ಚಿನ್ನದ ಗಣಿಯ ಕಿಚ್ಚು: ರೂಪೇಶ್ ರಾಜಣ್ಣ ಮತ್ತು ಸಂಬರ್ಗಿ ನಡುವೆ ಮತ್ತೊಂದು ವಾಗ್ಯುದ್ಧ

Written by Soma Shekar

Published on:

---Join Our Channel---

ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ ಮೂರನೇ ವಾರಕ್ಕೆ ಪ್ರವೇಶ ನೀಡಿದ. ಎರಡನೇ ವಾರಾಂತ್ಯದಲ್ಲಿ ನವಾಜ್ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಾಗಿದೆ. ಈಗ ಮೂರನೇ ವಾರದ ಆಟ ಜೋರಾಗಿ ಸಾಗಿದ್ದು, ಬಿಗ್ ಬಾಸ್ ನೀಡಿರುವ ಟಾಸ್ಕ್ ಜೊತೆಗೆ ಮನೆಯ ಸದಸ್ಯರ ನಗು, ಅಳು, ಅರಚಾಟ ಮತ್ತು ಕಿತ್ತಾಟ ಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಿದೆ.. ಬಿಗ್ ಬಾಸ್ ಕ್ಯಾಪ್ಟನ್ ಆಯ್ಕೆಗಾಗಿ ಹೊಸ ಟಾಸ್ಕ್ ಒಂದನ್ನು ನೀಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಮನೆಯ ಸದಸ್ಯರ ನಡುವೆ ವಾಗ್ವಾದ ಬಹಳ ಜೋರಾಗಿ ನಡೆದಿದ್ದು, ಮನೆ ಮತ್ತೊಮ್ಮೆ ರಣರಂಗ ವಾದಂತೆ ಕಾಣುತ್ತಿದೆ. ಹೌದು, ಬಿಗ್ ಬಾಸ್ ಕ್ಯಾಪ್ಟನ್ ಆಯ್ಕೆಯ ವಿಚಾರದಲ್ಲಿ ಚಿನ್ನದ ಗಣಿ ಟಾಸ್ಕನ್ನು ನೀಡಿದ್ದಾರೆ..

ಈ ಟಾಸ್ಕ್ ನಲ್ಲಿ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಕಂಡಿರುವ ಕಿಚ್ಚು ಮನೆಯ ಅನ್ಯ ಸದಸ್ಯರಿಗೆ ಅಚ್ಚರಿಯನ್ನುಂಟು ಮಾಡಿದೆ. ಮೂರನೇ ವಾರದ ಎರಡನೇ ದಿನದ ಚಟುವಟಿಕೆಗಳ ಕುರಿತಾದ ಪ್ರೋಮೋ ಬಿಡುಗಡೆಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗುವ ಅವಕಾಶ ಬೇಕು ಎನ್ನುವುದಾದರೆ ಚಿನ್ನದ ಗಣಿಯಲ್ಲಿ ಬೆವರು ಸುರಿಸಬೇಕು ಎಂದು ಬಿಗ್ ಬಾಸ್ ನೀಡಿರುವ ಸೂಚನೆಯಂತೆ, ಮನೆಯ ಸದಸ್ಯರು ಚಿನ್ನಕ್ಕಾಗಿ ಕಿತ್ತಾಟ ನಡೆಸಿದ್ದಾರೆ. ಟಾಸ್ಕ್ ನಲ್ಲಿ ರೂಪೇಶ್ ಮತ್ತು ವಿನೋದ್ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ. ಈ ವೇಳೆ ವಿನೋದ್ ಮತ್ತು ರೂಪೇಶ್ ರಾಜಣ್ಣ ನಡುವೆ ನಡೆಯುತ್ತಿರುವ ಜಗಳವನ್ನು ನೋಡುತ್ತಾ ಪ್ರಶಾಂತ್ ಸಂಬರ್ಗಿ ನಕ್ಕು ವ್ಯಂಗ್ಯ ಮಾಡಿದ್ದಾರೆ.

ಈ ಟಾಸ್ಕ್ ನಲ್ಲಿ ಎದುರಾಳಿಯನ್ನು ಗೇಮ್ ನಿಂದ ಹೊರಗೆ ಇಡಬೇಕಾದರೆ, ಯಾರು ಹೆಚ್ಚು ಚಿನ್ನವನ್ನು ತೆಗೆಯುತ್ತಾರೆ ಎನ್ನುವುದು ಅದನ್ನು ನಿರ್ಧರಿಸಲಿದೆ. ಆದ್ದರಿಂದಲೇ ಚಿನ್ನಕ್ಕಾಗಿ ಸ್ಪರ್ಧಿಗಳ ನಡುವೆ ಬಹಳ ಜೋರಾಗಿ ಹೋರಾಟ ನಡೆಯುತ್ತಿದೆ. ರೂಪೇಶ್ ರಾಜಣ್ಣ ಅವರು ವಿನೋದ್ ಮೇಲೆ ಕೂಗಾಡುವಾಗಲೇ ಅದನ್ನು ನೋಡಿ ಪ್ರಶಾಂತ್ ಸಂಬರ್ಗಿ ವ್ಯಂಗ್ಯ ಮಾಡಿದ್ದಾರೆ. ಇದರಿಂದ ಇನ್ನಷ್ಟು ಕೋಪಗೊಂಡ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಮೇಲೆ ಕಿಡಿಕಾರಿದ್ದಾರೆ. ಆದರೆ ಪ್ರಶಾಂತ್ ಸಂಬರ್ಗಿ ಮಾತ್ರ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೆ ನಗುತ್ತಲೇ ತಮ್ಮ ಟಾಸ್ಕ್ ನಲ್ಲಿ ಭಾಗಿಯಾಗಿದ್ದಾರೆ.

ಆಗ ರೂಪೇಶ್ ಅವರಿಗೆ ಸಂಬರ್ಗಿ, ರಾಜಾಹುಲಿಗೆ ಜಯವಾಗಲಿ ಎಂದು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ರೂಪೇಶ್ ರಾಜಣ್ಣ ಅವರು, ಹಾಗಾದ್ರೆ ನೀನೇನು ರಾಜಾ ಇಲಿನಾ ಎಂದು ಭರ್ಜರಿ ತಿರುಗೇಟು ನೀಡಿದ್ದಾರೆ. ಪ್ರಸ್ತುತ ವಾಹಿನಿ ಬಿಡುಗಡೆ ಮಾಡಿರುವ ಈ ಪ್ರೋಮೋ ಎಲ್ಲರ ಕುತೂಹಲವನ್ನು ಕೆರಳಿಸಿದೆ. ಕಾಮೆಂಟ್ ಮಾಡುವವರು ಕೂಡಾ ಇಂದಿನ ಸಂಚಿಕೆ ಬಹಳ ಆಸಕ್ತಿಕರವಾಗಿದೆ ಎಂದು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಕಿತ್ತಾಟಗಳು ಇತ್ತೀಚಿಗೆ ಹೆಚ್ಚಾಗಿದೆ. ರೂಪೇಶ್ ರಾಜಣ್ಣ ಈ ವಾರ ಸ್ವಲ್ಪ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

Leave a Comment