ಕಷ್ಟಕ್ಕಾಗದ ಹೀರೋಗಳು ಹೀರೋನಾ? ವಿಜಯಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಕೆಂಡಾಮಂಡಲವಾದ ವಕೀಲ ಜಗದೀಶ್

Written by Soma Shekar

Published on:

---Join Our Channel---

ತನ್ನ ಆರೋಗ್ಯ ಸರಿಯಿಲ್ಲ, ತಮ್ಮ ತಾಯಿ ಹಾಗೂ ಅಕ್ಕನ ಆರೋಗ್ಯ ಸರಿಯಿಲ್ಲ ನಮಗೆ ಏನಾದರೂ ಸಹಾಯವನ್ನು ಮಾಡಿ ಎಂದು ಕಳೆದ ಕೆಲವು ತಿಂಗಳುಗಳಿಂದ ನಟಿ ವಿಜಯಲಕ್ಷ್ಮಿ ಅವರು ವಿಡಿಯೋಗಳ ಮೂಲಕ ಸಹಾಯವನ್ನು ಯಾಚಿಸುತ್ತಿದ್ದರು. ಅವರು ಮಾತನಾಡಿದ ವಿಷಯಗಳನ್ನು ಕೆಲವರು ಟ್ರೋಲ್ ಕೂಡಾ ಮಾಡಿದರು. ಆದರೆ ಇವೆಲ್ಲವುಗಳ ನಡುವೆ ಅವರ 75 ವರ್ಷದ ತಾಯಿ ವಿಜಯ ಸುಂದರಂ ಅವರು ಕೊನೆಯುಸಿರೆಳೆದಿದ್ದು, ಟ್ರಸ್ಟ್ ಒಂದು ವಿಜಯಲಕ್ಷ್ಮಿ ಅವರ ಜೊತೆ ‌ನಿಂತು ಅವರ ತಾಯಿಯ ಅಂತಿಮ ಸಂಸ್ಕಾರವನ್ನು ನೇರವೇರಿಸಿದೆ.

ಆದರೆ ತಾಯಿಯನ್ನು ಕಳೆದುಕೊಂಡ ವಿಜಯಲಕ್ಷ್ಮಿ ಅವರಿಗೆ ಸಾಂತ್ವನ ನೀಡಲು ಚಿತ್ರರಂಗದಿಂದ ಯಾರೊಬ್ಬರೂ ಕೂಡಾ ಮುಂದೆ ಬರದಿದ್ದನ್ನು ನೋಡಿ ವಕೀಲ ಜಗದೀಶ್ ಅವರು ತಮ್ಮ ಸಿಟ್ಟು ಮತ್ತು ಆಕ್ರೋಶವನ್ನು ಹೊರಹಾಕಿದ್ದಾರೆ. ವಿಡಿಯೋ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಷ್ಟ ಎಂದು ಬಂದಾಗ ಸಮುದಾಯ, ಸಂಘ, ಸರ್ಕಾರ, ಜಾತಿ ಮತ್ತು ಧರ್ಮ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇದೆ. ಆದರೆ ವಿಜಯಲಕ್ಷ್ಮಿ ಅವರ ಪರಿಸ್ಥಿತಿಯನ್ನು ನೋಡಿದ ಮೇಲೆ ಇದೆಲ್ಲಾ ಸುಳ್ಳು ಎನಿಸುತ್ತಿದೆ.

ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ನಟಿಯಾಗಿ ಮನರಂಜನೆ ನೀಡಿದ್ದಾರೆ, ಯಾವುದೋ ಕಾರಣದಿಂದ ಇಂದು ಕಷ್ಟಕ್ಕೆ ಗುರಿಯಾಗಿದ್ದಾರೆ. ಕೋಪದಲ್ಲಿ ಏನೋ ಅಂದಿರಬಹುದು ಹಾಗೆಂದ ಮಾತ್ರಕ್ಕೆ ಇಂದಿನ ಕೆಟ್ಟ ಪರಿಸ್ಥಿತಿಯಲ್ಲಿ ಆಕೆಯನ್ನು ಒಂಟಿಯಾಗಿ ಬಿಟ್ಟರೆ ಕನ್ನಡಿಗರಾಗಿ ನಾವು ಮಾನವೀಯತೆ ಇರುವ ಮನುಷ್ಯರಾಗುವೆವಾ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಟ್ರಸ್ಟ್ ಒಂದು ಲಿಂಗಾಯಿತ ಸಂಪ್ರದಾಯದ ಪ್ರಕಾರ ಅವರ ತಾಯಿಯ ಅಂತಿಮ ಸಂಸ್ಕಾರ ಮಾಡಿದರು.

ಆಕೆ ಒಬ್ಬ ಹಿಂದೂ ಹೆಣ್ಣು ಮಗಳಲ್ಲವೇ?? ಲಿಂಗಾಯತ ಹೆಣ್ಣು. ಜಾತಿ ಧರ್ಮ ಎನ್ನುವುದು ಕೇವಲ ರಾಜಕೀಯಕ್ಕೆ ಸೀಮಿತವಾಯಿತೇ?? ನಾಲ್ಕು ಜನರ ಕಣ್ಣೀರು ಒರೆಸಿಲ್ಲ ಎಂದ ಮೇಲೆ ಅಂತಹ ರಾಜಕೀಯ, ಧರ್ಮ-ಜಾತಿ ಇದ್ದರೇನು? ಬಿಟ್ಟರೆ ಏನು ? ಎಂದಿದ್ದಾರೆ ಅಲ್ಲದೆ ಹಿಂದೂಗಳೆಲ್ಲಾ ಎಲ್ಲಿ ಹೋದಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಆಕೆ ತಪ್ಪು ಮಾಡಿರಬಹುದು, ಎಷ್ಟೋ ತಪ್ಪುಗಳನ್ನು ಮಾಡಿದವರಿಗೆ ಉತ್ತಮ ಸೌಕರ್ಯ ಸಿಗುತ್ತಿದೆ. ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದಿದ್ದಾರೆ.

ಇನ್ನು ಅವರು ಚಿತ್ರರಂಗದ ಮೇಲೆ ಅಸಮಾಧಾನ ಹೊರ ಹಾಕುತ್ತಾ, ಫಿಲ್ಮ್ ಇಂಡಸ್ಟ್ರಿ ಎಲ್ ಹೋಯ್ತು?? ನೀವೆಲ್ಲಾ ಹೀರೋಗಳು ಸಿನಿಮಾದಲ್ಲಿ ಕಂಡ್ರೆಲೇ. ನೀವು ಜನಸಾಮಾನ್ಯರ ಮಾನವೀಯತೆಗೆ ಹೀರೋ ಆಗಲು ಸಾಧ್ಯನೇ ಇಲ್ಲ. ದೊಡ್ಡ ದೊಡ್ಡ ಡೈಲಾಗ್ ಹೊಡೆಯುವಂತಹ ಫಿಲ್ಮ್ ಇಂಡಿಸ್ಟ್ರಿ ಎಲ್ ಹೋಯ್ತು. ನಾಯಕಿಯರು, ನಟರು ಎಲ್ಲಾ ಎಲ್ ಹೋದ್ರಿ. ಬರಿ ಮೇಕಪ್ ಮಾಡಿಕೊಂಡು ಮನರಂಜನೆ ನೀಡುವುದಷ್ಟೇನಾ, ಕಷ್ಟಕ್ಕೆ ಆಗದೆ ಇರುವ ಹೀರೋಗಳು ನೀವು ಹೀರೋನಾ’ ಎಂದು ಅವರು ನಟರನ್ನು ಪ್ರಶ್ನೆ ಮಾಡಿದ್ದಾರೆ.

Leave a Comment