ಪ್ರೇಮಿಗಳ ದಿನಕ್ಕೆ ಬಾಲಿವುಡ್ ನ ತನ್ನ ಪ್ರೇಯಸಿಗೆ ಶಾಕ್ ಕೊಟ್ಟ ಬಹುಕೋಟಿ ವಂಚಕ! ಇದೆಂತಾ ಲವ್??

Written by Soma Shekar

Published on:

---Join Our Channel---

ಬಹುಕೋಟಿ ವಂ ಚ ನೆ ಆರೋಪದಲ್ಲಿ ಈಗಾಗಲೇ ಬಂದಿತನಾಗಿ ಜೈಲುವಾಸ ಅನುಭವಿಸುತ್ತಿರುವ ವಂಚಕ ಸುಕೇಶ್ ಚಂದ್ರಶೇಖರ್(Sukhesh Chandrasekhar) ವಿಷಯವಾಗಿ ಈಗಾಗಲೇ ಸಾಕಷ್ಟು ವಿಷಯಗಳು ಸುದ್ದಿಯಾಗಿದೆ. ವಂಚಕ ಸುಕೇಶ್ ಜೊತೆಗೆ ಸಂಪರ್ಕದಲ್ಲಿ ಇದ್ದ ಕಾರಣದಿಂದ ಬಾಲಿವುಡ್ ನ ಜನಪ್ರಿಯ ನಟಿಯರಾದ ಜಾಕ್ವೆಲಿನಾ ಫರ್ನಾಂಡಿಸ್ (Jaquelin Fernandez) ಮತ್ತು ನೋರಾ ಫತೇಹಿ(Nora Fatehi) ಇಬ್ಬರನ್ನೂ ಜಾರಿ ನಿರ್ದೇಶನಾಲಯ ವಿಚಾರಣೆಯನ್ನು ನಡೆಸಿದ ವಿಷಯ ಕೂಡಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸುದ್ದಿಗಳು ಹೊರಗೆ ಬಂದ ಮೇಲೆ ನಟಿ ಜಾಕ್ವೆಲಿನಾ ಸುಕೇಶ್ ಚಂದ್ರಶೇಖರ್ ತನ್ನ ಬಳಿ ಸುಳ್ಳು ಹೇಳಿ ತನ್ನ ಸ್ನೇಹವನ್ನು ಸಂಪಾದಿಸಿದ್ದ ಎನ್ನುವ ಮಾತುಗಳನ್ನು ಹೇಳಿದ್ದರು.

ಈಗ ಇವೆಲ್ಲವುಗಳ ನಂತರ ಪ್ರೇಮಿಗಳ ದಿನದಂದು (Valentine’s Day) ವಂಚಕ ಸುಕೇಶ್ ಚಂದ್ರಶೇಖರ್ ತನ್ನ ಗೆಳತಿ ಜಾಕ್ವೆಲಿನಾ ಫರ್ನಾಂಡಿಸ್ ಗೆ ಶುಭಾಶಯ ಕೋರುವ ಮೂಲಕ ದೊಡ್ಡ ಶಾ ಕ್ ನೀಡಿದ್ದಾನೆ. ಹೌದು, ಈ ಹಿಂದೆ ಸುಕೇಶ್ ಮತ್ತು ಜಾಕ್ವೆಲಿನಾ(Sukhesh Jaquelin dating) ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರ ಹೊರಗೆ ಬಂದಿತ್ತು. ಸುಕೇಶ್ ನಟಿಗೆ ಅತ್ಯಮೂಲ್ಯವಾದ ಉಡುಗೊರೆಗಳನ್ನು ನೀಡಿದ್ದನು. ಆದರೆ ಜಾರಿ ನಿರ್ದೇಶನಾಲಯವು ಸುಕೇಶ್ ಮೇಲೆ ಪ್ರಕರಣ ದಾಖಲಿಸಿದ ನಂತರ ನಟಿಯು ಆತನಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಂಡಿದ್ದರು.

ಆದರೆ ಜಾಕ್ವೆಲಿನಾ ಮತ್ತು ಸುಕೇಶ್ ನಡುವಿನ ಆತ್ಮೀಯತೆಯನ್ನು ತೋರಿಸುವ ಒಂದಷ್ಟು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಜಾರಿ ನಿರ್ದೇಶನಾಲಯ ಸುಕೇಶ್ ವಂಚನೆಯಿಂದ ಗಳಿಸಿದ್ದ ಹಣದಲ್ಲಿ ಗೆಳತಿ ಜಾಕ್ವೆಲಿನಾ ಗೆ ಬೆಲೆ ಬಾಳುವ ಹಲವು ವಸ್ತುಗಳನ್ನು ಉಡುಗೊರೆಯಾಗಿ ಕೊಡಿಸಿದ್ದಾನೆ ಎನ್ನುವ ವಿಚಾರವನ್ನು ಪತ್ತೆ ಹಚ್ಚಿತ್ತು. ನಟಿಯನ್ನು ಕೂಡಾ ಹಲವು ಭಾರೀ ವಿಚಾರಣೆಗೆ ಕರೆಸಿ ಪ್ರಶ್ನೆಗಳನ್ನು ಮಾಡಲಾಗಿತ್ತು. ಆದರೆ ಜಾಕ್ವೆಲಿನಾ ಮಾತ್ರ ತಾನು ಸುಕೇಶ್ ನಿಂದ ಮೋಸ ಹೋಗಿದ್ದೇನೆ ಎಂದೇ ಹೇಳಿದ್ದರು. ಇದನ್ನೂ ಓದಿ: “ನಾನೇನು ಫ್ಯಾನ್ ಅಲ್ಲ, ಹಾಗೆ ಹೇಳೋದು ನಿಲ್ಸಿ”- ನಟ ವಿಜಯ್ ಸೇತುಪತಿ ಕೊಟ್ರು ಖಡಕ್ ವಾರ್ನಿಂಗ್

ಸುಕೇಶ್ ಮೇಲೆ ನಟಿ ಏನೆಲ್ಲಾ ಆ ರೋ ಪವನ್ನು ಮಾಡಿದ್ದರೂ, ಇದೀಗ ಸುಕೇಶ್ ಚಂದ್ರಶೇಖರ್ ತಾನು ನಟಿ ಜಾಕ್ವೆಲಿನಾ ಫರ್ನಾಂಡೀಸ್ ಗೆ(Sukhesh wish to Jaquelin on Valentine’s Day) ಪ್ರೇಮಿಗಳ ದಿನದಂದು ಶುಭಾಶಯ ಕೋರುವ ಮೂಲಕ ತಾನು ಆಕೆಯನ್ನು ಪ್ರೀತಿಸುತ್ತದ್ದೇನೆ ಎಂದು ಮಾಧ್ಯಮಗಳ ಮುಂದೆಯೇ ಪ್ರೇಮಿಗಳ ದಿನಾಚರಣೆಯ ಶುಭಾಶಯವನ್ನು ಕೋರಿದ್ದಾನೆ. ಸುಕೇಶ್ ಈಗ ಕೋರಿರುವ ಶುಭಾಶಯಕ್ಕೆ ನಟಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೋ ಗೊತ್ತಿಲ್ಲ.

Leave a Comment