಲದೇ ನಮ್ಮನ್ನು ರೋಗಗಳಿಂದ ರಕ್ಷಣೆ ಕೂಡಾ ಮಾಡುವವು. ಮಾಹಿತಿಗಳ ಪ್ರಕಾರ ಇದು ಫಂಗಲ್ ಇನ್ಫೆಕ್ಷನ್ ಅನ್ನು ದೂರ ಮಾಡಲು ನೆರವನ್ನು ನೀಡುತ್ತದೆ ಎನ್ನಲಾಗಿದೆ.

ಹೃದಯವನ್ನು ಸ್ವಸ್ಥವಾಗಿಡುತ್ತದೆ :
ಹುಣಸೇ ಹಣ್ಣಿನಲ್ಲಿರುವ ಫ್ಲೆವಿನಾಯ್ಡ್ ಗಳು ಎಲ್ಡಿಎಲ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟರಾಲ್‌ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹುಣಸೇ ಹಣ್ಣಿನ ನಿಯಮಿತ ಸೇವನೆಯು ಹೃದಯ ಸಂಬಂಧಿ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ ಎನ್ನಲಾಗಿದೆ.

ಜೀರ್ಣಕ್ರಿಯೆ ಯನ್ನು ಉತ್ತಮವಾಗಿಡುವುದು : ಹುಣಸೇ ಹಣ್ಣಿನ ನಿಯಮಿತವಾದ ಸೇವನೆಯು ಜೀರ್ಣಕ್ರಿಯೆಯನ್ನು ಸಮರ್ಪಕವಾಗಿ ಇಡುವುದು ಮಾತ್ರವೇ ಅಲ್ಲದೇ ಅದನ್ನು ಬಲಪಡಿಸುತ್ತದೆ. ಇದರಲ್ಲಿರುವ ಫಾಲಿಫೆನಾಲ್ ಹೆಸರಿನ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿನ‌ ಉರಿಯೂತದ ಸಮಸ್ಯೆಯನ್ನು ದೂರ ಮಾಡುತ್ತದೆ. ಕ್ಯಾನ್ಸರ್ ನಂತರ ಅಪಾಯಕಾರಿ ಕಾಯಿಲೆಗಳಿಂದ ರಕ್ಷಿಸಲು ಇವು ನೆರವನ್ನು ನೀಡುತ್ತದೆ.

Leave a Comment