ಶಾರೂಖ್ ಪತ್ನಿ ಗೌರಿ ಖಾನ್ ಡಿಸೈನ್ ಮಾಡಿದ ಪೆಂಗ್ವಿನ್: ಇದರ ಬೆಲೆ ಕೇಳಿ ಬೆಚ್ಚಿ ಬಿದ್ದ ನೆಟ್ಟಿಗರು!

Written by Soma Shekar

Published on:

---Join Our Channel---

ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಪತ್ನಿ ಗೌರಿ ಖಾನ್(Gauri Khan) ಸಿನಿಮಾಗಳ ಕೆಲಸಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಅದು ಮಾತ್ರವೇ ಅಲ್ಲದೇ ಗೌರಿ ಖಾನ್ ಒಬ್ಬ ಇಂಟರೀಯರ್ ಡಿಸೈನರ್ ಕೂಡಾ ಹೌದು. ಬಾಲಿವುಡ್ ಅಂಗಳದಲ್ಲಿ ಹೆಸರನ್ನು ಪಡೆದಿರುವ ಗೌರಿ ಖಾನ್(Gauri Khan) ಅವರು ಹಲವು ಬಾಲಿವುಡ್ ಸ್ಟಾರ್ ಗಳ ಮನೆಗಳಿಗೆ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ಪತಿ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದರೆ ಮತ್ತೊಂದು ಕಡೆ ಗೌರಿ ಖಾನ್ ತಮ್ಮ ಇಂಟರೀಯರ್ ಡಿಸೈನ್ ಕೆಲಸವನ್ನು ಸಹಾ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಈಗ ಒಂದು ಹೊಸ ವಿಚಾರವಾಗಿ ಗೌರಿ ಖಾನ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ಗೌರಿ ಖಾನ್ ಅವರು ಡಿಸೈನ್ ಮಾಡಿಸಿರುವ ಒಂದು ಪೆಂಗ್ವಿನ್(Gauri Khan Designed Penguin) ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮರದಿಂದ ಮಾಡಿಸಲಾಗಿರುವ ಈ ಪೆಂಗ್ವಿನ್ ಗೆ ಗೋಲ್ಡನ್ ಲುಕ್ ನೀಡಲು ಆ ರೀತಿಯ ಬಣ್ಣವನ್ನು ಹಾಕಿಸಲಾಗಿದೆ. ಆದರೆ ಗೌರಿ ಖಾನ್ ಅವರು ಡಿಸೈನ್ ಮಾಡಿಸಿರುವ ಈ ಪೆಂಗ್ವಿನ್ ನ ಬೆಲೆಯನ್ನು ನೋಡಿ ನೆಟ್ಟಿಗರು ಶಾ ಕ್ ಆಗಿದ್ದಾರೆ. ಅಲ್ಲದೇ ಆನ್ಲೈನ್ ಶಾಪಿಂಗ್ ನಲ್ಲಿ ಲಭ್ಯವಿರುವ ಈ ಪೆಂಗ್ವಿನ್ ಮತ್ತು ಅದರ ಬೆಲೆ ತಿಳಿದ ಮೇಲೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡುತ್ತಾ ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ.

ಮರದ ತುಂಡಿನಲ್ಲಿ ಮಾಡಿರುವ ಈ ಪೆಂಗ್ವಿನ್ ನ ಬೆಲೆ ಬರೋಬ್ಬರಿ 12,390 ರೂ.ಗಳು.ಟಾಟಾ ಕ್ಲಿಕ್ ಆನ್ಲೈನ್ ಶಾಪಿಂಗ್ ಸೈಟ್ ನಲ್ಲಿ ಲಭ್ಯವಿರುವ ಈ ಪೆಗ್ವಿನ್ ನೋಡಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ. ಇದೇ ವೇಳೆ ಬಣ್ಣ ಹಾಕದೇ ಇರುವ ಪೆಂಗ್ವಿನ್ ನ ಬೆಲೆ 10,030 ರೂಪಾಯಿಗಳಾಗಿದೆ. ಇದನ್ನು ನೋಡಿದ ನೆಟ್ಟಿಗರು ಅಸಲಿಗೆ ಇದು ನೋಡಲು ಪೆಂಗ್ವಿನ್ ತರ ಇಲ್ಲವೇ ಇಲ್ಲ, ಇದಕ್ಕೆ ಏಕೆ ಅಷ್ಟೊಂದು ಬೆಲೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ಇದೆಂತ ಕಲೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಆ ಸಿನಿಮಾ ಮಾಡಲು ನಾನು ಹೆದರಿದ್ದೆ: 26 ವರ್ಷಗಳ ನಂತರ ತನ್ನ ಅನುಭವ ತಿಳಿಸಿದ ನಟ ಅನಿಲ್ ಕಪೂರ್

ಇನ್ನೂ ಕೆಲವರು ರಸ್ತೆ ಬದಿಗಳಲ್ಲಿ ಇದಕ್ಕಿಂತ ಚೆನ್ನಾಗಿರುವುದು ನೂರು ರೂಪಾಯಿಗೆ ಸಿಗುತ್ತದೆ ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಶಾರೂಖ್ ಪತ್ನಿ ಗೌರಿ ಖಾನ್ ಅಲ್ಲವೇ, ಅದಕ್ಕೆ ಏನು ಮಾಡಿದರೂ ಅದೊಂದು ಕಲೆ ಬಿಡಿ ಎಂದು ಟೀಕೆ ಮಾಡಿದ್ದಾರೆ. ಆದರೆ ಇದೇ ವೇಳೆ ಗೌರಿ ಖಾನ್ ಅವರ ಅಭಿಮಾನಿಗಳು ಹೌದು ಇದೊಂದು ಕಲೆ ಎಂದರೆ ಇನ್ನೂ ಕೆಲವರು ನಿಮಗಿಷ್ಟ ಇಲ್ಲದೇ ಹೋದರೆ ಕೊಂಡು ಕೊಳ್ಳಬೇಡಿ, ಕಲೆಯನ್ನು ಅವಮಾನಿಸಬೇಡಿ ಎಂದಿದ್ದಾರೆ.

Leave a Comment