ಜಗತ್ತಿನ ಅತಿ ಭವ್ಯ ಹಿಂದು ಮಂದಿರ ನಿರ್ಮಾಣಕ್ಕೆ ಭೂಮಿ ದಾನ ನೀಡಿದ ಮುಸ್ಲಿಂ ಉದ್ಯಮಿ

Written by Soma Shekar

Published on:

---Join Our Channel---

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮತೀಯ ವಿಚಾರಗಳ ಕಾರಣದಿಂದ ಧರ್ಮ, ‌ಧರ್ಮಗಳ ನಡುವಿನ ಜನರಲ್ಲಿ ಒಂದು ಅಸಮಾಧಾನ ಹಾಗೂ ಅಸಹನೆಯ ಭಾವನೆ ಉಂಟಾಗಿದೆ. ದೇಶದಲ್ಲಿ ಒಂದಲ್ಲಾ ಒಂದು ಕಡೆ ಪ್ರತಿದಿನ ಧರ್ಮದ ವಿಚಾರದಲ್ಲಿ ನಡೆಯುವ ಗ ಲ ಭೆಗಳ ವಿಚಾರಗಳು ಸುದ್ದಿಯಾದಾಗ ಇದು ಮನಸ್ಸಿಗೆ ಒಂದು ಬೇಸರವನ್ನು ಉಂಟು ಮಾಡುವುದು. ಆದರೆ ಈಗ ಇಂತಹ ವಾತಾವರಣದ ನಡುವೆಯೇ ಸೌಹಾರ್ದತೆಯನ್ನು ಮೆರೆದ ಘಟನೆಯೊಂದು ನಡೆದಿದ್ದು, ಈ ವಿಷಯ ಸುದ್ದಿಯಾದ ಮೇಲೆ ವ್ಯಾಪಕವಾಗಿ ಮೆಚ್ಚುಗೆಗಳು ಹರಿದು ಬರುತ್ತಿವೆ.

ಬಿಹಾರದ ಪೂರ್ವ ಚಂಪಾರಣ್ಯ ಜಿಲ್ಲೆಯ ಕೈತ್ವಾಲಿಯಾ ಎನ್ನುವ ಕಡೆಯಲ್ಲಿ ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿದೆ. ಇಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡ ಹಿಂದೂ ದೇವಾಲಯದ ನಿರ್ಮಾಣ ಮಾಡಲಾಗುವುದು ಎಂದು ಹೇಳಲಾಗಿದ್ದು, ಈ ಭವ್ಯ ಮಂದಿರ ನಿರ್ಮಾಣ ಕ್ಕೆ ಮುಸ್ಲಿಂ ಕುಟುಂಬವೊಂದು ಜಮೀನನ್ನು ನೀಡುವ ಮೂಲಕ ಇದೀಗ ಇಡೀ ದೇಶದ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಇವರಿಗೆ ಮೆಚ್ಚುಗೆಗಳು ಹರಿದು ಬರುತ್ತಿವೆ.

ಪಾಟ್ನಾ ಮೂಲದ ಮಹಾವೀರ್ ಮಂದಿರ ಟ್ರಸ್ಟ್ ಈ ಭವ್ಯ ದೇಗುಲದ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಈ ಟ್ರಸ್ಟ್ ನ ಮುಖ್ಯಸ್ಥರು, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಕಿಶೋರ್ ಕುನಾಲ್ ಅವರು ಮಾತನಾಡಿ ಮುಸ್ಲಿಂ ಕುಟುಂಬವೊಂದು ದೇಗುಲ ನಿರ್ಮಾಣಕ್ಕೆ ಜಮೀನು ನೀಡಿರುವ ವಿಷಯವನ್ನು ತಿಳಿಸಿದ್ದಾರೆ. ಕಿಶೋರ್ ಕುನಾಲ್ ಅವರು ಮಾತನಾಡುತ್ತಾ, ಇಷ್ಟಿಯಾಲ್ ಅಹ್ಮದ್ ಖಾನ್ ಎನ್ನುವ ಉದ್ಯಮಿಯೊಬ್ಬರು ದೇಗುಲ ನಿರ್ಮಾಣಕ್ಕೆ 2.5 ಕೋಟಿ ರೂ.‌ ಬೆಲೆ ಬಾಳುವ ಭೂಮಿಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇಷ್ಟಿಯಾಕ್ ಅವರು ಭೂಮಿಯನ್ನು ದಾನವಾಗಿ ನೀಡಿದ್ದು, ನೋಂದಣಿ ಪ್ರಕ್ರಿಯೆ ಪೂರ್ವ ಚಂಪಾರಣ್ಯದ ಕೆಶಾರಿಯಾ ಸಬ್ ಕಛೇರಿಯಲ್ಲಿ ನಡೆದಿದೆ ಎನ್ನುವ ಮಾಹಿತಿಯನ್ನು ಕಿಶೋರ್ ಕುನಾಲ್ ಅವರು ಮಾಹಿತಿಯನ್ನು ನೀಡಿದ್ದಾರೆ. ಖಾನ್ ಅವರ ಕುಟುಂಬ ದೇಗುಲ ನಿರ್ಮಾಣಕ್ಕೆ ಜಮೀನು ನೀಡುವ ಮೂಲಕ ಸಾಮಾಜಿಕ ಸಾಮರಸ್ಯ, ಕೋಮು ಸೌಹಾರ್ದತೆ ಹಾಗೂ ಎರಡು ಸಮುದಾಯಗಳ ನಡುವೆ ಭ್ರಾತೃತ್ವಕ್ಕೆ ಇದು ಸಾಕ್ಷಿಯಾಗಿದೆ ಎನ್ನುವ ಮಾತನ್ನು ಕಿಶೋರ್ ಕುನಾಲ್ ಅವರು ಹೇಳಿದ್ದಾರೆ.

Leave a Comment