ಕಾನೂನಿನ ಸಂಕಷ್ಟದಲ್ಲಿ ಸಿಲುಕಿದ ಉರ್ಫಿ: ಸದಾ ಬೋಲ್ಡ್ ಆಗಿ ಪೋಸ್ ಕೊಡ್ತಿದ್ದ ಉರ್ಫಿಗೆ ಎದುರಾಯ್ತು ಸಂಕಷ್ಟ

Written by Soma Shekar

Published on:

---Join Our Channel---

ಸದಾ ಒಂದಲ್ಲಾ ಒಂದು ವಿಚಾರವಾಗಿ ಮಾದ್ಯಮಗಳ ಸುದ್ದಿಗಳಲ್ಲಿ ಕಾಣಿಸಿಕೊಳ್ಳುತ್ತಾ, ಸದ್ದು ಮಾಡಲು ಬಯಸುವ ಸೆಲೆಬ್ರಿಟಿ ಎಂದರೆ ಸದ್ಯಕ್ಕಂತೂ ಅದು ಉರ್ಫಿ ಜಾವೇದ್ ಎಂದು ಯಾವುದೇ ಅನುಮಾನ ಇಲ್ಲದೇ ಹೇಳಬಹುದು. ವೈರ್ ನಿಂದ ಹಿಡಿದು ಕಾಟನ್ ಕ್ಯಾಂಡಿವರೆಗೂ ವೈವಿದ್ಯಮಯ ವಸ್ತುಗಳನ್ನು ಬಳಸಿ, ಚಿತ್ರ, ವಿಚಿತ್ರ ಫ್ಯಾಷನ್ ನ ಡ್ರೆಸ್ ಗಳನ್ನು ಧರಿಸಿ ಸಿಕ್ಕಾಪಟ್ಟೆ ಸುದ್ದಿಯಾದ ಉರ್ಫಿ, ಸಹಜವಾಗಿಯೇ ತಮ್ಮ ಡ್ರೆಸ್ ಗಳ ವಿಚಾರವಾಗಿಯೇ ಹೆಚ್ಚು ಜನರ ಗಮನವನ್ನು ಸೆಳೆದರು. ನಟಿಯ ಉಡುಪುಗಳ ವಿಚಾರವಾಗಿಯೇ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಯಿತು. ಆದ್ರೆ ಉರ್ಫಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಹೊಸ ಹೊಸ ವಿನ್ಯಾಸದ ಡ್ರೆಸ್ ಗಳನ್ನು ಧರಿಸುವುದನ್ನು ಮುಂದುವರೆಸಿದ್ದಾರೆ.

ಹೀಗೆ ಸದಾ ಬೋಲ್ಡ್ ಮತ್ತು ಬಿಂದಾಸ್ ಆಗಿ ಓಡಾಡಿಕೊಂಡು, ಕ್ಯಾಮರಾ ಗಳಿಗೆ ಪೋಸ್ ನೀಡುತ್ತಿದ್ದ ಉರ್ಫಿ ಜಾವೇದ್ ಗೆ ಈಗ ಕಾನೂನಿನ ಕಂ ಟ ಕ ವೊಂದು ಎದುರಾಗಿದೆ. ಇತ್ತೀಚಿಗಷ್ಟೇ ಬಿಡುಗಡೆಯಾದ ಉರ್ಫಿ ಕಾಣಿಸಿಕೊಂಡಿರುವ ಮ್ಯೂಸಿಕ್ ವೀಡಿಯೋ ಹಾಯ್ ಹಾಯ್ ಏ ಮಜಬೂರಿ ಹಾಡಿಗೆ ಸಂಬಂಧಿಸಿದಂತೆ ಉರ್ಫಿಗೆ ಕಾನೂನಿನ ತೊಡಕು ಎದುರಾಗಿದೆ ಎನ್ನಲಾಗಿದೆ. ದೆಹಲಿಯಲ್ಲಿ ಅನಾಮಿಕ ವ್ಯಕ್ತಿಯೊಬ್ಬರು ಬಿಗ್ ಬಾಸ್ ಓಟಿಟಿ ಮೂಲಕ ಜನಪ್ರಿಯತೆ ಪಡೆದ ಉರ್ಫಿ ಜಾವೇದ್ ಮೇಲೆ ದೂರನ್ನು ದಾಖಲಿಸಿದ್ದು, ಈ ವಿಚಾರವನ್ನು ಪ್ರಮುಖ ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ.

ಹೌದು, ಅನಾಮಧೇಯ ವ್ಯಕ್ತಿಯು, ದೆಹಲಿಯಲ್ಲಿ, ‘ಲೈಂ ಗಿ ಕ ಅ ಶ್ಲೀ ಲ ಕೃತ್ಯವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಕಟಿಸಲು ಅಥವಾ ರವಾನಿಸಲು ಮಾಡಿರುವ ಪ್ರಯತ್ನ ಎನ್ನುವ ಕಾರಣಕ್ಕೆ ದೂರನ್ನು ದಾಖಲು ಮಾಡಿದ್ದಾರೆ. ಜನಪ್ರಿಯ ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿರುವ ವೈರಲ್ ಭಯಾನಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಉರ್ಫಿಯ ಫೋಟೋದ ಜೊತೆಗೆ ಹಂಚಿಕೊಂಡು ಮಾಹಿತಿಯನ್ನು ನೀಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ, ನಟಿ ಮ್ಯೂಸಿಕ್ ವೀಡಿಯೋದಲ್ಲಿ ಬೋಲ್ಡ್ ಮತ್ತು ದೇಹ ಕಾಣಿಸುವ ಹಾಗೆ ವಸ್ತ್ರ ತೊಟ್ಟಿರುವುದಕ್ಕೆ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ತನ್ನ ಮೇಲೆ ದೂರು ದಾಖಲಾಗಿರುವ ವಿಚಾರವಾಗಿ ಉರ್ಫಿ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದು ಸಹಾ ಈಗ ಕುತೂಹಲದ ವಿಚಾರವಾಗಿದೆ. ಉರ್ಫಿ ನಟಿಸಿದ ಮ್ಯೂಸಿಕ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈಗ ದೂರು ದಾಖಲಾಗಿರುವುದು ನಟಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇಷ್ಟು ದಿನ ಬೋಲ್ಡ್ ಡ್ರೆಸ್ ಗಳಲ್ಲೇ ಕಾಣಿಸಿಕೊಂಡಿದ್ದ ಉರ್ಫಿ ಮೇಲೆ ಇದೇ ಮೊದಲ ಬಾರಿಗೆ ದೂರು ದಾಖಲಾಗಿದೆ ಎನ್ನಲಾಗಿದ್ದು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ.

Leave a Comment