ಕೊನೆಗೂ ರಾಜಕೀಯಕ್ಕೆ ಗುಡ್ ಬೈ ಹೇಳಿದ್ರಾ ಮೆಗಾಸ್ಟಾರ್ ಚಿರಂಜೀವಿ?? ಹೌದು ಎನ್ನುತ್ತಿವೆ ಈ ಬೆಳವಣಿಗೆಗಳು

Written by Soma Shekar

Published on:

---Join Our Channel---

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಎನ್ನುವ ಹೆಸರನ್ನು, ಅಸಂಖ್ಯಾತ ಅಭಿಮಾನಿಗಳನ್ನು ಪಡೆದುಕೊಂಡು, ತೆಲುಗು ಚಿತ್ರರಂಗದಲ್ಲೊಂದು ದಂತಕಥೆ ಎನಿಸಿಕೊಂಡಿರುವ ನಟ ಚಿರಂಜೀವಿ ಅವರು. ಭಾರತೀಯ ಸಿನಿಮಾ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಒಂದು ಕೋಟಿ ರೂ.ಗಳ ಪಾರಿತೋಷಕ ಪಡೆದುಕೊಂಡ ನಟ ಎನ್ನುವ ಹೆಗ್ಗಳಿಕೆಯನ್ನು ಸಹಾ ಅವರು ಪಡೆದುಕೊಂಡಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಚಿರಂಜೀವಿ ಅವರ ಕೆಲವು ಸಿನಿಮಾಗಳು ತೆಲುಗು ಚಿತ್ರ ಸೀಮೆಯಲ್ಲಿ ಎವರ್ ಗ್ರೀನ್ ಸಿನಿಮಾಗಳು ಎನಿಸಿಕೊಂಡಿದೆ.

ಆಂಧ್ರ ಪ್ರದೇಶದಲ್ಲಿ ಎನ್ ಟಿ ಆರ್ ನಂತರ ಅದೇ ಹಾದಿಯಲ್ಲಿ ನಡೆದ ಮೆಗಾಸ್ಟಾರ್ ಅವರು ಸಿನಿಮಾ ರಂಗದಿಂದ ಪಡೆದ ದೊಡ್ಡ ಜನಪ್ರಿಯತೆ ಹಾಗೂ ಅಭಿಮಾನಗಳ ಪ್ರೀತಿಯಿಂದ ರಾಜಕೀಯ ರಂಗವನ್ನು ಪ್ರವೇಶ ಮಾಡಿದರು. ಪ್ರಜಾರಾಜ್ಯಂ ಪಾರ್ಟಿ ಕಟ್ಟಿದರು. ರಾಜಕೀಯಕ್ಕಾಗಿ ಅವರು ತಮ್ಮ ಸಿನಿಮಾ ಜಗತ್ತನ್ನು ಬದಿಗಿಟ್ಟು ಒಂದು ದಶಕ ಕಾಲ ಶ್ರಮಿಸಿದರು. ಆದರೆ ಸಿನಿಮಾ ರಂಗದಲ್ಲಿ ಗಳಿಸಿದ ಯಶಸ್ಸು ಚಿರಂಜೀವಿ ಅವರಿಗೆ ರಾಜಕೀಯ ರಂಗದಲ್ಲಿ ಸಿಗಲೇ ಇಲ್ಲ.

ಅಲ್ಲದೇ ರಾಜಕೀಯದ ಕಡೆ ಗಮನ ನೀಡಿದ ಚಿರಂಜೀವಿ ಅವರು ಸಿನಿ ಕೆರಿಯರ್ ಕಡೆಗೆ ಮೊದಲಿನ ಹಾಗೆ ಗಮನ ನೀಡುವುದು ಸಾಧ್ಯವಾಗಲಿಲ್ಲ. ಕೆಲವು ಸಂದರ್ಭಗಳಲ್ಲಿ ಸ್ವತಃ ಚಿರಂಜೀವಿ ಅವರೇ ಸಿನಿಮಾಗಳಿಂದ ದೂರ ಉಳಿದು ತಾನು ಬಹಳಷ್ಟು ಕಳೆದುಕೊಂಡೆ ಎಂದು ಹೇಳಿದಾಗ, ಎಲ್ಲೋ ಒಂದು ಕಡೆ ಚಿರಂಜೀವಿ ಅವರಿಗೂ ರಾಜಕೀಯದ ಕಡೆಗೆ ಒಲವು ಕಡಿಮೆಯಾಗಿದೆಯೇನೋ ಎನ್ನುವ ಅನುಮಾನ ಸಹಾ ಮೂಡುವಂತಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ಚಿರಂಜೀವಿ ಅವರು ಸೈರಾ ನರಸಿಂಹಾರೆಡ್ಡಿ ಸಿನಿಮಾದಲ್ಲಿ ಮಿಂಚಿದರು, ಈಗಂತೂ ಚಿರಂಜೀವಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗುವ ಮೂಲಕ ರಾಜಕೀಯಕ್ಕೆ ವಿದಾಯ ಹೇಳಿದಂತೆ ಕಾಣುತ್ತಿದೆ. ಹೌದು ಪ್ರಸ್ತುತ ಚಿರಂಜೀವಿ ಅವರ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆಚಾರ್ಯ ಬಿಡುಗಡೆಗಾಗಿ ಸಜ್ಜಾಗಿದೆ. ಹಾಗೆಂದು ಚಿರಂಜೀವಿ ಅವರು ಈ ಸಿನಿಮಾ ನಂತರ ಮತ್ತೆ ರಾಜಕೀಯದ ಕಡೆಗೆ ಗಮನ ನೀಡಿದ್ದಾರೆಯೇ ಎಂದರೆ ಇಲ್ಲ ಎನ್ನಬಹುದು.

ಏಕೆಂದರೆ ಆಚಾರ್ಯ ಮುಗಿದ ಕೂಡಲೇ ನಟ ಚಿರಂಜೀವಿ ಅವರು ಬೋಳಾ ಶಂಕರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಬೋಳಾ ಶಂಕರ್ ಸಿನಿಮಾ ಮುಗಿಯುವ ಮೊದಲೇ ಮಲೆಯಾಳಂ ನ ಸೂಪರ್ ಹಿಟ್ ಸಿನಿಮಾ ಲೂಸಿಫರ್ ನ ತೆಲುಗು ರಿಮೇಕ್ ಗಾಡಫಾದರ್ ಸಿನಿಮಾದಲ್ಲಿ ನಾಯಕನಾಗಿ ನಟಿಸುವ ವಿಷಯ ಸಹಾ ಘೋಷಣೆ ಆಗಿದೆ. ಹೀಗೆ ಚಿರಂಜೀವಿ ಅವರು ಸಾಲು ಸಾಲು ಸಿನಿಮಾಗಳು, ಚಿತ್ರೀಕರಣದ ಶೆಡ್ಯೂಲ್ ಗಳಲ್ಲಿ ಬ್ಯುಸಿಯಾಗಿರುವುದರಿಂದ ಅವರು ರಾಜಕೀಯದಿಂದ ದೂರವೇ ಉಳಿದಿದ್ದಾರೆ ಎಂದು ಅನುಮಾನ ಇಲ್ಲದೇ ಹೇಳಬಹುದು.

Leave a Comment