ಇದು ಶ್ರಮದ ಫಲ: ಪಠಾಣ್ ನಟ ಜಾನ್ ಅಬ್ರಹಾಂ ಸಂಭ್ರಮ! ಟ್ರೈಲರ್ ಸೂಪರ್ ಹಿಟ್ ಮಾಡಿದ ಫ್ಯಾನ್ಸ್

Written by Soma Shekar

Published on:

---Join Our Channel---

ಬಾಲಿವುಡ್ ನಟ ಶಾರುಖ್ ಖಾನ್(Shah Rukh Khan) ಅಭಿನಯದ ಬಹುನಿರೀಕ್ಷಿತ ಸಿನಿಮಾ ಪಠಾಣ್(Pathan) ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲು ಸಜ್ಜಾಗಿದೆ. ಪಠಾಣ್ ಸಿನಿಮಾದ ಮೊದಲ ಹಾಡು ಬೇಶರಂ ರಂಗ್ ನ ಬಿಡುಗಡೆಯ ನಂತರ ಸಿನಿಮಾ ಒಂದಲ್ಲಾ ಒಂದು ವಿಚಾರವಾಗಿ ಮಾಧ್ಯಮಗಳ ಪ್ರಮುಖ ಸುದ್ದಿಯಾಗಿದೆ. ಬೇಷರಂ ರಂಗ್ ಹಾಡಿದ ದೃಶ್ಯಗಳು ಮತ್ತು ನಾಯಕಿ ದೀಪಿಕಾ ಪಡುಕೋಣೆ ಧರಿಸಿದ ವಸ್ತ್ರ ದೊಡ್ಡ ವಿ ವಾ ದವನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪಠಾಣ್ (boycott Pathan) ಸಿನಿಮಾವನ್ನು ಬ ಹಿ ಷ್ಕ ರಿಸಬೇಕು ಎನ್ನುವ ಕೂಗು ಕೇಳಿ ಬಂದಿತ್ತು. ಆದರೆ ಇವೆಲ್ಲವುಗಳ ನಡುವೆ ಸಿನಿಮಾದ ಟ್ರೈಲರ್ (Pathan Trailer) ಬಿಡುಗಡೆಯಾಗಿದೆ.

ಪಠಾಣ್ ಸಿನಿಮಾದ ಟ್ರೈಲರ್ ಬಿಡುಗಡೆಯ ನಂತರ ದೊಡ್ಡ ಮಟ್ಟದಲ್ಲಿ ಅದು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸಿನಿಮಾ ಟ್ರೈಲರ್ ಬಗ್ಗೆ ಅಭಿಮಾನಿಗಳು ಇಂತಹದೊಂದು ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟ ಜಾನ್ ಅಬ್ರಹಂ(John Abraham) ಎಲ್ಲಾ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಇದೇ ವೇಳೆ ಅವರು ಮತ್ತೊಂದು ಖುಷಿಯ ವಿಚಾರವನ್ನು ಸಹಾ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಯ್ಯೋ ದೇವ್ರೇ!! 64 ನೇ ವಯಸ್ಸಲ್ಲಿ 3ನೇ ಮದುವೆ ಆದ್ರ ದಕ್ಷಿಣದ ಹಿರಿಯ ಸ್ಟಾರ್ ನಟಿ??

ಜಾನ್ ಅಬ್ರಹಾಂ(John Abraham) ಪಠಾಣ್ (Pathan) ಸಿನಿಮಾವನ್ನು ಆಕ್ಷನ್ ಸ್ಫೈ ಥ್ರಿ ಲ್ಲ ರ್ ಬಿಗ್ಗಿ ಎಂದು ವರ್ಣಿಸುತ್ತಾ, ಈ ಸಿನಿಮಾ ಸಾಕಷ್ಟು ಶ್ರಮದ ಫಲವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದೇ ವೇಳೆ ಮುಂದಿನ ವಾರ ತಾನು ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದು, ಇದೇ ಸಮಯದಲ್ಲಿ ಯಶ್ ರಾಜ್ ಫಿಲಂ ಪ್ರಾಜೆಕ್ಟ್ ಬಿಡುಗಡೆಯಾಗುತ್ತಿರುವುದು ನನಗೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ತಮ್ಮ ಸಿನಿಮಾ ಜರ್ನಿಯ ಕುರಿತಾಗಿ ಸಂತೋಷದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಂಕ್ರಾಂತಿ ಸಂಭ್ರಮ: ಯಾರೆಲ್ಲಾ ಜೊತೆಯಾದ್ರು ಒಂದ್ಸಲ ಇಲ್ಲಿ ನೋಡಿ

ಶಾರೂಖ್ (Shahrukh) ನಾಯಕನಾಗಿರುವ ಪಠಾಣ್ ಸಿನಿಮಾದಲ್ಲಿ ಜಾನ್ ಅಬ್ರಹಾಂ(John Abraham) ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾ ಜನವರಿ 25ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಿದ್ದಾರ್ಥ್ ಆನಂದ್ (Siddharth Anand) ನಿರ್ದೇಶನ ಮಾಡಿರುವ ಈ ಸಿನಿಮಾದ ಟ್ರೈಲರ್ ಮಂಗಳವಾರ ಬಿಡುಗಡೆಯಾಗಿತ್ತು. ಬಿಡುಗಡೆಯ ನಂತರ ಸಾಮಾಜಿಕ ಜಾಲತಾಣ ವೇದಿಕೆಯಯಾದ ಯೂಟ್ಯೂಬ್ ನಲ್ಲಿ ಸಿನಿಮಾ ಟ್ರೈಲರ್ ಭರ್ಜರಿ ವೀಕ್ಷಣೆಗಳನ್ನು ಪಡೆದುಕೊಂಡಿದೆ.

Leave a Comment