ಪುನೀತ್ ರಾಜ್ ಕುಮಾರ್ ಜನ್ಮದಿನಕ್ಕೆ ಕಬ್ಜಾ ಸಿನಿಮಾ: ಅಪ್ಡೇಟ್ ಕಂಡು ಥ್ರಿಲ್ ಆದ ಅಭಿಮಾನಿಗಳು

Written by Soma Shekar

Published on:

---Join Our Channel---

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜಾ(Kabza) ಬಿಡುಗಡೆಗೆ ಮುನ್ನವೇ ಕರ್ನಾಟಕದಲ್ಲಿ ಮಾತ್ರವೇ ಅಲ್ಲದೇ ಇಡೀ ದೇಶದ ಸಿನಿಮಾ ರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ರಿಯಲ್ ಸ್ಟಾರ್ ಉಪೇಂದ್ರ(Upendra), ಕಿಚ್ಚ ಸುದೀಪ್(kichcha Sudeep) ಪ್ರಮುಖ ಪಾತ್ರಗಳಲ್ಲಿರುವ ಕಬ್ಜಾ ಸಿನಿಮಾವನ್ನು ಆರ್.ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಈಗ ಈ ಸಿನಿಮಾ ಕುರಿತಾಗಿ ಹೊಸ ಅಪ್ಡೇಟ್ ಒಂದು ಹೊರ ಬಂದಿದ್ದು, ಸಿನಿಮಾ ಪ್ರೇಮಿಗಳು ಮತ್ತು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneet Raj Kumar) ಅವರ ಅಭಿಮಾನಿಗಳು ಸಹಾ ಸಖತ್ ಖುಷಿ ಪಡುತ್ತಿದ್ದಾರೆ.

ಶ್ರೀ ಸಿದ್ಧೇಶ್ವರ ಎಂಟರ್ ಪ್ರೈಸಸ್ ಸಂಸ್ಥೆ ಹೊಸ ವಿಷಯವನ್ನು ತಿಳಿಸುತ್ತಾ, ಸಿನಿಮಾ ಬಿಡುಗಡೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ಇಂಡಿಯನ್ ರಿಯಲ್ ಸ್ಟಾರ್ ಉಪೇಂದ್ರ(Upendra) ಹಾಗೂ ಪ್ರಮುಖ ಪಾತ್ರದಲ್ಲಿ ಕಿಚ್ಚ ಸುದೀಪ್(Sudeep) ಅಭಿನಯದ, ಆರ್ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜಾ ಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್(Puneet Raj Kumar) ಅವರು ನೀಡುತ್ತಿದ್ದ ಪ್ರೋತ್ಸಾಹ ಅಪಾರ. ಚಿತ್ರದ ಕೆಲವು ತುಣುಕುಗಳನ್ನು ಅವರಿಗೆ ತೋರಿಸಿದಾಗ ಹಾಲಿವುಡ್ ಸಿನಿಮಾ ಇದ್ದ ಹಾಗೆ ಇದೆ ಎಂದು ಮೆಚ್ಚುಗೆ ನೀಡಿದ್ದರು.

ಸಹೃದಯಿ, ಅಭಿಮಾನಿಗಳ ಪಾಲಿಗೆ ದೇವರೇ ಆಗಿರುವ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನದಂದು ನಮ್ಮ ಕಬ್ಜಾ(Kabza) ಸಿನಿಮಾವನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತಿದ್ದೇವೆ. ಪುನೀತ್ ರಾಜ್‍ಕುಮಾರ್ ಅವರ ಹುಟ್ಟು ಹಬ್ಬ ಮತ್ತು ಹೊಸ ವರ್ಷದ ಮೊದಲ ದಿನವಾದ ಯುಗಾದಿ ಹಬ್ಬದ ಸಮೀಪದಲ್ಲೇ ನಮ್ಮ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ ಎಂದು ತಿಳಿಸಿದೆ. ಐಎಂಡಿಬಿ 2023 ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸಹಾ ಕಬ್ಜಾ ಸ್ಥಾನವನ್ನು ಪಡೆದಿದ್ದು, ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ.

Leave a Comment