ಕೊರಗಜ್ಜ ದೈವದ ಪ್ರಾರ್ಥನೆ ಮಾಡಿ ಇರಿಸಿದ ವೀಳ್ಯದೆಲೆಯಲ್ಲಿ ಮೂಡಿದ ಅಚ್ಚರಿ: ಇಮ್ಮಡಿಯಾದ ಭಕ್ತರ ನಂಬಿಕೆ

Written by Soma Shekar

Published on:

---Join Our Channel---

ಕೊರಗಜ್ಜ ದೈವವು ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅಲ್ಲದೆ ಕೊರಗಜ್ಜ ದೈವದ ಕುರಿತಾಗಿಯೂ, ಆ ದೈವದ ಶಕ್ತಿಗಳ ಸಂಬಂಧಪಟ್ಟಂತಹ ಹಲವಾರು ವಿಚಾರಗಳು ಈಗಾಗಲೇ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಸುದ್ದಿಯಾಗಿದೆ. ಮಲೆನಾಡ ಸೀಮೆಯಲ್ಲಿ ಕೊರಗಜ್ಜ ದೈವಕ್ಕೆ ಇರುವ ಪ್ರಾಧಾನ್ಯತೆ ಅಪಾರವಾಗಿದೆ. ಈಗ ಈ ದೈವದ ಕುರಿತಾಗಿ ಹೊಸ ಕುತೂಹಲಕಾರಿ ಬೆಳವಣಿಗೆಯೆಂದು ಕಂಡುಬಂದಿದ್ದು, ಭಕ್ತರಿಗೆ ಈಗ ಓ ದೈವದ ಮೇಲೆ ಇನ್ನಷ್ಟು ಆಸ್ಥೆಯನ್ನು ಮೂಡಿಸುವಂತಹ ಘಟನೆ ಇದಾಗಿದೆ. ಈ ಘಟನೆಯು ಇದೀಗ ಎಲ್ಲರ ಆಸಕ್ತಿಯನ್ನು ಕೆರಳಿಸುವ ಜೊತೆಗೆ ಇದು ಕೊರಗಜ್ಜನ ಮಹಿಮೆಯೆಂದೇ ಹೇಳಲಾಗುತ್ತಿದೆ.

ಇಂತಹದ್ದೊಂದು ಅಚ್ಚರಿಯನ್ನು ಮೂಡಿಸಿದ ಘಟನೆಯ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ನಡೆದಿದೆ. ಇಲ್ಲಿನ ಶೀನಪ್ಪ ಅವರು ಕಳೆದ ತಿಂಗಳು ತಮ್ನ ಮಗುವಿಗೆ ಅನಾರೋಗ್ಯ ಇದ್ದಾಗ, ಅವರು ತಮ್ಮ ಮನೆಯ ವಠಾರದಲ್ಲಿ ಇರುವ ಕೊರಗಜ್ಜ ದೈವಕ್ಕೆ ವೀಳೆಯದೆಲೆ, ಅಡಿಕೆಯನ್ನು ಇರಿಸಿ, ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನು ಮಾಡಿದ್ದರು. ಕೆಲವು ದಿನಗಳ ಕಾಲ ಹಸಿರಾಗಿಯೇ ಇದ್ದ ವೀಳ್ಯದೆಲೆಯಲ್ಲಿ ಬೇರು ಬರಲು ಪ್ರಾರಂಭಿಸಿದೆ. ತಕ್ಷಣವೇ ಶೀನಪ್ಪ ಅವರು ದೈವಜ್ಞರ ಸಲಹೆಯನ್ನು ಪಡೆದ ನಂತರ ಸತ್ಯದ ಅರಿವಾಗಿದೆ ಎನ್ನಲಾಗಿದೆ.

ಮಗು ಆರೋಗ್ಯವಾಗಿದೆ ಎಂದು ಅವರಿಗೆ ತಿಳಿದು ಬಂದಿದೆ. ಅಲ್ಲದೇ ಅವರು ಹಸಿರಾಗಿಯೇ ಉಳಿದಿರುವ ವೀಳ್ಯದೆಲೆಯನ್ನು ಹೂಕುಂಡದಲ್ಲಿ ಹೇಳಿಸಿದ್ದಾರೆ. ವಿಶೇಷ ಎನ್ನುವಂತೆ ಆ ವೀಳ್ಳೆದೆಲೆಯು ಇನ್ನೂ ಹಸಿರಾಗಿಯೇ ಇದೆ ಎನ್ನಲಾಗುತ್ತಿದೆ. ವೀಳ್ಯೆದೆಲೆಯು ಸಾಮಾನ್ಯವಾಗಿ ಕೆಲವು ದಿನಗಳ ನಂತರ ಬಾಡಿಹೋಗುತ್ತದೆ. ಆದರೆ ಕೊರಗಜ್ಜನ ಕಟ್ಟೆಯಲ್ಲಿ ಇರಿಸಲಾಗಿರುವ ಎಲೆಯು ಮಾತ್ರ ಇನ್ನೂ ಹಸಿರಾಗಿಯೇ ಇರುವ ಮೂಲಕ ಬಹಳ ಅಚ್ಚರಿಯನ್ನು ಮೂಡಿಸಿದೆ. ಕೊರಗಜ್ಜ ದೈವದ ಬಗ್ಗೆ ಭಕ್ತರ ನಂಬಿಕೆ ದುಪ್ಪಟ್ಟಾಗುತ್ತಿದೆ.

Leave a Comment