ಕತ್ತೆ ಹಾಲಿಗೆ ಏಕೆ ಇಷ್ಟೊಂದು ಬೆಲೆ?? ಪ್ರಯೋಜನ ತಿಳಿದರೆ ಅಚ್ಚರಿ ಪಡುವುದು ಖಚಿತ!!!

Written by Soma Shekar

Published on:

---Join Our Channel---

ನಿತ್ಯ ಜೀವನದಲ್ಲಿ ಹಾಲು ಒಂದು ಅವಶ್ಯಕತೆ ಆಗಿದೆ. ಬಹಳಷ್ಟು ಜನರಿಗೆ ದಿನ ಬೆಳಗಾಗುವುದೇ ಹಾಲಿನಿಂದ ಸಿದ್ಧಪಡಿಸಿದ ಕಾಫಿ, ಟೀ ಗಳಿಂದ ಎನ್ನುವುದು ಸಹಾ ನಿಜ. ಸಾಮನ್ಯವಾಗಿ ಲೀಟರ್ ಹಾಲಿಗೆ ಜನರು 50 ರೂ. ವರೆಗೆ ನೀಡಿ ಕೊಂಡು ತರುತ್ತಾರೆ. ಆದರೆ ಇಂತಹ ಹಾಲು ಲೀಟರ್ ಒಂದಕ್ಕೆ ಸಾವಿರಾರು ರೂ. ದರದಲ್ಲಿ ಮಾರಾಟವಾಗುತ್ತದೆ ಎಂದರೆ ನೀವು ನಂಬುವಿರಾ?? ನಂಬೋಕೆ ಕಷ್ಟ ಆಗಬಹುದು. ಆದರೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಇಂತಹ ಒಂದು ಹಾಲಿನ ಮಾರಾಟ ನಡೆಯುತ್ತಿದೆ. ಹಾಗಾದರೆ ಏನು ಈ ಹಾಲಿನ ವಿಶೇಷತೆ?? ಎನ್ನುವಿರಾ.. ಖಂಡಿತ ವಿಶೇಷತೆ ಇದೆ.

ಇದು ಹಸು ಅಥವಾ ಎಮ್ಮೆಯ ಹಾಲಲ್ಲ, ಬದಲಿಗೆ ಇದು ಕತ್ತೆಯ ಹಾಲಾಗಿದೆ. ಒಂದು ಲೀಟರ್ ಕತ್ತೆ ಹಾಲು ಬೇಕೆಂದರೂ ಸಹಾ ಸಾವಿರಾರು ರೂ.ಖರ್ಚು ಮಾಡಬೇಕಾಗುತ್ತದೆ. ಕತ್ತೆಯ ಹಾಲಿಗೆ ಏಕಿಷ್ಟು ಬೆಲೆ ಎನ್ನುವ ವಿಚಾರಕ್ಕೆ ಬರುವುದಾದರೆ, ಕತ್ತೆಯ ಹಾಲಿನಲ್ಲಿ ಕೆಲವು ವಿಶೇಷತೆಗಳು ಇವೆ. ಕತ್ತೆ ಹಾಲು ಮಾನವನ ಆರೋಗ್ಯಕ್ಕೆ ಬಹಳ‌ ಲಾಭದಾಯಕ ಎನ್ನಲಾಗಿದೆ. ಅಲ್ಲದೇ ಇದನ್ನು ಔಷಧಿಗಳು ಮತ್ತು ಸೌಂದರ್ಯ ವರ್ಧಕಗಳಲ್ಲೂ ಸಹಾ ಬಳಸಲಾಗುತ್ತದೆ ಎನ್ನುವುದು ವಿಶೇಷ.

ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಜೀವಕೋಶಗಳಿಗೆ ಇದು ನವ ಚೈತನ್ಯವನ್ನು ನೀಡುತ್ತದೆ. ಈಜಿಪ್ಟ್ ನ ಇತಿಹಾಸವನ್ನು ಓದಿದಾಗ ಅಲ್ಲಿ ತನ್ನ ಅಂದದಿಂದಲೇ ಜನರನ್ನು ಮರಳುಗೊಳಿಸಿದ್ದ ರಾಣಿ ಕ್ಲಿಯೋಪಾತ್ರ ತನ್ನ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕತ್ತೆಯ ಹಾಲಿನಿಂದ ಸ್ನಾನವನ್ನು ಮಾಡುತ್ತಿದ್ದಳು ಎಂದು ಉಲ್ಲೇಖಿಸಲಾಗುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ವಯೋಸಹಜ ಚರ್ಮ ಬದಲಾವಣೆಗೆ ತಡೆಯನ್ನು ಹಾಕುತ್ತದೆ.

ಕೆಲವರಿಗೆ ಹಸು ಮತ್ತು ಎಮ್ಮೆ ಯ ಹಾಲು ಅಲರ್ಜಿ ಆಗಬಹುದು, ಆದರೆ ಕತ್ತೆಯ ಹಾಲು ಅಂತಹವರಿಗೂ ಸೂಕ್ತ ಎಂದು ಹೇಳಲಾಗುತ್ತದೆ. ಕತ್ತೆಯ ಹಾಲನ್ನು ಸೌಂದರ್ಯ ವರ್ಧಕಗಳಲ್ಲಿ ಪ್ರಮುಖವಾಗಿ, ಫೇಸ್ ಕ್ರೀಂ, ಸಾಬೂನುಗಳು ಹಾಗೂ ಮಾಯಿಶ್ಚರೈಸರ್ ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ. ಕತ್ತೆಯೊಂದು ಶ್ರಮ ಜೀವಿ ಎಂದಷ್ಟೇ ಜನರಿಗೆ ತಿಳಿದಿದೆ. ಆದರೆ ಅದರ ಹಾಲಿನಲ್ಲಿರುವ ಉತ್ತಮ ಅಂಶಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ.

Leave a Comment