ಕೈ ಇಲ್ಲದ ಬಾಲಕ ಅನೇಕರಿಗೆ ಜೀವನ ಪಾಠ ಕಲಿಸುತ್ತಿದ್ದಾನೆ: ಈ ವೀಡಿಯೋ ನೋಡದ, ಮೆಚ್ಚದ ಮನಸ್ಸುಗಳು ಇರುವುದೇ?

Written by Soma Shekar

Published on:

---Join Our Channel---

ಸಾಮಾನ್ಯವಾಗಿ ಜನರು ತಮ್ಮ ಜೀವನವು ಇನ್ನಷ್ಟು ಉತ್ತಮವಾಗಿರಬೇಕಿತ್ತು ಎಂದು ಜೀವನವನ್ನು ದೂರುತ್ತಾರೆ. ಅಲ್ಲದೇ ಕೆಲವೊಮ್ಮೆ ವಿಷಮ ಪರಿಸ್ಥಿತಿ ಎದುರಾದಾಗ ಅನೇಕರು ಜೀವನದ ಮೇಲೆ ಹತಾಶರಾಗಿ ಆ ತ್ಮ ಹ ತ್ಯೆಯಂತಹ ಪ್ರಯತ್ನಕ್ಕೂ ಮುಂದಾಗಿ, ಅತ್ಯಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ನಮ್ಮ ಮಧ್ಯೆ ಇರುವ ಕೆಲವರು ತಮ್ಮ ಜೀವನದ ಪ್ರತಿ ಕ್ಷಣವನ್ನು ಸಂತೋಷವಾಗಿ ಇಡಲು ಪ್ರಯತ್ನವನ್ನು ಮಾಡುವುದು ಮಾತ್ರವೇ ಅಲ್ಲದೇ ಇತರರಿಗೂ ಸಂತೋಷವಾಗಿರುವುದು ಹೇಗೆ ಎನ್ನುವುದನ್ನು ಕಲಿಸುತ್ತಾರೆ.‌ ಏಕೆಂದರೆ ಜೀವನ ಹೇಗೆ ಇದ್ದರೂ ಅವರಿಗೆ ಸಂತೋಷವಾಗಿರುವುದು ಹೇಗೆ ಎನ್ನುವುದು ಗೊತ್ತು.

ಒಬ್ಬ ವ್ಯಕ್ತಿಗೆ ವಯಸ್ಸು ಮತ್ತು ಕಾಲದೊಂದಿಗೆ ಅನುಭವ ಕೂಡಾ ಜೊತೆಯಾಗುತ್ತದೆ ಎಂದು ಹೇಳುತ್ತಾರೆ. ಆದ್ದರಿಂದಲೇ ಪ್ರತಿ ಸಂದರ್ಭದಲ್ಲಿ ಸಹಾ ಸಕಾರಾತ್ಮಕವಾಗಿ ಇರುವುದು ದೊಡ್ಡ ವಿಷಯವೇನೂ ಅಲ್ಲ‌. ಆದರೆ ಒಬ್ಬ ಪುಟ್ಟ ಬಾಲಕನು ಜೀವನ ನಡೆಸುವುದು ಹೇಗೆ ಎಂದು ಹೇಳಿಕೊಟ್ಟರೆ ನಿಮಗೆ ಇದು ಅಚ್ಚರಿ ಎನಿಸಬಹುದು. ಒಂದು ಕ್ಷಣ ದಿಗ್ಭ್ರಾಂತರಾಗಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವೀಡಿಯೋದಲ್ಲಿ ಒಬ್ಬ ವಿಶೇಷ ವೇತನ ಬಾಲಕ ಜೀವನದ ಪಾಠ ಹೇಳಿಕೊಡುತ್ತಿರುವ ದೃಶ್ಯ ವೈರಲ್ ಆಗಿದೆ. ಇದು ನಿಮ್ಮ ಆಲೋಚನೆಯ ದಿಕ್ಕನ್ನು ಬದಲಾಯಿಸಬಹುದು.

ಕೈಯಿಲ್ಲದ ಬಾಲಕನ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ಬಾಲಕನಲ್ಲಿನ ಅದ್ಭುತ ಕಲೆಯೇ ಈಗ ಈ ವೀಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗಲು ಕಾರಣವಾಗಿದೆ. ವೀಡಿಯೋದಲ್ಲಿನ ದೃಶ್ಯವನ್ನು ನೋಡಿದಾಗ, ಪುಟ್ಟ ಬಾಲಕ ತನಗೆ ಕೈಗಳು ಇಲ್ಲವಾದರೂ ಸುಂದರವಾದ ವರ್ಣಚಿತ್ರಗಳನ್ನು ಬರೆಯುವುದನ್ನು ನಾವು ನೋಡಬಹುದಾಗಿದೆ. ಅಂಗವೈಕಲ್ಯದ ಕಾರಣದಿಂದಾಗಿ ಆತನಲ್ಲಿನ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎನ್ನುವುದನ್ನು ನಾವು ನೋಡಬಹುದಾಗಿದೆ. ಇತರೆ ಮಕ್ಕಳ ಹಾಗೆ ತಾನು ಸಹಾ ಚಿತ್ರ ಬರೆಯುವಲ್ಲಿ ತಲ್ಲೀನನಾಗಿರುವುದು ಕಾಣುತ್ತದೆ.

ಆತ ತಾನು ಬರೆದ ಚಿತ್ರಗಳಿಗೆ ಬಣ್ಣ ತುಂಬುತ್ತಾ ಅದನ್ನು ಇನ್ನಷ್ಟು ಸುಂದರವಾಗಿ ಮಾಡಲು ಬಹಳ ಶ್ರದ್ಧೆಯಿಂದ ತನ್ನ ಕೆಲಸವನ್ನು ಮಾಡುತ್ತಿದ್ದಾನೆ. ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಎಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.‌ 77 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಬಾಲಕನ ಅಪ್ರತಿಮ ಪ್ರತಿಭೆಯನ್ನು ಕಂಡು ನೆಟ್ಟಿಗರು ಅಪಾರವಾದ ಮೆಚ್ಚುಗೆಗಳನ್ನು ಹರಿಸುತ್ತಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, “ಕಷ್ಟಗಳಿಗೆ ಹೇಳಿ ಬಿಡು, ನಮ್ಮೊಂದಿಗೆ ಸವಾಲು ಹಾಕಬೇಡ ಎಂದು, ನಮಗೆ ಎಲ್ಲಾ ಪರಿಸ್ಥಿತಿಗಳಲ್ಲೂ ಸಹಾ ಜೀವನವನ್ನು ಎದುರಿಸುವ ಕಲೆ ಗೊತ್ತು” ಎಂದಿದ್ದಾರೆ.

Leave a Comment