ಕಾಂತಾರ ಅಬ್ಬರ: ಡಬ್ಬಿಂಗ್ ಚಿತ್ರಗಳ ಅಬ್ಬರಕ್ಕೆ ಕಂಗೆಟ್ಟ ತೆಲುಗು ನಿರ್ಮಾಪಕರಿಂದ ಹೊಸ ನಿಯಮ

Written by Soma Shekar

Published on:

---Join Our Channel---

ಪ್ಯಾನ್ ಇಂಡಿಯಾ ಸಿನಿಮಾಗಳು ಬಂದ ಮೇಲೆ ಅದರಲ್ಲೂ ಕನ್ನಡ ಸಿನಿಮಾಗಳು ಎಲ್ಲೆಲ್ಲೂ ಅಬ್ಬರಿಸಲು ಆರಂಭಿಸಿದ ಮೇಲೆ ಸಹಜವಾಗಿಯೇ ಎಲ್ಲಾ ಚಿತ್ರರಂಗಗಳ ದೃಷ್ಟಿ ಈಗ ಕನ್ನಡ ಸಿನಿಮಾಗಳ ಕಡೆಗೆ ನೆಟ್ಟಿವೆ. ಇನ್ನು ದಕ್ಷಿಣದಲ್ಲಿ ಸಿಕ್ಕಾಪಟ್ಟೆ ಬಜೆಟ್ ಹೂಡಿಕೆ ಮಾಡಿ ಸಿನಿಮಾಗಳನ್ನು ನಿರ್ಮಾಣ ಮಾಡುವ ಟಾಲಿವುಡ್ ಗೆ ಈಗ ಹೊಸ ಭಯವೊಂದು ಕಾಡಲು ಆರಂಭಿಸಿದೆ. ಹೌದು, ಪರಭಾಷೆಯ ಸಿನಿಮಾಗಳು ಡಬ್ಬಿಂಗ್ ಮೂಲಕ ತೆಲುಗು ರಾಜ್ಯಗಳಲ್ಲಿ ಅಬ್ಬರಿಸುತ್ತಿರುವ ಕಾರಣದಿಂದ ಈ ಸಿನಿಮಾಗಳು ಮೂಲ ತೆಲುಗು ಸಿನಿಮಾಗಳಿಗೆ ಸ್ಪರ್ಧೆ ನೀಡುತ್ತಿದ್ದು ದೊಡ್ಡ ಹೊ ಡೆ ತ ನೀಡುತ್ತಿವೆ. ಈ ವಿಚಾರವಾಗಿ ಅಲ್ಲಿನ ಸಿನಿಮಾ ನಿರ್ಮಾಪಕರು ಈಗ ದನಿಯನ್ನು ಎತ್ತಿದ್ದಾರೆ.

ಡಬ್ಬಿಂಗ್ ಸಿನಿಮಾಗಳ ಅಬ್ಬರಕ್ಕೆ ಮೂಲ ತೆಲುಗು ಸಿನಿಮಾಗಳು ನಲುಗುತ್ತಿರುವುದು ಮತ್ತು ಆ ಸಿನಿಮಾಗಳಿಗೆ ಹಾನಿಯಾಗುತ್ತಿರುವುದನ್ನು ಕಂಡು ತೆಲುಗು ಸಿನಿಮಾ ನಿರ್ಮಾಪಕರು ಒಂದು ದೊಡ್ಡ ತೀರ್ಮಾನವನ್ನು ಮಾಡಲು ಮುಂದಾಗಿದ್ದಾರೆ ಎನ್ನುವ ಸುದ್ದಿಯೊಂದು ಈಗ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಹಬ್ಬಗಳ ಸಮಯದಲ್ಲಿ ತೆಲುಗು ಸಿನಿಮಾಗಳಿಗೆ ಸೆಡ್ಡು ಹೊಡೆದು ಪರಭಾಷಾ ಸಿನಿಮಾಗಳು ಯಶಸ್ಸು ಪಡೆಯುತ್ತಿರುವ ಕಾರಣದಿಂದ ಇದು ಅಲ್ಲಿನ ನಿರ್ಮಾಪಕ ನಿದ್ದೆಗೆಡಿಸಿದೆ, ಇದರಿಂದ ತೆಲುಗು ಸಿನಿಮಾಗಳಿಗೆ ಅ ನ್ಯಾ ಯ ವಾಗುತ್ತಿದೆ ಎಂದು ದೂರಿದ್ದಾರೆ.

ತೆಲುಗು ನಿರ್ಮಾಪಕರು ತೆಲುಗು ಸಿನಿಮಾ ರಂಗವನ್ನು ಉಳಿಸಬೇಕೆಂಬ ಉದ್ದೇಶದಿಂದ ಸಭೆಗಳನ್ನು ನಡೆಸಿದ್ದು, ಒಂದಷ್ಟು ತೀರ್ಮಾನಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲಿ ಇನ್ನು ಮುಂದೆ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ಚಿತ್ರ ಮಂದಿರಗಳನ್ನು ತೆಲುಗು ಸಿನಿಮಾಗಳಿಗೆ ಮಾತ್ರವೇ ಮೀಸಲಿಡಬೇಕು ಎಂದಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಡಬ್ಬಿಂಗ್ ಸಿನಿಮಾಗಳನ್ನು ಆದಷ್ಟು ದೂರವಿಡಬೇಕು ಎನ್ನುವ ನಿರ್ಧಾರವೊಂದನ್ನು ಸಹಾ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇದ್ದಕ್ಕಿದ್ದ ಹಾಗೆ ತೆಲುಗು ನಿರ್ಮಾಪಕರು ಇಂತಹ ನಿರ್ಧಾರಕ್ಕೆ ಬರಲು ಕಾರಣವೂ ಇದೆ.

ಹೌದು, ಕೆಜಿಎಫ್-2 ಮತ್ತು ಕಾಂತಾರ ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಕಂಡಂತಹ ಅದ್ಭುತ ಸಕ್ಸಸ್ ಈಗ ನಿರ್ಮಾಪಕರ ಟೆನ್ಷನ್ ಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಕೆಜಿಎಫ್-2 ಮತ್ತು ಕಾಂತಾರ ಎರಡೂ ಸಿನಿಮಾಗಳು ಸಹಾ ತೆಲಂಗಾಣ ಮತ್ತು ಆಂಧ್ರ ಎರಡೂ ಕಡೆಗಳಲ್ಲೂ ಅಪಾರ ಜನಾದರಣೆಯನ್ನು ಪಡೆದು, ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡವು. ತೆಲುಗು ಪ್ರೇಕ್ಷಕರು ಈ ಸಿನಿಮಾಗಳನ್ನು ಹಾಡಿ ಹೊಗಳಿದರು. ಸಿನಿಮಾಗಳು ಕಲೆಕ್ಷನ್ ವಿಚಾರದಲ್ಲೂ ಅಲ್ಲಿ ಮಾಡಿದ ಸದ್ದನ್ನು ಕಂಡು ಇದೀಗ ನಿರ್ಮಾಪಕರು ಡಬ್ಬಿಂಗ್ ಸಿನಿಮಾಗಳ ವಿಚಾರದಲ್ಲಿ ಸೂಕ್ತ ನಿರ್ಧಾರ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

Leave a Comment