ಜಿಮ್ ನಲ್ಲಿ ಕುಸಿದು ಬಿದ್ದ ಸಲ್ಮಾನ್ ಖಾನ್ ಡೂಪ್: ಹೃದಯಾಘಾತದಿಂದ ನಕಲಿ ಸಲ್ಮಾನ್ ಖಾನ್ ಸಾವು

Written by Soma Shekar

Published on:

---Join Our Channel---

ಸಿನಿಮಾಗಳಲ್ಲಿ ಅನೇಕ ಸಂದರ್ಭಗಳಲ್ಲಿ, ವಿಶೇಷವಾಗಿ ಸಾಹದ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ, ಅಲ್ಲಿ ನಾಯಕ ನಟರಿಗೆ ಬದಲಾಗಿ ಅವರನ್ನೇ ಹೋಲುವ ಡೂಪ್ ಗಳನ್ನು ಅಂದರೆ ನಟರಂತೆಯೇ ಕಾಣುವ ವ್ಯಕ್ತಿಗಳನ್ನು ಬಳಸಿಕೊಂಡು ಚಿತ್ರೀಕರಣವನ್ನು ಮಾಡಲಾಗುತ್ತದೆ. ಬಾಲಿವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳ ಚಿತ್ರರಂಗದಲ್ಲಿ ಕೂಡಾ ಸ್ಟಾರ್ ನಟರ ಬದಲಾಗಿ ಆ್ಯಕ್ಷನ್ ಸೀನ್ ಗಳಲ್ಲಿ ಡೂಪ್ ಗಳನ್ನು ಬಳಸುವುದು ಸಾಮಾನ್ಯವಾದ ವಿಷಯವಾಗಿದೆ. ಬಾಲಿವುಡ್‌ ನ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಲ್ಲಿ ಅವರಿಗೆ ಡೂಪ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸ್ಟಂಟ್ ಕಲಾವಿದ ಸಾಗರ್ ಪಾಂಡೆ ಅವರು ನಿಧನ ಹೊಂದಿದ್ದು, ನಟ ಸಲ್ಮಾನ್ ಖಾನ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಸಾಗರ್ ಪಾಂಡೆ ಅವರ ಅಗಲಿಕೆಗೆ ಸಂತಾಪವನ್ನು ಸೂಚಿಸಿದ್ದಾರೆ.

ಸಾಗರ್ ಪಾಂಡೆಯವರು ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗಿ ನಿಧನರಾಗಿದ್ದಾರೆ ಎನ್ನುವ ವಿಚಾರವನ್ನು ಅವರ ಕುಟುಂಬದ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿಕ್ಕ ವಯಸ್ಸಿಗೇ ಇಹಲೋಕವನ್ನು ತ್ಯಜಿಸಿದ ಸಾಗರ್ ಪಾಂಡೆ ಅವರಿಗೆ ಬಾಲಿವುಡ್‌ ‌ನ ಬಹಳಷ್ಟು ಜನ ಸೆಲೆಬ್ರಿಟಿಗಳು ಸಂತಾಪವನ್ನು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕಿ ಅಗಲಿದ ಸಾಗರ್ ಪಾಂಡೆ ಅವರಿಗೆ ಆತ್ಮ ಶಾಂತಿಯನ್ನು ಕೋರಿದ್ದಾರೆ. ದಬಾಂಗ್, ಭಜರಂಗಿ ಭಾಯಿಜಾನ್, ಟ್ಯೂಬ್ ಲೈಟ್ ಇನ್ನು ಮುಂತಾದ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳಲ್ಲಿ ನಟ ಸಲ್ಮಾನ್ ಖಾನ್ ಅವರ ಸ್ಥಾನದಲ್ಲಿ ಸಾಗರ್ ಪಾಂಡೆ ಅವರೇ ನಟನೆಯನ್ನು ಮಾಡಿದ್ದಾರೆ.

ಸಾಗರ್ ಪಾಂಡೆ ಅವರ ಅಗಲಿಕೆಯ ವಿಚಾರ ತಿಳಿದ ನಟ ಸಲ್ಮಾನ್ ಖಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, “ನನ್ನೊಂದಿಗೆ ಇದ್ದುದಕ್ಕೆ ಧನ್ಯವಾದಗಳು ಮತ್ತು ನಿಮ್ಮ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಪ್ರಶಾಂತ್ ವಾಲ್ಡೆ ಅವರು ಸಾಗರ್ ಪಾಂಡೆ ಅವರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನೀಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಸಾಗರ್ ಪಾಂಡೆಯವರು ಏಕಾಏಕೀ ಕುಸಿದು ಬಿದ್ದರು. ಕೂಡಲೇ ಅವರನ್ನು ಬಾಳ ಸಾಹೇಬ್ ಠಾಕ್ರೆ ಟ್ರಾಮಾ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಲಾಯಿತು. ವೈದ್ಯರು ಆಸ್ಪತ್ರೆಯಲ್ಲಿ ಅವರ ನಿಧನವನ್ನು ಘೋಷಣೆ ಮಾಡಿದರು ಎಂದು ಹೇಳಿದ್ದಾರೆ.

Leave a Comment