ಕಾಂತಾರ ನೋಡಿ ಕಂಗನಾ ಹೇಳಿದ ಮಾತುಗಳಿಗೆ ರೋಮಾಂಚನಗೊಂಡ ಕನ್ನಡಿಗರು! ಕಾಂತಾರ ಅದೊಂದು ಹ್ಯಾಂಗೋವರ್

Written by Soma Shekar

Published on:

---Join Our Channel---

ಬಾಲಿವುಡ್ ನಟಿ ಕಂಗನಾ ರಣಾವತ್ ಹೆಸರು ಕೇಳಿದರೆ ಸಾಕು, ನಟಿಯ ಸಿನಿಮಾಗಳಿಗಿಂತ ನಟಿ ಮೈಮೇಲೆ ಎಳೆದುಕೊಂಡ ವಿವಾದಗಳು ಹಾಗೂ ನಟಿಯು ನೀಡಿದ ಹೇಳಿಕೆಗಳ ವಿಚಾರವೇ ಮುನ್ನೆಲೆಗೆ ಬರುತ್ತದೆ. ನಟಿ ಕಂಗನಾ ಹೆಚ್ಚಾಗಿ ಯಾರನ್ನೂ ಹೊಗಳಿದ್ದು ಇಲ್ಲ. ಬಹುತೇಕ ಟೀಕೆ, ಟಿಪ್ಪಣಿಗಳನ್ನು ಮಾಡುವ ಈ ನಟಿಯ ಬಾಲಿವುಡ್ ಹಲವು ಸೆಲೆಬ್ರಿಟಿಗಳ ಮೇಲೆ ಈಗಾಗಲೇ ಸಾಕಷ್ಟು ಬಾರಿ ಟೀಕಾಸ್ತ್ರ ಗಳನ್ನು ಪ್ರಯೋಗ ಮಾಡಿ ಸುದ್ದಿಯಾಗಿದ್ದಾರೆ. ಆದರೆ ಈಗ ಇದೇ ನಟಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ನೋಡಿ ಶಾ ಕ್ ಆಗಿದ್ದಾರೆ. ಕಾಂತಾರ ನೋಡಿದ ನಂತರ ನಟಿಯು ಸಿನಿಮಾವನ್ನು ಮನಃಪೂರ್ವಕವಾಗಿ ಹಾಡಿ ಹೊಗಳಿದ್ದು, ರಿಷಬ್ ಶೆಟ್ಟಿ ಅವರಿಗೆ ಹ್ಯಾಟ್ಸಾಫ್ ಹೇಳಿದ್ದಾರೆ.

ಕುಟುಂಬ ಸಮೇತ ಕಾಂತಾರ ಸಿನಿಮಾ ನೋಡಿ ಬಂದ ನಟಿಯನ್ನು ಮಾದ್ಯಮದವರು ಹೇಗಿತ್ತು ಸಿನಿಮಾ ಎಂದು ಕೇಳಿದಾಗ, ಅದಕ್ಕೆ ಪ್ರತಿಕ್ರಿಯೆ ನೀಡಿದ ನಟಿಯು, ನಾನು ಕುಟುಂಬದವರ ಜೊತೆಗೆ ಸಿನಿಮಾ ನೋಡಿ ಬಂದೆ. ಈಗಲೂ ನನ್ನ ಮೈ ನಡಗುತ್ತಿದೆ. ಎಂತಹ ಅದ್ಭುತ ಅನುಭವ ಅದು. ರಿಷಬ್ ಶೆಟ್ಟಿ ಗೆ ಹ್ಯಾಟ್ಸಾಫ್. ಬರವಣಿಗೆ, ನಿರ್ದೇಶನ, ನಟನೆ, ಸಿನಿಮಾದಲ್ಲಿನ ಆ್ಯಕ್ಷನ್ ಎಲ್ಲವೂ ಅದ್ಭುತವಾಗಿದೆ. ಸಿನಿಮಾ ಅಂದ್ರೆ ಇದು. ಇದನ್ನು ನಂಬುವುದಕ್ಕೆ ಆಗುತ್ತಿಲ್ಲ ಎಂದು ಕಂಗನಾ ತಮಗಾದ ವಿಶಿಷ್ಠವಾದ ಅನುಭೂತಿಯನ್ನು ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ಕಾಂತಾರ ನಟಿಯ ಮನಸ್ಸನ್ನು ಸೂರೆಗೊಂಡಿದೆ.

ಸಂಪ್ರದಾಯ, ಜನಪದ ವಿಚಾರ, ಸ್ಥಳೀಯ ಸಮಸ್ಯೆಗಳನ್ನು ಸಿನಿಮಾದಲ್ಲಿ ಬಹಳ ಹದವಾಗಿ ಬೆರೆಸಲಾಗಿದೆ. ಒಂದು ಸುಂದರ ಛಾಯಾಗ್ರಹಣ ಎಂದರೆ ಇದು. ಸಿನಿಮಾ ಅಂದರೆ ಇದು. ಒಂದು ವಾರ ಈ ಹ್ಯಾಂಗೋವರ್ ನಿಂದ ಹೊರ ಬರುವುದು ಸಾಧ್ಯವಿಲ್ಲ ಎಂದು ಕಂಗನಾ ಹೇಳಿರುವುದು ಕೇಳಿ ಇದೀಗ ರಿಷಭ್ ಶೆಟ್ಟಿ ಅವರ ಅಭಿಮಾನಿಗಳು ಮತ್ತು ಕನ್ನಡ ಸಿನಿ ಪ್ರೇಮಿಗಳು ಖುಷಿ ಪಡುತ್ತಿದ್ದಾರೆ. ಇನ್ನು ಕಾಂತಾರ ಬಿಡುಗಡೆ ನಂತರ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ಸಿನಿಮಾ ಬರೋಬ್ಬರಿ 170 ಕೋಟಿ ಗಳಿಕೆಯನ್ನು ಕಂಡಿದ್ದು, ಕನ್ನಡದ ಕೆಲವು ಸಿನಿಮಾಗಳ ದಾಖಲೆಯನ್ನು ಮುರಿದಿದೆ.

ಕಾಂತಾರ ಕನ್ನಡದಲ್ಲಿ ಮಾತ್ರವೇ ಅಲ್ಲದೇ ಬಿಡುಗಡೆಯಾದ ಇನ್ನುಳಿದ ನಾಲ್ಕು ಭಾಷೆಗಳಲ್ಲಿ ಸಹಾ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಎಲ್ಲೆಲ್ಲೂ ಸಿನಿಮಾ ಪ್ರೇಮಿಗಳು ಕಾಂತಾರಕ್ಕೆ ಮೆಚ್ಚುಗೆ ನೀಡುತ್ತಿದ್ದು, ಸಿನಿಮಾ ಪ್ರಚಾರವನ್ನು ಜನರೇ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಎಲ್ಲೆಲ್ಲೂ ಕಾಂತಾರ ಸಿನಿಮಾದ ಬಗ್ಗೆ ವೀಡಿಯೋಗಳು, ಸುದ್ದಿಗಳು ಹರಿದಾಡಿದ್ದು, ಸಿನಿಮಾ ಕುರಿತಾದ ಹತ್ತು ಹಲವು ವಿಚಾರಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಾಂತಾರ ಒಟ್ಟಾರೆ ಈ ವರ್ಷ ಅಪಾರ ಜನ ಮೆಚ್ಚುಗೆ ಪಡೆದ ಸಿನಿಮಾ ಆಗಿ ಅಬ್ಬರಿಸುತ್ತಿದೆ.

Leave a Comment