ಗಲ್ಲಾಪೆಟ್ಟಿಗೆಯಲ್ಲಿ ನಿಲ್ಲದ ಕಾಂತಾರ ಅಬ್ಬರ: 2ನೇ ವಾರದ ಗಳಿಕೆ ಎಷ್ಟು? ಅಚ್ಚರಿ ಪಡೋ ಸರದಿ ನಿಮ್ಮದು!!

Written by Soma Shekar

Published on:

---Join Our Channel---

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಬ್ಯಾನರ್ ನಲ್ಲಿ ತೆರೆಗೆ ಬಂದು ಅಬ್ಬರಿಸುತ್ತಿರುವ ಕಾಂತಾರ ಸಿನಿಮಾ ಕನ್ನಡಿಗರ ನೆಚ್ಚಿನ ಸಿನಿಮಾ ಆಗಿ ಮಿಂಚುತ್ತಿದೆ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಸಹಾ ಮೆಚ್ಚುಗೆಯ ಮಾತನ್ನು ಹೇಳುತ್ತಿರುವುದೇ ಸಿನಿಮಾಕ್ಕೆ ಸಿಕ್ಕಿರುವ ದೊಡ್ದ ಪ್ರಚಾರ ಆಗಿದೆ. ಒಂದು ಉತ್ತಮ ಕಥೆಯ ಸಿ‌ನಿಮಾ ಜನರ ಮನಸ್ಸನ್ನು ಗೆಲ್ಲುತ್ತದೆ ಎನ್ನುವುದಕ್ಕೆ ಕಾಂತಾರ ಈಗ ನಿದರ್ಶನವಾಗಿದೆ. ಕಾಂತಾರ ಸಿನಿಮಾ ಬಿಡುಗಡೆಯಾದ ಮೊದಲನೇ ವಾರ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನಗಳನ್ನು ಕಂಡಿದೆ. ಕಲೆಕ್ಷನ್ ವಿಚಾರದಲ್ಲೂ ಸಹಾ ಸಿನಿಮಾದ ಓಟ ಜೋರಾಗಿದೆ.

ಕಾಂತಾರ ಇದೀಗ ಮೊದಲನೇ ವಾರದಂತೆ ಎರಡನೇ ವಾರವೂ ಸಹಾ ಗಲ್ಲಾ ಪೆಟ್ಟಿಗೆಯನ್ನು ತುಂಬಿಸಿದೆ. ಎರಡನೇ ವಾರದಲ್ಲೂ ಸಹಾ ಯಶಸ್ವಿ ಪ್ರದರ್ಶನಗಳನ್ನು ಕಾಣುತ್ತಿರುವ ಸಿನಿಮಾ ಇದೇ ತಿಂಗಳ ಹದಿನಾಲ್ಕರಂದು ಹಿಂದಿಯಲ್ಲಿ ಮತ್ತು ಹದಿನೈದರಂದು ತೆಲುಗಿನಲ್ಲೂ ತೆರೆಗೆ ಬರಲು ಸಜ್ಜಾಗಿದೆ. ಈ ಎಲ್ಲಾ ಸುದ್ದಿಗಳ ನಡುವೆಯೇ ಕಾಂತಾರ ಸಿನಿಮಾ ಎರಡನೇ ವಾರ ಗಳಿಸಿದ ಹಣ ಎಷ್ಟು ಎನ್ನುವ ವಿಚಾರವಾಗಿ ಸುದ್ದಿಗಳು ಹರಿದಾಡಿದ್ದು, ಇದೀಗ ಅದು ಮತ್ತೊಮ್ಮೆ ಅಚ್ಚರಿ ಯನ್ನು ಉಂಟು ಮಾಡಿದೆ. ಹಾಗಾದ್ರೆ ಕಾಂತಾರ ಸಿನಿಮಾದ ಎರಡನೇ ವಾರದ ಕಲೆಕ್ಷನ್ ಎಷ್ಟು ? ತಿಳಿಯೋಣ ಬನ್ನಿ.

ಹೊರ ಬಂದಿರುವ ಸುದ್ದಿಗಳ ಪ್ರಕಾರ ಕಾಂತಾರ ಎರಡನೇ ವಾರದ ಕಲೆಕ್ಷನ್ 48.50 ಕೋಟಿ ರೂ.ಗಳು ಎನ್ನಲಾಗಿದೆ. ಪರ ಭಾಷೆ ಸಿನಿಮಾಗಳನ್ನು ಹಿಂದಿಕ್ಕೆ ಜನ ಮನ್ನಣೆ ಪಡೆದು ಮುನ್ನುಗ್ಗುತ್ತಿರುವ ಕಾಂತಾರದ ಅಬ್ಬದ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಂತಾರ ಸಿನಿಮಾದ ಎರಡನೇ ವಾರದ ಒಟ್ಟು ಕಲೆಕ್ಷನ್ 48.50 ಕೋಟಿ ರೂಪಾಯಿಗಳು ಎನ್ನಲಾಗಿದ್ದು, 50 ಕೋಟಿ ಗಳಿಕೆಯ ಕಡೆಗೆ ಸಿ‌ನಿಮಾ ದಾಪುಗಾಲು ಹಾಕುತ್ತಿದ್ದು ಅತಿ ಶೀಘ್ರದಲ್ಲೇ ಸಿನಿಮಾ ನೂರು ಕೋಟಿ ಕ್ಲಬ್ ಸೇರುತ್ತದೆ ಎನ್ನುವುದರಲ್ಲಿ ಖಂಡಿತ ಅನುಮಾನವೇ ಇಲ್ಲ.

ಎರಡನೇ ವಾರ ಕಾಂತಾರ ಕರ್ನಾಟಕದಲ್ಲಿ 46.30 ಕೋಟಿ ಗಳಿಕೆ ಕಂಡಿದ್ದು, ಬೇರೆ ಕಡೆಗಳಲ್ಲಿ 2.20 ಕೋಟಿ ರೂ ಗಳಿಸಿದೆ. ಹೀಗೆ ಎರಡೂ ಸೇರಿ ಅದು 48.50 ಕೋಟಿಗಳಾಗಿವೆ. ಇನ್ನು ಈ ವಾರ ಸಿನಿಮಾ‌ ಹಿಂದಿ ಮತ್ತು ತೆಲುಗಿನಲ್ಲಿ ಸಹಾ ಬಿಡುಗಡೆ ಆಗುತ್ತಿದ್ದು, ಅಲ್ಲಿಯೂ ಸಿನಿಮಾ ಪ್ರೇಕ್ಷಕರ ಮೇಲೆ ಮೋಡಿ ಮಾಡಲು ಸಿದ್ಧವಾಗಿದೆ. ಮಾನವ ಹಾಗೂ ಪ್ರಕೃತಿಯ ಸಂಬಂಧದ ಜೊತೆಗೆ ದೈವ ಹಾಗೂ ಸಾಂಸ್ಕೃತಿಕ ಪರಂಪರೆಯ ಪರಿಣಾಮಕಾರಿ ಪ್ರಯೋಗ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿದೆ. ಶೀಘ್ರದಲ್ಲೇ ಸಿನಿಮಾ ನೂರು ಕೋಟಿ ಕ್ಲಬ್ ಸೇರಿ ಮತ್ತೆ ಸುದ್ದಿಯಾದರೆ ಅದು ಅಚ್ಚರಿಯೇನಲ್ಲ.

Leave a Comment