ಗಡಿ ದಾಟಿದ ಸೋನು ಸೂದ್ ನೆರವು: ಉಕ್ರೇನ್ ನಿಂದ ಸುರಕ್ಷಿತವಾಗಿ ಬಂದಿಳಿದ ವಿದ್ಯಾರ್ಥಿಗಳು

Written by Soma Shekar

Published on:

---Join Our Channel---

ಭಾರತದಲ್ಲಿ ಕೊರೊನಾ ಅಬ್ಬರಿಸಿದಾಗ ಸಾಮಾನ್ಯ ಜನರು ಕಂಗಾಲಾಗಿ ಸಹಾಯಕ್ಕಾಗಿ ಕಾಯುತ್ತಿರುವಾಗ ಅವರ ನೆರವಿಗೆ ಧಾವಿಸಿದವರು ನಟ ಸೋನು ಸೂದ್. ಅವರು ನೀಡಿದ ಸಹಾಯದಿಂದಾಗಿ ಜನರು ಅವರನ್ನು ರಿಯಲ್ ಹೀರೋ ಎಂದೇ ಕರೆಯಲು ಆರಂಭಿಸಿದರು. ಆಗ ಸೋನು ತಮ್ಮ ಸ್ವಂತ ಜವಾಬ್ದಾರಿಯಲ್ಲಿ, ತಾವೇ ತಮ್ಮ ಹಣವನ್ನು ಖರ್ಚು ಮಾಡಿ ಅದೆಷ್ಟೋ ಜನ ಬಡ ಕೂಲಿ ಕಾರ್ಮಿಕರನ್ನು ತಮ್ಮ ತಮ್ಮ ಊರುಗಳಿಗೆ ಸುರಕ್ಷಿತವಾಗಿ ತಲುಪಿಸಿ ಅಪಾರವಾದ ನೆರವನ್ನು ಒದಗಿಸಿದಾಗ, ಜನರು ಅವರಿಗೆ ಕೈ ಮುಗಿದಿದ್ದರು.

ಇದೀಗ ನಟ ಸೋನು ಸೂದ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸ ಮ ರ ದಿಂದ ಅಲ್ಲಿ ಸಂ ಕ ಷ್ಟಕ್ಕೆ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ಸುರಕ್ಷಿತವಾಗಿ ಕರೆ ತರಲು ಸೋನು ಸೂದ್ ಮುಂದಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಉಕ್ರೇನ್ ನಲ್ಲಿ ಯು ದ್ದ ಪೀ ಡಿತ ಪ್ರದೇಶಗಳಿಂದ ಹಲವು ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲು ಸೋನು ಸೂದ್ ನೆರವನ್ನು ನೀಡಿದ್ದಾರೆ ಎನ್ನಲಾಗಿದೆ.

ಕೀವ್ ನಿಂದ ಎಲ್ವಿವ್ ಗೆ ತಲುಪಲು ಸೋನು ಸೂದ್ ಅವರ ತಂಡವು ಸಹಾಯ ಮಾಡಿದೆ ಎಂದು ಹರ್ಷ ಎನ್ನುವ ವಿದ್ಯಾರ್ಥಿ ಹೇಳಿದ್ದಾರೆ. ಅಲ್ಲದೇ ಮತ್ತೊಬ್ಬ ವಿದ್ಯಾರ್ಥಿನಿಯು ಸಹಾ ಇದೇ ಮಾತನ್ನು ಹೇಳಿದ್ದು, ತಾನು ಪೋಲೆಂಡ್ ಗಡಿಯನ್ನು ದಾಟಿರುವುದಾಗಿ ಹೇಳಿದ್ದಾಳೆ. ಉಕ್ರೇನ್ ನಲ್ಲಿರುವ ವಿದ್ಯಾರ್ಥಿಗಳು ಸೋನು ಅವರ ತಂಡವನ್ನು ತಲುಪಿದ ಕೂಡಲೇ ಅವರಿಗೆ ಸ್ಥಳೀಯ ಟ್ಯಾಕ್ಸಿ ಗಳನ್ನು ವ್ಯವಸ್ಥೆ ಮಾಡಿ, ರೈಲ್ವೆ ನಿಲ್ದಾಣಗಳಿಗೆ ಕಳುಹಿಸಲಾಗುತ್ತಿದೆ ಎಂದು ಸೋನು ಹಿಂದೂಸ್ತಾನ್ ಟೈಮ್ಸ್ ಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಅಲ್ಲಿಂದ ರೈಲುಗಳನ್ನು ಹತ್ತಬಹುದು ಮತ್ತು ಎಲ್ವಿವ್ ನಂತಹ ಸುರಕ್ಷಿತ ಪ್ರದೇಶಗಳಿಗೆ ತೆರಳಬಹುದು ಎನ್ನಲಾಗಿದೆ. ಅಲ್ಲಿಂದ ಪೋಲಿಶ್ ಗಡಿಗೆ ಸಾಗಿಸಲು ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.‌ ಟಿಕೆಟ್ ದರವನ್ನು ಭರಿಸಲಾಗದವರಿಗೆ ವಿಮಾನ ದರವನ್ನು ಸಹಾ ನೀಡುತ್ತಿದ್ದು, ಅವರು ಸುರಕ್ಷಿತವಾಗಿ ಇಲ್ಲಿಗೆ ತಲುಪುವ ಎಲ್ಲಾ ಪ್ರಯತ್ನ ಮಾಡುತ್ತಿರುವುದಾಗಿ ಸೋನು ಹೇಳಿದ್ದಾರೆ.‌

Leave a Comment