ಕಾಂತಾರ ಕುರಿತು ರಾಕಿಂಗ್ ಸ್ಟಾರ್ ಯಶ್ ಹೇಳಿದ ಈ ಮಾತಿಗೆ ಕನ್ನಡಿಗರೆಲ್ಲರೂ ಮೆಚ್ಚುಗೆ ನೀಡಲೇಬೇಕು

Written by Soma Shekar

Published on:

---Join Our Channel---

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಇಡೀ ದೇಶದಲ್ಲಿ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದು ಬೀಗುತ್ತಿದೆ. ಬಾಕ್ಸಾಫೀಸಿನಲ್ಲಿ ಗಳಿಕೆ ವಿಚಾರದಲ್ಲಿ ಸಹಾ ಸಿನಿಮಾ ಕೋಟಿ ಕೋಟಿ ಗಳಿಕೆಯನ್ನು ಕಾಣುತ್ತಾ ಹೊಸ ದಾಖಲೆಗಳನ್ನು ಬರೆಯಲು ಸಜ್ಜಾಗಿದೆ. ಕನ್ನಡದಲ್ಲಿ ಈಗಾಗಲೇ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಸಿನಿಮಾ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ ಕಾಂತಾರ. ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಈಗ ಇದೇ ಸಿನಿಮಾದ ಕುರಿತಾಗಿ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅವರು ನೀಡಿರುವ ಹೇಳಿಕೆಯೊಂದು ಸಿಕ್ಕಾಪಟ್ಟೆ ಸದ್ದು ಮಾಡಿದೆ. ಯಶ್ ಅವರ ಮಾತಿಗೆ ಮೆಚ್ಚುಗೆಗಳು ಹರಿದು ಬರುತ್ತಿದೆ.

ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಅವರು ನಟಿಸಿ, ನಿರ್ದೇಶನ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಪಡೆದು ಸೈ ಎನಿಸಿಕೊಂಡಿದ್ದಾರೆ. ದೇಶದೆಲ್ಲೆಡೆಯಿಂದಲೂ ಸಹಾ ಸಿನಿಮಾಕ್ಕೆ ಮೆಚ್ಚುಗೆಗಳು ಹರಿದು ಬರುತ್ತಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತಾರ ಸಿನಿಮಾದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಟ ಯಶ್ ಅವರು ಕಾಂತಾರ ಸಿನಿಮಾ ನನ್ನದೇ ಎನ್ನುವ ಮಾತನ್ನು ಹೇಳುವ ಮೂಲಕ ಎಲ್ಲರ ಗಮಮವನ್ನು ಸೆಳೆದಿದ್ದಾರೆ. ಹೌದು ನಟ ಯಶ್ ಅವರು ಕಾಂತಾರ ಬಗ್ಗೆ ಬಹಳ ಖುಷಿಯಿಂದ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ನಟ ಯಶ್ ಅವರು ಮಾತನಾಡುತ್ತಾ, ಕಾಂತಾರ ಸಿನಿಮಾ ನನ್ನದೇ. ಕಾಂತಾರ ಕರ್ನಾಟಕದ ಸಿನಿಮಾ. ಅದು ನಮ್ಮ ಸಿನಿಮಾ, ಅದಕ್ಕೆ ಎಲ್ಲಾ ಕಡೆಗಳಲ್ಲೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ ಎಂದು ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ. ಕನ್ನಡ ಸಿನಿಮಾಗಳು ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆಯನ್ನು ಪಡೆಯುತ್ತಿವೆ. ಇದೇ ವೇಳೆ ಅವರು ನಾನು ಪ್ಯಾನ್ ಇಂಡಿಯಾ ನಟನಾಗಿದ್ದರೂ, ನನಗೆ ಕನ್ನಡವೇ ಮೊದಲು ಎನ್ನುವ ಮಾತನ್ನು ಸಹಾ ಯಶ್ ಅವರು ಹೇಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

Leave a Comment