ಕನ್ಯಾದಾನವನ್ನು ಪ್ರಶ್ನಿಸುವ ನಿಮಗೆ ತ್ರಿವಳಿ ತಲಾಖನ್ನು ಪ್ರಶ್ನಿಸುವ ಯೋಗ್ಯತೆ ಇಲ್ಲವೇ? ಆಲಿಯಾ ಭಟ್ ಮೇಲೆ ನೆಟ್ಟಿಗರ ಸಿಟ್ಟು

Written by Soma Shekar

Published on:

---Join Our Channel---

ಸಾಮಾಜಿಕ ಮಾಧ್ಯಮಗಳು ಹೆಚ್ಚು ಸಕ್ರಿಯವಾಗಿರುವ ಹಾಗೂ ಅದರಲ್ಲಿ ಬಹಳಷ್ಟು ಜನ ತೊಡಗಿಸಕೊಂಡಿರುವ ಈ ಕಾಲದಲ್ಲಿ ಯಾವುದೇ ಒಂದು ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತಪಡಿಸಿದ ಕೂಡಲೇ, ಅದರ ಪರ ಹಾಗೂ ವಿರೋಧ ಮಾತುಗಳು ಕೇಳಿ ಬರುತ್ತದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ಪ್ರಮುಖರು, ಉದ್ಯಮಿಗಳು ಪ್ರಸ್ತುತಪಡಿಸುವ ವಿಚಾರಧಾರೆಗಳು ತೀವ್ರ ಚರ್ಚೆಗೆ ಕಾರಣವಾಗುತ್ತದೆ, ಮಾತ್ರವಲ್ಲದೇ ಭರ್ಜರಿಯಾಗಿ ಟ್ರೋಲ್ ಗೆ ಗುರಿಯಾಗುತ್ತದೆ ಮತ್ತು ಟೀಕೆಗಳು ಸಾಗರದಂತೆ ಹರಿದು ಬರುವುದು ಸಹಾ ನಿಜವೇ ಆಗಿದೆ.

ಪ್ರಸ್ತುತ ಭಾರತೀಯ ಸಮಾಜದಲ್ಲಿ ಮಹಿಳೆಯರಿಗೆ ಸಂಬಂಧಪಟ್ಟ ಒಂದು ವಿಷಯವನ್ನಿಟ್ಟುಕೊಂಡು ಜಾಹೀರಾತೊಂದನ್ನು ಮಾಡಲಾಗಿದೆ. ಇದರಲ್ಲಿ ಬಾಲಿವುಡ್ ನ ಸ್ಟಾರ್ ನಟಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಮೊಹೈಯ್ ಫ್ಯಾಷನ್ ನ ಈ ಜಾಹೀರಾತಿನ ವಿಷಯ ಉತ್ತಮ ಎನಿಸಿದರೂ ಕೂಡಾ, ಇದರ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಜಾಹಿರಾತಿನಲ್ಲಿ ಸ್ತ್ರೀ ಯನ್ನು ಹೇಗೆ ಬೇರೆ ಬೇರೆ ಮನೆಗೆ ಹೋಗುವವಳು, ಬೇರೆ ಮನೆಯನ್ನು ಬೆಳಗುವವಳು ಎಂಬೆಲ್ಲಾ ಮಾತುಗಳನ್ನು ಸ್ವಂತ ಮನೆಯವರೇ ಹೇಳುತ್ತಾರೆ ಎನ್ನುವುದನ್ನು ತೋರಿಸಲಾಗಿದೆ.

ನಟಿ ಆಲಿಯಾ ಭಟ್ ಜಾಹೀರಾತಿನಲ್ಲಿ, ನಾನೇನು ವಸ್ತುವೇ?? ನನ್ನನ್ನು ದಾನ ಮಾಡಲು, ಈ ಕನ್ಯಾದಾನ ಪದ್ಧತಿ ಏತಕ್ಕೆ?? ಇದನ್ನು ಕನ್ಯಾದಾನ ಎನ್ನುವ ಬದಲು ಕನ್ಯಾ ಮಾನ ಎಂದು ಏಕೆ ಕರೆಯಬಾರದು?? ಎಂದು ಪ್ರಶ್ನೆ ಮಾಡುತ್ತಾರೆ. ಈ ಜಾಹೀರಾತು ಬಹಳ ಸುಂದರವಾಗಿ ಮೂಡಿ ಬಂದಿದೆ. ಆದರೆ ಇದೇ ವೇಳೆ ಇದು ಬಹಳಷ್ಟು ಜನ ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ, ಅವರು ತಮ್ಮ ಆಕ್ಷೇಪವನ್ನು ಹೊರಹಾಕಿದ್ದಾರೆ.

ನೆಟ್ಟಿಗರು ಆಲಿಯಾರನ್ನು, ಕನ್ಯಾದಾನದ ವಿಷಯವನ್ನು ಏಕೆ ಪ್ರಶ್ನೆ ಮಾಡುತ್ತೀರಿ?? ಹಾಗೆ ಮಾಡುವುದಾದರೆ ತ್ರಿವಳಿ ತಲಾಕ್ ಕುರಿತಾಗಿಯೂ ಪ್ರಶ್ನೆ ಮಾಡಿ ಎಂದು ತಮ್ಮ ಸಿಟ್ಟು ಮತ್ತು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಒಂದು ದಿಕ್ಕಿನಲ್ಲಿ ಆಲೋಚಿಸಿದಾಗ ಇದು ಸಮಂಜಸವೂ ಹೌದು. ತ್ರಿವಳಿ ತಲಾಕ್ ಕೂಡಾ ಒಂದು ಸಾಮಾಜಿಕ ಪಿಡುಗು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ‌.

ಕನ್ಯಾದಾನ ವನ್ನು ಪ್ರಶ್ನೆ ಮಾಡಿದ ಮೇಲೆ ತ್ರಿವಳಿ ತಲಾಖ್ ಬಗ್ಗೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಎನ್ನುವುದು ನೆಟ್ಟಿಗೆರ ಪ್ರಶ್ನೆಯಾಗಿದೆ. ಹೀಗೆ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕನ್ಯಾದಾನ ವನ್ನು ಜಾಹೀರಾತಿನ ಮೂಲಕ ಪ್ರಶ್ನಿಸಿದ ಆಲಿಯಾ ಭಟ್ ಅವರನ್ನು ತೀವ್ರವಾಗಿ ಟೀಕೆ ಮಾಡಲಾಗುತ್ತಿದೆ. ಅವರ ಬಗ್ಗೆ ಈಗಾಗಲೇ ಟ್ರೋಲ್ ಗಳನ್ನು ಮಾಡಲು ಟ್ರೋಲ್ ಪೇಜ್ ಗಳು ಸಜ್ಜಾಗಿವೆ.

Leave a Comment