ಮೋದಿಯನ್ನು ಭೇಟಿಯಾದ ನವರಸನಾಯಕ: ಬದುಕಿನ ಶ್ರೇಷ್ಠ ದಿನವಿದು ಎಂದು ಖುಷಿ ಪಟ್ಟ ನಟ

Written by Soma Shekar

Published on:

---Join Our Channel---

Kannada News: ಮಾರ್ಚ್ 17 ಕನ್ನಡದ ಹಿರಿಯ ನಟ, ನವರಸ ನಾಯಕ ಜಗ್ಗೇಶ್(Jaggehsh) ಅವರ ಜನ್ಮದಿನ (Birthday). ಈ ವರ್ಷ ಜಗ್ಗೇಶ್ ಅವರ ಜನ್ಮ ದಿನ ಬಹಳ ವಿಶೇಷವಾಗಿದೆ. ಏಕೆಂದರೆ ಇದು ಜಗ್ಗೇಶ್ ಅವರ 60 ನೇ ವರ್ಷದ ಜನ್ಮದಿನ. ಜಗ್ಗೇಶ್ ಅವರು ಪ್ರತಿ ವರ್ಷ ತಮ್ಮ ಜನ್ಮದಿನವನ್ನು ಮಂತ್ರಾಲಯದ (Mantralaya) ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಆಚರಿಸಿಕೊಳ್ಳುವುದು ವರ್ಷಗಳಿಂದ ನಡೆದು ಬರುತ್ತಿರುವ ಅವರ ಆಚರಣೆಯಾಗಿದೆ. ಇನ್ನು ಈ ಬಾರಿ ಜನ್ಮದಿನಕ್ಕೆ ಮೂರು ದಿನ ಮೊದಲು ಜಗ್ಗೇಶ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.

ದೆಹಲಿಯ(Delhi) ಪಿಎಂ ನಿವಾಸದಲ್ಲಿ ಪ್ರಧಾನಿ ಯವರನ್ನು ಜಗ್ಗೇಶ್ ಭೇಟಿ ಮಾಡಿದ್ದಾರೆ. ಮೋದಿಯವರನ್ನು(Narendra Modi) ಭೇಟಿ ಮಾಡಿದ ನಂತರ ಜಗ್ಗೇಶ್ ಅವರು ಈ ಸಂತೋಷದ ಕ್ಷಣಗಳ ಫೋಟೋಗಳನ್ನು ತಮ್ಮ‌ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ,

ಅಲ್ಲದೇ ಈ ಭೇಟಿಗೆ ಒಂದು ವಿಶೇಷವಾದ ಅರ್ಥವನ್ನು ನೀಡಿರುವ ಅವರು ಫೋಟೋಗಳ ಜೊತೆಗೆ ಕೆಲವೊಂದು ಸಾಲುಗಳನ್ನು ಸಹಾ ಬರೆದುಕೊಂಡು, ತಮ್ಮ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಜಗ್ಗೇಶ್ ಅವರು ತಮ್ಮ ಪೋಸ್ಟ್ ನಲ್ಲಿ, ನನ್ನ ಬದುಕಿನ ಶ್ರೇಷ್ಠದಿನ ಇಂದು, March17 ನನ್ನ ಹುಟ್ಟಿದ ದಿನ.‌

ಈ ವರ್ಷ ನನಗೆ 60ನೆ ವಸಂತ, ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಪರಿಮಳ, ಮಗ ಯತಿರಾಜನ ಮನತುಂಬಿ ಹರಸಿದರು.ಅವರಿಗೆ ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿ ರಾಯರ ಚರಿತ್ರೆ ಹಾಗು ಬೃಂದಾವನ ಮಹಿಮೆ ತಿಳಿಸಿದೆ. ಎಂಥ ಅದ್ಭುತ ದೈವ ಭಕ್ತರು ಮೋದಿಜೀ ರವರು.

ರಾಯರ ವಿಗ್ರಹಕ್ಕೆ ನಮಿಸಿ ತಮ್ಮ ಬಳಿ ಇಟ್ಟುಕೊಂಡರು. ರಾಯರ ಕಾರುಣ್ಯದಿಂದ ಒಬ್ಬ ಹಳ್ಳಿ ಕುಟುಂಬದವ ನಾನು ಇಂದು ರಾಯರ ಕೃಪೆಯಿಂದ ವಿಶ್ವ ಮೆಚ್ಚಿದ ನಾಯಕನಿಂದ ಆಶೀರ್ವಾದ ಮಾರ್ಗದರ್ಶನ ಪಡೆದು ಪುನೀತನಾದೆ ಎಂದು ಬರೆದುಕೊಂಡಿದ್ದಾರೆ.‌

Leave a Comment