ದೇವಿಯ ಪೂಜೆಯ ವೇಳೆಗೆ ನಡೆಯುತ್ತೆ ಮಹಾ ಅದ್ಭುತ: ಕರಡಿಗಳೂ ಇಲ್ಲಿ ಮಾತೆಯ ಭಕ್ತರೇ! ಅದ್ಭುತ ಈ ಮಂದಿರ

Written by Soma Shekar

Published on:

---Join Our Channel---

ಪ್ರಪಂಚದಾದ್ಯಂತ ಅನೇಕ ದೇವಾಲಯಗಳಿವೆ, ಅದರಲ್ಲೂ ನಮ್ಮ‌ ಭಾರತ(India) ದೇಶ ದೇವಾಲಯಗಳ ತವರೂರಾಗಿದೆ. ಇಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ದೇವಾಲಯಗಳಿವೆ‌(Temples). ಅದರಲ್ಲಿ ಕೆಲವು ದೇವಾಲಯಗಳು ತಮ್ಮದೇ ಆದ ಕಥೆಯನ್ನು ಹೊಂದಿದೆ. ಪೌರಾಣಿಕ(Mythology) ಹಿನ್ನೆಲೆಯೊಂದಿಗೆ ಬೆಸೆದುಕೊಂಡಿವೆ. ಇಲ್ಲಿ ಅಡಗಿರುವ ರಹಸ್ಯಗಳು, ವೈಜ್ಞಾನಿಕತೆಗೆ ಸವಾಲಾಗಿರುವ ವಿಸ್ಮಯಗಳು ಹಾಗೂ ವಿಶೇಷತೆಗಳ ರೋಚಕತೆಗಳಿಂದಾಗಿಯೇ ಬಹಳಷ್ಟು ಜನಪ್ರಿಯತೆ ಪಡೆದಿದೆ. ಅಂತಹ ವಿಶಿಷ್ಟ, ವಿಸ್ಮಯ ದೇವಾಲಯಗಳಲ್ಲಿ, ಒಂದರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ‌.

ನಾವು ಈಗ ಹೇಳಲು ಹೊರಟಿರುವ ಈ ದೇವಾಲಯದ ವಿಶಿಷ್ಟತೆ ಏನೆಂದರೆ, ಈ ಆಲಯದಲ್ಲಿ ಪ್ರತಿ ಸಂಜೆ ದೇವಿಯ ಆರತಿ ಸಮಯಕ್ಕೆ, ಅಪರೂಪದ ಅತಿಥಿಗಳಾಗಿ ಆಗಮಿಸುತ್ತವೆ ಕಾಡಿನ ಕರಡಿಗಳು(Bear). ಹೌದು, ಇದು ಸುಳ್ಳಲ್ಲ, ಕರಡಿಗಳು ಇಲ್ಲಿ ಆರತಿ ವೇಳೆಗೆ ಮಂದಿರಕ್ಕೆ ಆಗಮಿಸುತ್ತವೆ. ಹಾಗಾದರೆ ಯಾವುದು ಆ ದೇವಾಲಯ ಅಂತೀರಾ? ಬನ್ನಿ ಅದನ್ನೂ ತಿಳಿಯೋಣ. ಇಂತಹುದೊಂದು ಅಪರೂಪದ ಆಲಯ ಚತ್ತೀಸ್ ಗಡ್ ನ ಮಹಾ ಸಮುಂಡ್‌ನ ಘುಂಚಪಾಲಿ ಬೆಟ್ಟದಲ್ಲಿ ಇರುವ ಮಾತಾ ಚಂಡಿಯ (Chandika Temple) ಆಲಯವಾಗಿದೆ.

ಈ ಮಂದಿರವು ತಂತ್ರ ಧ್ಯಾನಕ್ಕೆ ಪ್ರಸಿದ್ಧವಾಗಿದೆಯಾದರೂ, ಅಷ್ಟಾಗಿ ಹೊರ ಜಗತ್ತಿಗೆ ಪರಿಚಯವಿರಲಿಲ್ಲ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಿಂದಾಗಿ, ಈ ಆಲಯದಲ್ಲಿನ ಕರಡಿಗಳ ವಿಶೇಷತೆಯಿಂದಾಗಿ ಜನಪ್ರಿಯತೆ ಪಡೆಯುತ್ತಿದೆ. ಪ್ರತಿದಿನ ಸಂಜೆ ಕರಡಿಗಳ ಗುಂಪು, ದೇವಾಲಯಕ್ಕೆ ಬಂದು, ಭಕ್ತರನ್ನು ಹರಸುತ್ತಿರುವ ಚಂಡಿಕಾ  ಮಹಾತಾಯಿಯನ್ನು ದರ್ಶನವನ್ನು ಮಾಡುತ್ತವೆ. ಪ್ರತಿದಿನ ಇಡೀ ಕರಡಿಗಳ ಕುಟುಂಬವು ದೇವಾಲಯಕ್ಕೆ ಬರುತ್ತದೆ. ಇಲ್ಲಿ ನಡೆಯುವ ದೇವಿ ಆರತಿಯಲ್ಲಿ ಇತರ ಭಕ್ತರೊಂದಿಗೆ ತಾವೂ ಸೇರಿಕೊಳ್ಳುತ್ತವೆ. 

ಅದೇ ಸಮಯದಲ್ಲಿ, ಎಲ್ಲಾ ಕರಡಿಗಳು ತಮ್ಮ ಕೈಗಳನ್ನು ಜೋಡಿಸಿ ತಾಯಿಯನ್ನು ಪೂಜಿಸುತ್ತವೆ ಮತ್ತು ಯಾರಿಗೂ ಯಾವುದೇ ಹಾನಿ ಮಾಡದೇ ಪ್ರಸಾದ ಪಡೆಯುತ್ತವೆ. ಈ ಕರಡಿಗಳೆಲ್ಲವೂ ದೇವಾಲಯದ ಗರ್ಭಗೃಹಕ್ಕೆ ಹೋಗಿ ತಾಯಿಯ ಅರ್ಪಣೆಗಳನ್ನು ಸಹಾ ಸ್ವೀಕರಿಸುತ್ತವೆ. ಸ್ಥಳೀಯರು ಹೇಳುವ ಪ್ರಕಾರ ಈ ಪ್ರದೇಶದಲ್ಲಿ ಈ ಹಿಂದೆ ಸಾಕಷ್ಟು ಕರಡಿಗಳು ಇದ್ದವಾದರೂ, ಅವು ಹೊರಗೆ ಬರುತ್ತಿರಲಿಲ್ಲ.  ಆದರೆ ಇದ್ದಕ್ಕಿದ್ದಂತೆ ಕೆಲವು ವರ್ಷಗಳಿಂದ ಕರಡಿಗಳ ಇಡೀ ಕುಟುಂಬವು ಆರತಿಯ ಸಮಯದಲ್ಲಿ ದೇವಸ್ಥಾನಕ್ಕೆ ಬರಲು ಪ್ರಾರಂಭಿಸಿದೆ ಎನ್ನುತ್ತಾರೆ.

ಜನರು ದೇವಾಲಯದಲ್ಲಿ(Bears at Temple) ಕರಡಿಗಳ ಆಗಮನವನ್ನು ತಾಯಿಯ ಪವಾಡ,‌ ಆಕೆಯ ಮಹಿಮೆ ಎಂದೇ ನಂಬಿದ್ದಾರೆ. ಒಂದು ವೇಳೆ  ಅವು ಬರದಿದ್ದರೆ ತಾಯಿಗೆ ಕೋಪ ಬರುತ್ತದೆ ಎಂದು ಹೇಳುತ್ತಾರೆ. ಇಲ್ಲಿನ ಜನರು ಯಾವುದೇ ಭಯವಿಲ್ಲದೆ ಆರತಿಯ ಸಮಯದಲ್ಲಿ ಕರಡಿಗಳೊಂದಿಗೆ ನಿಲ್ಲುತ್ತಾರೆ. ದೇವಾಲಯಕ್ಕೆ ಬರುವ ಜನರು ತಮ್ಮ ಅನುಭವವನ್ನು ಸ್ಮರಣೀಯವಾಗಿಸಲು ಕರಡಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ನಿಜಕ್ಕೂ ಇದೊಂದು ವಿಸ್ಮಯವೇ ಅಲ್ಲವೇ ಸ್ನೇಹಿತರೇ..

Leave a Comment