ಕನಸಿನಲ್ಲಿ ಶನಿದೇವನು ಕಾಣಿಸಿಕೊಂಡರೆ ಅದರ ಅರ್ಥವೇನು? ಯಾವುದರ ಸಂಕೇತವದು? ಇಲ್ಲಿದೆ ಉತ್ತರ

Written by Soma Shekar

Published on:

---Join Our Channel---

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ. ಆದರೆ ಕೆಲವು ಬಾರಿ ಒಳ್ಳೆಯ ಸ್ವಪ್ನ ಗಳು ಬಂದರೆ ಮತ್ತೆ ಕೆಲವೊಮ್ಮೆ ಭಯಪಡುವ ದುಸ್ವಪ್ನಗಳು ಕೂಡಾ ಬರುತ್ತವೆ. ಅನೇಕರು ಭ ಯಾ ನ ಕ ಮತ್ತು ದುಃಸ್ವಪ್ನಗಳನ್ನು ಕಂಡಾಗ ಉದ್ವಿಗ್ನರಾಗುತ್ತಾರೆ. ಆ ಕನಸಿನಲ್ಲಿ ಬಂದ ವಿಷಯಗಳ ಬಗ್ಗೆ ಅವರು ಪದೇ ಪದೇ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ನಾವು ಕಾಣುವ ಪ್ರತಿಯೊಂದು ಕನಸಿಗೂ ವಿಶೇಷ ಅರ್ಥವಿದೆ, ನಮ್ಮ ಆಲೋಚನೆಗಳು ಮತ್ತು ನಮ್ಮ ನಿರ್ಧಾರಗಳಿಗೆ ಅನುಗುಣವಾಗಿ ಅಂತಹ ಕನಸುಗಳು ಬರುತ್ತಲೇ ಇರುತ್ತವೆ ಎನ್ನುತ್ತಾರೆ ತಜ್ಞರು. ಆದರೆ ಕೆಲವೊಮ್ಮೆ ನಾವು ಕನಸಿನಲ್ಲಿ ದೇವರನ್ನು ಸಹಾ ಕಾಣುತ್ತೇವೆ. ಒಂದು ವೇಳೆ ಕನಸಿನಲ್ಲಿ ಶನಿ ದೇವರನ್ನು ಕಂಡರೆ ಏನಾಗುತ್ತದೆ?

ಕನಸಿನಲ್ಲಿ ಶನಿ ದೇವನು ಕಾಣಿಸಿಕೊಳ್ಳುವುದು ವರವೇ? ಇದು ಶಾಪವೇ? ಏನಾದರೂ ಸೂಚನೆಯೇ? ಈಗ ನಾವು ಈ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ. ನಮಗೆ ಬರುವ ಕೆಲವು ಕನಸುಗಳು ನಮ್ಮನ್ನು ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ತೊಂದರೆಗೊಳಿಸುತ್ತವೆ. ಇದಲ್ಲದೇ ಆ ಕನಸು ನಮ್ಮನ್ನು ಬಹಳ ಯೋಚಿಸುವಂತೆಯೂ ಮಾಡುತ್ತದೆ. ಆದರೆ ಎರಡು ರೀತಿಯ ಕನಸುಗಳಿವೆ, ಅದರಲ್ಲಿ ಮೊದಲನೆಯದು ಹಿಂದಿನ ಘಟನೆಗಳನ್ನು ಆಧರಿಸಿದ ಕನಸು, ಎರಡನೆಯದು ಭವಿಷ್ಯದ ಘಟನೆಗಳನ್ನು ಆಧರಿಸಿದ್ದು.

ಆದರೆ ಸ್ವಪ್ನ ವಿಜ್ಞಾನದ ಪ್ರಕಾರ, ನಾವು ಕನಸಿನಲ್ಲಿ ಕಾಣುವ ಕೆಲವು ಸಂಗತಿಗಳು ಜೀವನದಲ್ಲಿ ನಿಜವಾಗುತ್ತವೆ. ಇದಲ್ಲದೇ ಕೆಲವು ಕನಸುಗಳು ಶನಿ ದೇವರೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತವೆ. ನಿಮ್ಮ ಕನಸಿನಲ್ಲಿ ಶನಿ ದೇವನ ಬಗ್ಗೆ ನೀವು ಕನಸು ಕಾಣುತ್ತಿದ್ದರೆ, ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಸಂಭವಿಸಲಿವೆ ಎನ್ನುವ ಅರ್ಥವನ್ನು ನೀಡುತ್ತದೆ. ಆ ಕನಸುಗಳು ಶನಿಯು ನಿಮ್ಮ ಮೇಲೆ ದಯೆ ತೋರುವ ಅಥವಾ ನಿಮ್ಮ ಮೇಲೆ ಕೋಪಗೊಳ್ಳುವ ಸಂಕೇತವಾಗಿರಬಹುದು. ನೀವು ನಿಮ್ಮ ಕನಸಿನಲ್ಲಿ ಶನಿದೇವನ ಮೂರ್ತಿ ಅಥವಾ ಚಿತ್ರ ಕಂಡರೆ ಮುಂಬರುವ ಅವಧಿಯಲ್ಲಿ ಸುಖ-ಸಂತೋಷದ ಭಾಗ್ಯವು ನಿಮಗೆ ದೊರೆಯುತ್ತದೆ.

ಅದೇ ಸಮಯದಲ್ಲಿ ಕನಸಿನ ಫಲಿತಾಂಶಗಳು ನಿಮ್ಮ ಜಾತಕದಲ್ಲಿ ಶನಿಯ ಸ್ಥಾನವನ್ನು ಅವಲಂಬಿಸಿರುತ್ತದೆ.
ಅದೇ ರೀತಿ ಶನಿದೇವನ ಮೂರ್ತಿಯನ್ನು ಕನಸಿನಲ್ಲಿ ಕಂಡರೆ ಕೆಲವರಿಗೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕನಸಿನಲ್ಲಿ ಶನಿಯು ನೇರವಾಗಿ ಬಂದು ನಿಮ್ಮನ್ನು ಆಶೀರ್ವದಿಸಿದರೆ ಆ ಕನಸು ತುಂಬಾ ಮಂಗಳಕರವಾಗಿರುತ್ತದೆ. ಇದರರ್ಥ ಶನಿಯು ನಿಮ್ಮ ಜೀವನದಿಂದ ಎಲ್ಲಾ ತೊಂದರೆಗಳನ್ನು ತೊಡೆದು ಹಾಕಲಿದ್ದಾನೆ ಎಂದರ್ಥ. ಅಲ್ಲದೇ ಆರೋಗ್ಯ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ, ಅವರ ಕನಸಿನಲ್ಲಿ ಶನಿಯು ಕಾಣಿಸಿಕೊಂಡರೆ, ಅವರ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದರ್ಥ.

ಶನಿಯನ್ನು ಮಾತ್ರವಲ್ಲದೇ ಶನಿದೇವನ ದೇವಾಲಯವನ್ನೂ ಕನಸಿನಲ್ಲಿ ನೋಡುವುದು ಮಂಗಳಕರವೆಂದು ಹೇಳಲಾಗುತ್ತದೆ. ಕನಸಿನಲ್ಲಿ ಶನಿ ದೇವನ ಆಲಯವನ್ನು ಕಂಡ ಜನರು ಶನಿದೇವನ ಕೃಪೆಗೆ ಪಾತ್ರರಾಗಲಿದ್ದಾರೆ ಎಂದರ್ಥ. ಕನಸಿನಲ್ಲಿ ಶನಿ ದೇವಸ್ಥಾನವನ್ನು ನೋಡುವುದು ಆರ್ಥಿಕ ಲಾಭದ ಸಂಕೇತವಾಗಿದೆ ಎನ್ನಲಾಗಿದೆ. ಅಲ್ಲದೇ ಕೆಲವು ಪ್ರಮುಖ ಕಾರ್ಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ ಎಂಬುದರ ಸಂಕೇತವಾಗಿದೆ ಎಂದು ಸಹಾ ಹೇಳಲಾಗಿದೆ.

Leave a Comment