ಸೌತ್ ಸಿನಿಮಾ ಮಾಡೋಕೆ ರಶ್ಮಿಕಾಗಿಂತ ಹೆಚ್ಚು ಸಂಭಾವನೆ ಕೇಳಿದ ಜಾನ್ವಿ! ಶ್ರೀದೇವಿ ಪುತ್ರಿ ಅನ್ನೋದೇ ಪ್ಲಸ್ ಪಾಯಿಂಟಾ?

Written by Soma Shekar

Published on:

---Join Our Channel---

Jhanvi Kapoor remuneration : ದಿವಂಗತ ನಟಿ, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಟಿ ಶ್ರೀದೇವಿ(Sri Devi) ಅವರ ಮಗಳು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್(Jhanvi Kapoor) ದಕ್ಷಿಣ ಸಿನಿಮಾ ರಂಗಕ್ಕೆ ಅಡಿಯಿಡಲು ಸಿದ್ಧತೆಗಳನ್ನು ನಡೆಸಿರುವ ವಿಷಯ ಈಗಾಗಲೇ ಸುದ್ದಿಯಾಗಿದೆ. ಬಾಲಿವುಡ್ ನಲ್ಲಿ ಅಷ್ಟೇನೂ ಸಕ್ಸಸ್ ಸಿಗದೇ ಇದ್ದರೂ, ನಟಿ ಶ್ರೀದೇವಿ ಮಗಳು ಎನ್ನುವ ಒಂದು ಕಾರಣ ಈಗ ಜಾನ್ವಿ ದಕ್ಷಿಣಕ್ಕೆ ಎಂಟ್ರಿ ನೀಡಲು ಒಂದು ಸುಲಭವಾದ ಮಾರ್ಗವಾಗಿದೆ. ಆದರೆ ಈಗ ನಟಿ ಸೌತ್ ಸಿನಿಮಾದಲ್ಲಿ(South Cinema) ನಟಿಸಲು ಇಟ್ಟಿರುವ ಭಾರೀ ಮೊತ್ತದ ಸಂಭಾವನೆ ವಿಚಾರ ಟಾಲಿವುಡ್(Tollywood)) ಅಂಗಳದಲ್ಲಿ ಅಚ್ಚರಿಯನ್ನು ಮೂಡಿಸಿದೆ.

ಹೌದು, ಈಗ ಹೊರ ಬಂದಿರುವ ಸುದ್ದಿಗಳ ಪ್ರಕಾರ ಜಾನ್ವಿ ಕಪೂರ್ ತೆಲುಗು ಸಿನಿಮಾದಲ್ಲಿ ನಟಿಸಲು, ಈಗಾಗಲೇ ತೆಲುಗು ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ಪಡೆಯುವ ಸಂಭಾವನೆಗಿಂತಲೂ ಹೆಚ್ಚಿನ ಸಂಭಾವನೆಯ ಬೇಡಿಕೆಯನ್ನು ಇಟ್ಟಿದ್ದಾರೆ. ಬಾಲಿವುಡ್ ನಲ್ಲಿ ಒಂದೇ ಒಂದು ಹಿಟ್ ಸಿನಿಮಾ ನೀಡದೇ ಇದ್ದರೂ, ಸ್ಟಾರ್ ಕಿಡ್ ಮತ್ತು ಜನಪ್ರಿಯತೆಯ ಕಾರಣದಿಂದ ಜಾನ್ವಿ ಕಪೂರ್ ಬೇಡಿಕೆಯ ನಟಿಯಾಗಿದ್ದಾರೆ. ಇದೀಗ ತೆಲುಗಿನ ಸ್ಟಾರ್ ನಟ ಜೂನಿಯರ್ ಎನ್ ಟಿ ಆರ್ ಗೆ (Jr. NTR ) ನಾಯಕಿಯಾಗಿ ತೆಲುಗು ಇಂಡಸ್ಟ್ರಿಗೆ ಜಾನ್ವಿ ಎಂಟ್ರಿ ನೀಡುತ್ತಿದ್ದಾರೆ.

ತೆಲುಗಿನಲ್ಲಿ ಸೀತಾ ರಾಮಂ(Sita Ramam) ಸಿನಿಮಾದ ಸಕ್ಸಸ್ ಹಾಗೂ ಅದರಿಂದ ಜನಪ್ರಿಯತೆ ಪಡೆದ ನಟಿ ಮೃಣಾಲ್ ಠಾಕೂರ್(Mrunal Thakur) ಇತ್ತೀಚಿಗಷ್ಟೇ ತಮ್ಮ ಹೊಸ ಸಿನಿಮಾಕ್ಕೆ ದೊಡ್ಡ ಮೊತ್ತದ ಸಂಭಾವನೆಯ ಬೇಡಿಕೆಯನ್ನು ಇಟ್ಟು ಸುದ್ದಿಯಾಗಿದ್ದರು. ಇನ್ನು ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪ ಸಕ್ಸಸ್ ಮತ್ತು ಬಾಲಿವುಡ್ ನಲ್ಲಿ ಪಡೆದ ಬೇಡಿಕೆಯ ನಂತರ ಸಿನಿಮಾವೊಂದಕ್ಕೆ ಐದು ಕೋಟಿ ಸಂಭಾವಬೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾಗುತ್ತಿದೆ. ಅತ್ತ ಬಾಲಿವುಡ್, ಇಲ್ಲಿ ಟಾಲಿವುಡ್ ಮತ್ತು ತಮಿಳು ಸಿನಿಮಾಗಳಲ್ಲೂ ರಶ್ಮಿಕಾ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಆದರೆ ಈಗ ಶ್ರೀದೇವಿ ಪುತ್ರಿ ಜಾನ್ವಿ(Jhanvi ) ತಮ್ಮ ಮೊದಲ ದಕ್ಷಿಣದ ಸಿನಿಮಾಕ್ಕೆ ರಶ್ಮಿಕಾಗಿಂತ ಹೆಚ್ಚು ಸಂಭಾವನೆ ಬೇಡಿಕೆಯನ್ನು ಇಟ್ಟಿದ್ದು, ಟಾಲಿವುಡ್ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಈ ವಿಚಾರವಾಗಿ ನೆಟ್ಟಿಗರು ವೈವಿದ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲು ಸೌತ್ ಸಿನಿಮಾಗಳಿಗೆ ಕಾಲ್ ಶೀಟ್ ನೀಡದ ಬಾಲಿವುಡ್(Bollywood) ಮಂದಿ, ಈಗ ದಕ್ಷಿಣ ಸಿನಿಮಾಗಳ ಸಕ್ಸಸ್ ನಂತರ ಇಲ್ಲಿನ ಸಿನಿಮಾ ಮಾಡಲು ಬರುತ್ತಿದ್ದಾರೆ. ಇವರ ಬದಲು ಹೊಸಬರಿಗೆ ಅವಕಾಶವನ್ನು ನೀಡಿ ಎಂದಿದ್ದಾರೆ. ಇದನ್ನೂ ಓದಿ: ಸಮಂತಾ ಉಟ್ಟಿದ್ದ ಸೀರೆಯ ಬೆಲೆಯೇ ಇಷ್ಟೊಂದಾ? ಸಿಂಪಲ್ಲಾಗಿ ಕಾಣ್ಸೋಕೆ ಇಷ್ಟೊಂದು ಹಣ ಖರ್ಚು ಮಾಡಬೇಕಾ?

ಮತ್ತೆ ಕೆಲವರು ಬಾಲಿವುಡ್ ನಲ್ಲೇ ಒಂದು ಸೂಪರ್ ಹಿಟ್ ಸಿನಿಮಾವನ್ನು ನೀಡದ ನಟಿ ಜಾನ್ವಿ ಕಪೂರ್ (Jhanvi Kapoor) ಗೆ ಈಗ ದಕ್ಷಿಣದಲ್ಲಿ ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಏಕೆ ನೀಡಬೇಕು? ದಕ್ಷಿಣದಲ್ಲಿ ನಟಿಯರೇ ಇಲ್ಲವೇ? ಬಾಲಿವುಡ್ ಮಂದಿಗೆ ಮಣೆ ಹಾಕುವುದನ್ನು ನಿಲ್ಲಿಸಿ ಎಂದು ಸಹಾ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ನಟಿ ಶ್ರೀದೇವಿ ಯ ಅಭಿಮಾನಿಗಳು ಮಾತ್ರ ಜಾನ್ವಿ ಸೌತ್ ಸಿನಿಮಾ(South Cinema) ಗೆ ಎಂಟ್ರಿ ನೀಡುತ್ತಿರುವುದಕ್ಕೆ ಸಂತೋಷ ಪಡುತ್ತಿದ್ದಾರೆ.

Leave a Comment