ಗಟ್ಟಿಮೇಳದ ಅಂಜು ಖ್ಯಾತಿಯ ಮಹತಿ ವೈಷ್ಣವಿ ಭಟ್ SSLC ಯಲ್ಲಿ ಭರ್ಜರಿ ರಿಸಲ್ಟ್: ಪಡೆದ ಅಂಕ ಎಷ್ಟು ಗೊತ್ತಾ??

Written by Soma Shekar

Published on:

---Join Our Channel---

ನಿನ್ನೆಯಷ್ಟೇ 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇನ್ನು ಈ ಬಾರಿ ಶೇಕಡ 85.63 ರಷ್ಟು ಫಲಿತಾಂಶ ಬಂದಿದೆ. ಅಲ್ಲದೇ ಇದು ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆಯ ಫಲಿತಾಂಶ ಎನ್ನಲಾಗಿದೆ. ಈ ಬಾರಿ 625/625 ಅಂದರೆ ಔಟ್ ಆಫ್ ಔಟ್ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 145 ಆಗಿದೆ. ಈಗ ಮತ್ತೊಂದು ಆಸಕ್ತಿಕರ ವಿಚಾರ ಏನೆಂದರೆ ಕನ್ನಡದ ಕಿರುತೆರೆಯ ಟಾಪ್ ಸೀರಿಯಲ್ ಆಗಿರುವ ಗಟ್ಟಿ ಮೇಳ ಸೀರಿಯಲ್ ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಕಿರುತೆರೆ ನಟಿ ಮಹತಿ ವೈಷ್ಣವಿ ಭಟ್ ಸಹಾ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ.

ಗಟ್ಟಿ ಮೇಳ ಸೀರಿಯಲ್ ನಲ್ಲಿ ಅಂಜು ಖ್ಯಾತಿಯ ನಟಿಯಾಗಿರುವ ಮಹತಿ ವೈಷ್ಣವಿ ಭಟ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 619 ಅಂಕಗಳನ್ನು ಅಂದರೆ 99.04% ಅಂಕಗಳನ್ನು ಗಳಿಸಿದ್ದಾರೆ. ವೈಷ್ಣವಿ ಅವರು ಕನ್ನಡದಲ್ಲಿ 124, ಇಂಗ್ಲೀಷ್ ಭಾಷೆಯಲ್ಲಿ 100, ಹಿಂದಿಯಲ್ಲಿ 99, ಗಣಿತದಲ್ಲಿ 100, ವಿಜ್ಞಾನದಲ್ಲಿ 97, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾರೆ. ಫಲಿತಾಂಶ ಹೊರಗೆ ಬಂದ ಮೇಲೆ ವೈಷ್ಣವಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು ಖುಷಿಯನ್ನು ಸಂಭ್ರಮಿಸಿದ್ದಾರೆ.

ವೈಷ್ಣವಿ ತಮ್ಮ ಪೋಸ್ಟ್ ನಲ್ಲಿ, ಹೌದು!! ಫಲಿತಾಂಶ ಹೊರಬಂದಿವೆ!! ನಿಜವಾಗಿಯೂ ಸಂತೋಷವಾಯಿತು! 99.04 % ಅಂಕ ಗಳಿಸಿದ್ದೇನೆ. ಅಮ್ಮಾ, ಪಪ್ಪಾ, ಅಣ್ಣಾ, ಅಮ್ಮಾ, ತಾತಯ್ಯ.. ನನ್ನ ಶಿಕ್ಷಕರು ಮತ್ತು ಶಾಲೆ ಕೂಡ ನನ್ನನ್ನು ಅಧ್ಯಯನದಲ್ಲಿ ಮತ್ತು ನಟನೆ ಎರಡರಲ್ಲೂ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನಿಮ್ಮ ನಿರಂತರ ಬೆಂಬಲಕ್ಕಾಗಿ ಗಟ್ಟಿಮೇಳ ತಂಡಕ್ಕೆ ಧನ್ಯವಾದಗಳು ಮತ್ತು ಜೀ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನೀವು ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ !!

https://www.instagram.com/p/Cdu_2N6LJe8/?igshid=YmMyMTA2M2Y=

ನನ್ನ insta ಕುಟುಂಬಕ್ಕೆ ವಿಶೇಷ ಧನ್ಯವಾದಗಳು , ಏಕೆಂದರೆ ಪರೀಕ್ಷೆಗಳ ಕಾರಣ, ನನಗೆ ಏನನ್ನೂ ಪೋಸ್ಟ್ ಮಾಡಲು ಅಥವಾ ನಿಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ !! ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು !! ಎಂದು ಬರೆದು ಕೊಂಡಿದ್ದಾರೆ. ಮಹತಿ ಹಂಚಿಕೊಂಡ ಪೋಸ್ಟ್ ಗೆ ಅನೇಕ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಾ ಶುಭ ಹಾರೈಸಿದ್ದಾರೆ‌ ಹಾಗೂ ಅನೇಕರು ಅವರ ಉಜ್ವಲ ಭವಿಷ್ಯಕ್ಕೆ ಶುಭವನ್ನು ಕೋರುತ್ತಿದ್ದಾರೆ.

Leave a Comment