ಕೊನೆಗೂ ಆಗೇ ಹೋಯ್ತು ಬದಲಾವಣೆ! ಓಟಿಟಿಯಲ್ಲಿ ಕಾಂತಾರ ನೋಡೋರಿಗೆ ಬಿಗ್ ಶಾಕ್! ಬೇಸರ ಮತ್ತು ಅಸಮಾಧಾನ

Written by Soma Shekar

Published on:

---Join Our Channel---

ಚಿತ್ರ ಮಂದಿರಗಳಲ್ಲಿ ಇನ್ನೂ ಕಾಂತಾರದ ಅಬ್ಬರ ಕಡಿಮೆಯಾಗಿಲ್ಲ. ಕನ್ನಡ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲೂ ಕಾಂತಾರ ಸದ್ದು ಮಾಡಿದೆ. ಐವತ್ತು ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಸಹಾ ಹಿಂದೆ ಬಿದ್ದಿಲ್ಲ. ಈಗಾಗಲೇ ನಾನೂರು ಕೋಟಿ ರೂ.ಗಳ ಕಲೆಕ್ಷನ್ ಮಾಡಿರುವ ಸಿನಿಮಾ ಇದೀಗ ಬೆಳ್ಳಿ ತೆರೆಯ ನಂತರ ಓಟಿಟಿಗೆ ಪ್ರವೇಶ ನೀಡಿದೆ. ನವೆಂಬರ್ 24 ರಿಂದ ಕಾಂತಾರ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ. ಕಾಂತಾರ ಸಿನಿಮಾವನ್ನು ಮತ್ತೆ ಮತ್ತೆ ನೋಡಲು ಬಯಸುವವರಿಗೆ ಕಾಂತಾರ ಈಗ ಇನ್ನೂ ಸುಲಭವಾಗಿ ಲಭ್ಯವಾಗಿದೆ. ಆದರೆ ಈ ಖುಷಿಯ ಬೆನ್ನಲ್ಲೇ ಬೇಸರದ ವಿಚಾರವೊಂದು ಸಹಾ ಹೊರಗೆ ಬಂದಿದ್ದು, ಅನೇಕರಿಗೆ ಅಸಮಾಧಾನ ಉಂಟು ಮಾಡಿದೆ.

ಕಾಂತಾರ ಸಿನಿಮಾದಲ್ಲಿನ ಪ್ರಮುಖ ಆಕರ್ಷಣೆ ಕ್ಲೈಮ್ಯಾಕ್ಸ್ ನಲ್ಲಿನ ವರಾಹ ರೂಪಂ ಹಾಡು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಹಾಡಿನ ಮೋಡಿಗೆ ಒಳಗಾಗದವರು ಯಾರಿದ್ದಾರೆ. ಆದರೆ ಕಾಂತಾರ ಸಿನಿಮಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾದ ನಂತರ ವರಾಹ ರೂಪಂ ಹಾಡಿನ ಬಗ್ಗೆ ವಿ ವಾ ದವೊಂದು ಎದ್ದಿತ್ತು. ಕಾಂತಾರ ಸಿನಿಮಾದ ಈ ಹಾಡನ್ನು ಐದು ವರ್ಷಗಳ ಹಿಂದೆ ಬಂದಿದ್ದ ಮಲೆಯಾಳಂ ನ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ನ ನವರಸಂ ಹಾಡಿನ ಕಾಪಿ ಎಂದು ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿ ನ್ಯಾಯ ಒದಗಿಸುವಂತೆ ಮನವಿಯನ್ನು ಮಾಡಿತ್ತು.

ಇದಾದ ನಂತರ ಕೇರಳ ಹೈ ಕೋರ್ಟ್ ಕಾಂತಾರ ಸಿನಿಮಾದಲ್ಲಿ ಈ ಹಾಡನ್ನು ಬಳಕೆ ಮಾಡಬಾರದು ಎನ್ನುವ ಆದೇಶವನ್ನು ಹೊರಡಿಸಿತ್ತು. ಈಗ ಇದೇ ಓಟಿಟಿಯಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಹೌದು, ಕಾಂತಾರ ಸಿನಿಮಾದಲ್ಲಿನ ವರಾಹ ರೂಪಂ ಹಾಡನ್ನು ನೋಡಲು ಬಯಸುವವರಿಗೆ ಓಟಿಟಿಯಲ್ಲಿ ದೊಡ್ಡ ಶಾ ಕ್ ಎದುರಾಗಿದೆ‌. ಏಕೆಂದರೆ ಓಟಿಟಿಯಲ್ಲಿ ಬಿಡುಗಡೆ ಆಗಿರುವ ಕಾಂತಾರ ಸಿನಿಮಾದಲ್ಲಿ ಕೊನೆಯಲ್ಲಿ ವರಾಹ ರೂಪಂ ಹಾಡಿನ ಟ್ಯೂನ್ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಸಿನಿಮಾದಲ್ಲಿನ ಟ್ಯೂನ್ ಕೇಳಲು ಬಯಸುವವರಿಗೆ ಓಟಿಟಿಯಲ್ಲಿ ದೊಡ್ಡ ನಿರಾಸೆ ಎದುರಾಗಿದೆ.

ಹಾಡು ವರಾಹರೂಪಂ ಆದರೂ ಅದರ ಟ್ಯೂನ್ ಬದಲಾಗಿದೆ. ಹೊಸ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ಇದರಿಂದಾಗಿ ವರಾಹ ರೂಪಂ ಒರಿಜಿನಲ್ ಹಾಡನ್ನು ಇಷ್ಟ ಪಟ್ಟು ನೋಡಲು ಬಯಸಿದ್ದ ಅನೇಕರಿಗೆ ಬೇಸರ ಉಂಟು ಮಾಡಿದ್ದು, ಎಲ್ಲರೂ ವರಾಹರೂಪಂ ಹಾಡನ್ನು ಮಿಸ್ ಮಾಡಿಕೊಳ್ಳುವಂತೆ ಆಗಿದೆ. ಎಲ್ಲರ ಮನಸ್ಸನ್ನು ಸೂರೆಗೊಂಡು, ಮನಸ್ಸಿಗೆ ಮುದ ನೀಡುತ್ತಿದ್ದ, ಜನ ಮೆಚ್ಚಿದ ವರಾಹರೂಪಂ ನ ಟ್ಯೂನ್ ಬದಲಾವಣೆಯನ್ನು ಓಟಿಟಿ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಕಾದು ನೋಡಬೇಕಾಗಿದೆ.

Leave a Comment