ದಶಕಗಳ ಕಾಲ ಜನರನ್ನು ನಗಿಸಿದ ಈ ನಟಿಯ ಖಾಸಗಿ ಜೀವನ ಕಣ್ಣೀರ ಕಥೆಯಾ? ಸ್ವಂತ ತಂಗಿಯರೇ ಮೋಸ ಮಾಡಿದ್ದು ನಿಜವೇನಾ?

Written by Soma Shekar

Published on:

---Join Our Channel---

ಕೋವೈ ಸರಳ(Kovai Sarala) ಈ ಹೆಸರಿಗೆ ಪ್ರತ್ಯೇಕ ಪರಿಚಯದ ಅಗತ್ಯ ಖಂಡಿತ ಇಲ್ಲ. ದಕ್ಷಿಣ ಸಿನಿಮಾ ರಂಗದ(South Cinema) ಪ್ರಮುಖ ಹಾಸ್ಯ ನಟಿಯಾಗಿ ಹೆಸರು ಮಾಡಿರುವ ಇವರು, ಮೂಲತಃ ತಮಿಳಿನವರೇ(Tamil) ಆದರೂ ದೊಡ್ಡ ಸ್ಟಾರ್ ಡಂ ಪಡೆದ ಹಾಸ್ಯ ನಟಿಯಾಗಿ ಹೆಸರನ್ನು, ಜನಪ್ರಿಯತೆಯನ್ನು ಪಡೆದಿರುವುದು ಮಾತ್ರ ತೆಲುಗು ಸಿನಿಮಾ ರಂಗದಲ್ಲಿ(Telugu Cinema). ಕೋವೈ ಸರಳ ಎಂದರೆ ಟಾಲಿವುಡ್(Tollywood) ಸಿನಿ ಪ್ರಿಯರಿಗೆ ಅಚ್ಚು ಮೆಚ್ಚು ಹಾಗೂ ಅವರನ್ನು ಅಭಿಮಾನಿಸುವ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈಗ ಹೆಚ್ಚು ಸಿನಿಮಾಗಳಲ್ಲಿ ಅವರು ನಟಿಸದೇ ಇದ್ದರೂ ಸಹಾ ತಮಗಾಗಿ ಚಿತ್ರರಂಗದಲ್ಲೊಂದು ಸ್ಥಾನ ಪಡೆದಿದ್ದಾರೆ.

ಅರವತ್ತರ ಆಸುಪಾಸಿಗೆ ಬಂದಿರುವ ನಟಿ ಕೋವೈ ಸರಳ ಅವರು ಇನ್ನೂ ಮದುವೆಯಾಗದೆ ಹಾಗೇ ಉಳಿದಿದ್ದಾರೆ. ಕೋವೈ ಸರಳ(kovai Sarala) ಅವರು ಹೀಗೆ ಮದುವೆಯಾಗದೇ ಇನ್ನೂ ಕೂಡಾ ಅವಿವಾಹಿತೆ (kovai sarala unmarried) ಆಗಿ ಉಳಿದಿರುವ ಹಿಂದೆ ಒಂದು ದೊಡ್ಡ ಕಾರಣವೇ ಇದೆ. ಸಾಮಾನ್ಯವಾಗಿ ಮಹಿಳೆಯರು ಕಾಮಿಡಿ ಪಾತ್ರಗಳಲ್ಲಿ ಸ್ಟಾರ್ ಗಳಾಗಿ ಮೆರೆಯುವುದು ಅಪರೂಪ. ಆದರೆ ಅಂತಹ ಒಂದು ಸಾಧನೆ ಮಾಡಿದವರಲ್ಲಿ ನಟಿ ಕೋವೈ ಸರಳ ಸಹಾ ಒಬ್ಬರಾಗಿದ್ದಾರೆ.

ಸುಮಾರು ಎರಡೂವರೆ ದಶಕಗಳ ಕಾಲ ದಕ್ಷಿಣ ಸಿನಿಮಾ ರಂಗದಲ್ಲಿ ಅಂದರೆ ತೆಲುಗು ಮತ್ತು ತಮಿಳಿನಲ್ಲಿ ಭಾರೀ ಬೇಡಿಕೆಯನ್ನು ಪಡೆದಿರುವ ಹಾಸ್ಯ ನಟಿಯಾಗಿದ್ದವರು. ಮೂರು ಭಾಷೆಗಳಲ್ಲಿ ನಟಿಸಿದ ಕೋವೈ ಸರಳ ಅವರು ಸರಿ ಸುಮಾರು 800 ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ತೆಲುಗಿನ ಹಾಸ್ಯ ಬ್ರಹ್ಮ ಬ್ರಹ್ಮಾನಂದಂ (Brahmanandam) ಕಾಂಬಿನೇಷನ್ ನಲ್ಲಿ ಕೋವೈ ಸರಳ ಸೂಪರ್ ಹಿಟ್ ಆದವರು.

ಹೀಗೆ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಂಡ ನಟಿ ಕೋವೈ ಸರಳ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಹೌದು, ನಟಿ ಕೋವೈ ಸರಳ ಇಂದಿಗೂ ಮದುವೆಯಾಗದೇ ಉಳಿದಿದ್ದಾರೆ. ಇದಕ್ಕೆ ಕಾರಣ ಅವರು ತಮ್ಮ ಕುಟುಂಬಕ್ಕಾಗಿ ಮಾಡಿದ ತ್ಯಾಗ ಎಂದರೆ ಅದರಲ್ಲಿ ಎರಡು ಮಾತಿಲ್ಲ. ನಾಲ್ಕು ಜನ ತಂಗಿಯರು ಇದ್ದ ಬಡ ಕುಟುಂಬಕ್ಕೆ ಹಿರಿಯ ಮಗಳು ಕೋವೈ ಸರಳ.

ಹಿರಿಯ ಅಕ್ಕನಾಗಿ ತನ್ನ ತಂಗಿಯರ ಜವಾಬ್ದಾರಿಯನ್ನು ಹೊತ್ತುಕೊಂಡ ಕೋವೈ ಸರಳ ಅವರು, ತಂಗಿಯರ ಜೀವನವನ್ನು ಒಳ್ಳೆ ದಾರಿಗೆ ತರುವುದಕ್ಕಾಗಿಯೇ ತಮ್ಮ ಜೀವನವೆಲ್ಲಾ ಸವೆಸಿದರು.
ತಾನು ಗಳಿಸಿದ ಹಣವನ್ನೆಲ್ಲಾ ತಮ್ಮ ತಂಗಿಯರಿಗಾಗಿಯೇ ಖರ್ಚು ಮಾಡಿದರು ಕೋವೈ ಸರಳ. ತಂಗಿಯರಿಗಾಗಿ ತಮ್ಮ ಜೀವನವನ್ನೇ ಮರೆತರು ಕೋವೈ ಸರಳ.

ತಂಗಿಯರ ಮದುವೆಯನ್ನು ಮಾಡಿ, ಅವರನ್ನು ಒಂದು ಹಂತಕ್ಕೆ ತರುವ ವೇಳೆಗೆ ನಟಿಯ ಜೀವನದ ಮಹತ್ವದ ವರ್ಷಗಳು ಕಳೆದು ಹೋಗಿದ್ದವು. ಆ ಸಮಯದಲ್ಲಿ ತಾನು ಮದುವೆಯಾಗಬೇಕು, ತನಗೂ ಒಂದು ಜೀವನವಿದೆ ಎನ್ನುವ ವಿಚಾರಕ್ಕೆ ಕೋವೈ ಸರಳ ಅವರು ಗಮನವನ್ನೇ ನೀಡಲಿಲ್ಲ. ತಂಗಿಯರ ಬಗ್ಗೆ ಯೋಚಿಸುತ್ತಾ ತಾನು ಒಂಟಿಯಾಗಿಯೇ ಉಳಿದು ಬಿಟ್ಟರು.

ಪ್ರಸ್ತುತ ಕೋವೈ ಸರಳ (Kovai Sarala) ಅವರು ತಮ್ಮ ತಂಗಿಯರ ಮಕ್ಕಳು, ಮೊಮ್ಮಕಳೊಡನೆ ಸಮಯವನ್ನು ಕಳೆಯುತ್ತಾ ಇದ್ದಾರೆ. ತಾನು ಮದುವೆಯಾಗಿಲ್ಲ ಎಂದು ನಟಿ ಎಂದೂ ಕೂಡಾ ದುಃಖ ಪಟ್ಟಿಲ್ಲ. ಅಂತಹ ಪರಿಸ್ಥಿತಿ ಸಹಾ ನನಗೆ ಬಂದಿಲ್ಲ ಎನ್ನುವ ನಟಿ ಕೋವೈ ಸರಳ, ನನ್ನ ತಂಗಿಯರು ಸಂತೋಷವಾಗಿದ್ದಾರೆ ಅದೇ ನನಗೆ ಖುಷಿ ಎನ್ನುತ್ತಾರೆ. ಕೋವೈ ಸರಳ ಅವರ ಈ ತ್ಯಾಗ ಕಂಡು ಅವರ ಅಭಿಮಾನಿಗಳು ಸಹಾ ಮೆಚ್ಚುಗೆ ನೀಡಿದ್ದಾರೆ.

Leave a Comment