ನೀವೆಲ್ಲಾ ನೋಡಿರೋದು ಕಾಂತಾರ-2: ದೊಡ್ಡ ಶಾಕ್ ಜೊತೆ ರಿಷಬ್ ಶೆಟ್ಟಿ ಕೊಟ್ಟ ಥ್ರಿಲ್ಲಿಂಗ್ ಸುದ್ದಿ

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗ(Sandalwood) ಮಾತ್ರವೇ ಅಲ್ಲದೆ ಇಡೀ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಮಾಡಿದ ರಿಷಬ್ ಶೆಟ್ಟಿ(Rishab Shetty) ನಟಿಸಿ ನಿರ್ದೇಶನ ಮಾಡಿದ ಕಾಂತರಾ(Kantar ಸಿನಿಮಾದ ಶತದಿನೋತ್ಸವ ಸಂಭ್ರಮದ ಕಾರ್ಯಕ್ರಮವನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಭವನದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಸಲಾಗಿದೆ. ಈ ಕಾರ್ಯಕ್ರಮಕ್ಕಾಗಿ ಬಂಟರ ಭವನ ಕಾಂತಾರ ಸಿನಿಮಾದ ಸೆಟ್ಟಿನ ಹಾಗೆ ಪರಿವರ್ತನೆಯಾಗಿತ್ತು. ಶತದಿನೋತ್ಸವ(100 days function) ಸಂಭ್ರಮಾಚರಣೆಯ ಸಲುವಾಗಿ ಇಡಿ ಬಂಟರ ಭವನವನ್ನು ತುಳುನಾಡಿನ ಸಂಪ್ರದಾಯದ ಹಾಗೆ ಅಲಂಕರಿಸಲಾಗಿತ್ತು.

ಬಹಳ ಸಂಭ್ರಮದಿಂದ ಚಿತ್ರತಂಡವು ಶತದಿನೋತ್ಸವ ಸಮಾರಂಭವನ್ನು ನಡೆಸಿದೆ. ಈ ಸಮಾರಂಭದಲ್ಲಿ ಸಿನಿಮಾದ ಇಂತಹದೊಂದು ದೊಡ್ಡ ಗೆಲುವಿಗೆ ಕಾರಣವಾದ ಪ್ರತಿಯೊಬ್ಬ ಕಲಾವಿದ ಹಾಗೂ ತಾಂತ್ರಿಕ ತಂಡದವರಿಗೆ ಚಿತ್ರತಂಡ ಸ್ಮರಣಿಕೆಯನ್ನು ನೀಡಿದೆ. ಇತ್ತೀಚಿನ ದಿನಗಳಲ್ಲಿ ಶತದಿನೋತ್ಸವ ಕಾರ್ಯಕ್ರಮಗಳು ನಡೆಯುವುದು ತೀರಾ ವಿರಳವಾಗಿದೆ. ಆದರೆ ಕಾಂತರ(Kantara 100 days) ತಂಡ ತಮ್ಮ ಸಿನಿಮಾ ನೂರು ದಿನಗಳ ಭರ್ಜರಿ ಪ್ರದರ್ಶನವನ್ನು ಕಂಡ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ಕಾರ್ಯಕ್ರಮವನ್ನಾಗಿ ಮಾಡಿ ಸಿನಿಮಾದ ಇಂತಹ ಯಶಸ್ಸಿಗೆ ಕಾರಣವಾದ ಪ್ರೇಕ್ಷಕರಿಗೆ ಧನ್ಯವಾದಗಳು ತಿಳಿಸಿದೆ.

ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಸಿನಿಮಾ ಪ್ರಿಯರಿಗೆ ದೊಡ್ಡ ಆಶ್ಚರ್ಯವನ್ನು ಮೂಡಿಸುವಂತಹ ವಿಚಾರವೊಂದನ್ನು ತಿಳಿಸಿದ್ದಾರೆ. ಅವರು ಮಾತನಾಡುತ್ತಾ ಕಾತರ 2(Kantara 2) ಸಿನಿಮಾ ಯಾವಾಗ ಬರುತ್ತದೆ ಎಂದು ಜನರು ಕೇಳುತ್ತಿದ್ದು, ಅವರು ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ ಆದರೆ ಈಗ ನೀವು ನೋಡಿರುವುದೇ ಕಾಂತರ 2. ಮುಂದೆ ಬರಲಿರುವುದು ಪಾರ್ಟ್ 1 ಆಗಿದ್ದು, ಶೀಘ್ರದಲ್ಲ ಅದರ ಕೆಲಸ ಆರಂಭವಾಗುತ್ತದೆ ಎಂದು ಹೇಳುವ ಮೂಲಕ ದೊಡ್ಡ ಅಚ್ಚರಿ ಮತ್ತು ಶಾಕ್ ನೀಡಿದ್ದಾರೆ.

Leave a Comment