ಕರಣ್ ಶೋ ಗೆ ನಿಮ್ಮನ್ನೇಕೆ ಕರೆದಿಲ್ಲ? ಬಾಲಿವುಡ್ ನ ತಲೆ ತಿರುಗುವಂತೆ ಉತ್ತರಿಸಿದ ದಕ್ಷಿಣದ ಬೆಡಗಿ ತಾಪ್ಸಿ!!

Written by Soma Shekar

Updated on:

---Join Our Channel---

ಬಾಲಿವುಡ್ ಸಿನಿಮಾಗಳ ನಿರ್ಮಾಪಕ ಕರಣ್ ಜೋಹರ್ ನಿರೂಪಕನಾಗಿಯೂ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕರಣ್ ಜೋಹರ್ ನಿರೂಪಣೆಯ ಸೆಲೆಬ್ರಿಟಿ ಚಾಟ್ ಶೋ ಕಾಫಿ ವಿತ್ ಕರಣ್ ಈಗಾಗಲೇ ಸಾಕಷ್ಟು ಯಶಸ್ಸನ್ನು ಪಡೆದಿರುವ ಶೋ ಆಗಿದೆ‌. ಈ ಬಾರಿ ಈ ಶೋ ನ ಏಳನೇ ಸೀಸನ್ ಮೊದಲ ಬಾರಿಗೆ ಓಟಿಟಿ ಯಲ್ಲಿ ಪ್ರಸಾರವಾಗುತ್ತಿದ್ದು ಮತ್ತೊಮ್ಮೆ ಸೂಪರ್ ಹಿಟ್ ಆಗುತ್ತಿದೆ. ಕರಣ್ ಜೋಹರ್ ಶೋ ಎಂದ ಮೇಲೆ ಅಲ್ಲಿ ಬೋಲ್ಡ್ ಪ್ರಶ್ನೆಗಳು ಇಲ್ಲದೇ ಇರಲು ಹೇಗೆ ಸಾಧ್ಯ? ಅದರಲ್ಲೂ ಈ ಬಾರಿ ಓಟಿಟಿಯಲ್ಲಿ ಪ್ರಸಾರ ಆಗುತ್ತಿರುವುದರಿಂದ ಕರಣ್ ತುಸು ಹೆಚ್ಚಾಗಿಯೇ ಬೋಲ್ಡ್ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಹೌದು, ಕರಣ್ ಜೋಹರ್ ನ ಈ ಶೋ ನಲ್ಲಿ ಈ ಬಾರಿ ಅತಿಥಿಗಳಾಗಿ ಆಗಮಿಸುತ್ತಿರುವ ಸೆಲೆಬ್ರಿಟಿಗಳ ಲೈಂಗಿಕ ಜೀವನದ ಬಗ್ಗೆಯೇ ಕರಣ್ ಜೋಹರ್ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ. ಅಲ್ಲದೇ ಅದಕ್ಕೆ ಸೆಲೆಬ್ರಿಟಿಗಳು ಸಹಾ ಯಾವುದೇ ಮುಚ್ಚು ಮರೆಯಿಲ್ಲದೇ ಉತ್ತರ ನೀಡುತ್ತಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇನ್ನು ಈ ಬಾರಿ ದಕ್ಷಿಣದ ತಾರೆಯರಿಗೂ ಮಣೆ ಹಾಕಿರುವ ಕರಣ್ ಜೋಹರ್ ಶೋ ಗೆ ಸಮಂತಾ ಮತ್ತು ವಿಜಯ ದೇವರಕೊಂಡ ಅತಿಥಿಗಳಾಗಿ ಆಗಮಿಸಿದ್ದು, ತಮ್ಮ ಹೇಳಿಕೆಗಳಿಂದ ಸದ್ದು ಮಾಡಿದ್ದು ಈಗ ಹಳೆಯ ವಿಷಯವಾಗಿದೆ.

ಹೀಗೆ ಬಾಲಿವುಡ್ ಸೆಲೆಬ್ರಿಟಿಗಳು ಆಗಮಿಸಿ ತಮ್ಮ ಸಿನಿಮಾ ಪ್ರಚಾರ ಮಾಡುವ ಈ ಶೋ ನಲ್ಲಿ ನಟಿ ತಾಪ್ಸಿ ಪನ್ನುಗೆ ಎಂಟ್ರಿ ನೀಡಲು ಇದುವರೆಗೂ ಅವಕಾಶ ಸಿಕ್ಕಿಲ್ಲ. ಹೌದು ದಕ್ಷಿಣ ಮೂಲದ ಈ ನಟಿ ಬಾಲಿವುಡ್ ನಲ್ಲಿ ಈಗಾಗಲೇ ಅತ್ಯುತ್ತಮ ಸಿನಿಮಾಗಳ ಮೂಲಕ ತಮ್ಮ ಛಾಪು ಮೂಡಿಸಿದ್ದು, ಇದೀಗ ನಿರ್ಮಾಪಕಿಯಾಗಿಯೂ ಬದಲಾಗಿದ್ದಾರೆ. ಉತ್ತಮ ನಟನೆಗೆ ಪ್ರಶಸ್ತಿಗಳನ್ನು ಸಹಾ ಸ್ವೀಕರಿಸಿದ್ದಾರೆ. ನಟಿ ಕಂಗನಾ ಬಿಟ್ಟರೆ ಮಹಿಳಾ ಪ್ರಧಾನ ಕಥೆಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ತಾಪ್ಸಿ ಪನ್ನು. ಈ ನಟಿಯ ಹೊಸ ಸಿನಿಮಾ ದೊಬಾರಾ ಬಿಡುಗಡೆಗೆ ಸಜ್ಜಾಗಿದೆ.

ನಟಿಯ ಹೊಸ ಸಿನಿಮಾ ಪ್ರಚಾರ ಕಾರ್ಯಗಳು ಆರಂಭವಾಗಿದೆ. ಆದರೆ ಬಾಲಿವುಡ್ ನಲ್ಲಿ ಸ್ಟಾರ್ ನಟಿಯರ ಸಾಲಿನಲ್ಲಿ ಈಗಾಗಲೇ ಸ್ಥಾನವನ್ನು ಪಡೆದಿರುವ, ಅಭಿಮಾನಿಗಳನ್ನು ಹೊಂದಿರುವ ತಾಪ್ಸಿ ಪನ್ನುಗೆ ಕಾಫಿ ವಿತ್ ಕರಣ್ ಶೋ ನಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕೆ ಅವಕಾಶ ದೊರೆಯದೇ ಇರುವುದು ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ. ಈಗ ಇದೇ ವಿಚಾರವಾಗಿ, ನಟಿಯು ತಮ್ಮ ಸಿನಿಮಾ ಪ್ರಚಾರ ಕಾರ್ಯವನ್ನು ಮಾಡುವಾಗ, ಮಾದ್ಯಮಗಳು ಅವರನ್ನು, ಕಾಫಿ ವಿತ್ ಕರಣ್ ಶೋ ನಲ್ಲಿ ನಿಮ್ಮ ಸಿನಿಮಾ ಪ್ರಚಾರಕ್ಕೆ ಅವಕಾಶ ಏಕೆ ಸಿಕ್ಕಿಲ್ಲ ಎಂದು ಪ್ರಶ್ನೆ ಮಾಡಲಾಗಿದೆ.

ತಾಪ್ಸಿ ತಮಗೆ ಎದುರಾದ ಪ್ರಶ್ನೆಗೆ ಬಹಳ ನೇರವಾದ ಮತ್ತು ದಿಟ್ಟ ವಾದ ಉತ್ತರವನ್ನು ನೀಡುವ ಮೂಲಕ ಪರೋಕ್ಷವಾಗಿ ಕರಣ್ ಜೋಹರ್ ಗೆ ಮಾತಿನ ಛಡಿಯೇಟು ನೀಡಿದ್ದಾರೆ. ತಮ್ಮ ನೇರ ನುಡಿಗೆ ಹೆಸರಾಗಿರುವ ತಾಪ್ಸಿ, “ನನ್ನ ಲೈಂಗಿಕ ಜೀವನ ಅಷ್ಟೊಂದು ಇಂಟರೆಸ್ಟಿಂಗ್ ಆಗಿಲ್ಲ, ಅದಕ್ಕೆ ಕರಣ್ ಜೋಹರ್ ಅವರು ನನ್ನನ್ನು ಕರೆದಿಲ್ಲ” ಎಂದು ತಾಪ್ಸಿ ಉತ್ತರ ನೀಡುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದ್ದಾರೆ. ತಾಪ್ಸಿಯ ಉತ್ತರ ಕೇಳಿ ಅನೇಕರು ನಟಿಯ ನೇರ ಮಾತಿಗೆ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.

Leave a Comment