ಒಂಟಿತನದಿಂದ ಬಳಲುವ ವೃದ್ಧರಿಗೆ ಆಸರೆ ನೀಡಲು ಆಶಾಕಿರಣದಂತೆ ಬಂದ ರತನ್ ಟಾಟಾ: ಹರಿದು ಬರುತ್ತಿದೆ ಮೆಚ್ಚುಗೆ

Written by Soma Shekar

Published on:

---Join Our Channel---

ಮನುಷ್ಯನ ಜೀವನದಲ್ಲಿ ಆತನ ವಯಸ್ಸಾದ ಕಾಲವು ಬಹಳ ಮಹತ್ವದ ಘಟ್ಟವಾಗಿರುತ್ತದೆ.‌ ಈ ಘಟ್ಟದಲ್ಲಿ ಬಹಳಷ್ಟು ಜನರಿಗೆ ಕಾಡುವ ಒಂಟಿತನವೇ ಅವರ ಬಹುದೊಡ್ಡ ಸಮಸ್ಯೆ ಅಥವಾ ಚಿಂತೆಯಾಗಿರುತ್ತದೆ. ಹೀಗೆ ಒಂಟಿತನದಿಂದ ಬಳಲುವ ಹಿರಿ ಜೀವಗಳ ಜೊತೆಯಾಗಿದ್ದು, ಅವರಿಗೊಂದು ಸೇವೆಯನ್ನು ಸಲ್ಲಿಸಲು ಹೊಸ ಸ್ಟಾರ್ಟಪ್ ಒಂದು ಆರಂಭವಾಗುತ್ತಿದ್ದು, ಇದರಲ್ಲಿ ಸಮಸ್ತ ಭಾರತೀಯರ ಮನಸ್ಸಿನಲ್ಲಿ ಗೌರವದ ಸ್ಥಾನವನ್ನು ಪಡೆದಿರುವ ರತನ್ ಟಾಟಾ ಅವರು ಹೂಡಿಕೆಯನ್ನು ಮಾಡುತ್ತಿದ್ದು, ಈ ವಿಷಯ ಸುದ್ದಿಯಾಗಿ ಅನೇಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸ್ವತಃ ಹಿರಿಯ ನಾಗರಿಕನಾಗಿರುವ ರತನ್ ಟಾಟಾ ಅವರು ಹಿರಿಯ ನಾಗರಿಕರಿಗಾಗಿ ಮಾಡುತ್ತಿರುವ ಈ ಕಾರ್ಯವು ಬಹಳ ವಿಶೇಷ ಹಾಗೂ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ರತನ್ ಟಾಟಾ ಅವರ ಜನರಲ್ ಮ್ಯಾನೇಜರ್ ಆಗಿರುವಂತಹ ಶಂತನು ನಾಯ್ಡು ಅವರು ಗುಡ್ ಫೆಲ್ಲೋಸ್ ಎನ್ನುವ ಹೆಸರಿನಲ್ಲಿ ವೃದ್ಧರಿಗಾಗಿಯೇ ಒಂದು ಕಂಪನಿಯನ್ನು ಆರಂಭ ಮಾಡಿದ್ದು, ಅದರಲ್ಲಿ ರತನ್ ಟಾಟಾ ಅವರು ಹೂಡಿಕೆಯನ್ನು ಮಾಡುತ್ತಿದ್ದಾರೆ. ಆದರೆ ರತನ್ ಟಾಟಾ ಅವರು ಎಷ್ಟು ಹೂಡಿಕೆ ಮಾಡಲಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಅಧಿಕೃತವಾಗಿ ಹಂಚಿಕೊಂಡಿಲ್ಲ.‌ ಶಾಂತನು ನಾಯ್ಡು ಅವರಿಗೆ ಈಗ 22 ವರ್ಷ ವಯಸ್ಸು. ಅವರು 2018 ರಿಂದ ರತನ್ ಟಾಟಾ ಅವರ ಜನರಲ್ ಮ್ಯಾನೇಜರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ಶಂತನು ರತನ್ ಟಾಟಾ ಅವರನ್ನು ಭೇಟಿಯಾಗಿದ್ದು ಕೂಡಾ ಒಂದು ಮಾನವೀಯ ಕಾರ್ಯದ ಮೂಲಕವೇ.

ಹೌದು, ಕಾಲೇಜು ದಿನಗಳಲ್ಲಿ ಬೀದಿ ನಾಯಿಗಳನ್ನು ರಾತ್ರಿ ವೇಳೆ ಅಪಘಾತದಿಂದ ತಪ್ಪಿಸಲು ಶಂತನು ನಾಯಿಗಳ ಕೊರಳಿಗೆ ಹಾಕುವ ಹೊಳೆಯುವ ವಿಶೇಷ ಬೆಲ್ಟ್ ಗಳನ್ನು ತಯಾರಿಸಿದ್ದರು. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಅವರು ರತನ್ ಟಾಟಾ ಅವರ ನೆರವನ್ನು ಕೋರಿ ಪತ್ರ ಬರೆದಿದ್ದರು. ಅದಕ್ಕೆ ರತನ್ ಟಾಟಾ ಪ್ರತಿಕ್ರಿಯೆ ನೀಡಿದ್ದು ಮಾತ್ರವಲ್ಲದೇ, ಮುಂದೆ ಶಂತನು ಅವರಿಗೆ ಉದ್ಯೋಗದ ಅವಕಾಶ ಸಹಾ ನೀಡಿದ್ದಾರೆ. ರತನ್ ಟಾಟಾ ಅವರು ವಿಶೇಷ ಆಲೋಚನೆಗಳೊಂದಿಗೆ ಬರುವ ಸ್ಟಾರ್ಟಪ್ ಗಳಿಗೆ ಸದಾ ಬೆಂಬಲವನ್ನು ನೀಡುತ್ತಾ ಬಂದಿದ್ದು, ಈಗ ಶಂತನು ಆರಂಭಿಸಿರುವ ಹೊಸ ಯೋಜನೆಗೂ ಹೂಡಿಕೆ ಮಾಡುತ್ತಿದ್ದಾರೆ.

ಇನ್ನು ಈ ಗುಡ್ ಫೆಲ್ಲೋಸ್ ವೃದ್ಧರೊಂದಿಗೆ ಇರಲು,ಅವರನ್ನು ಚಟುವಟಿಕೆಯಿಂದ ಇಡುವ, ವಿವಿಧ ಚಟುವಟಿಕೆಗಳ ಮೂಲಕ ವೃದ್ಧರನ್ನು ಸಂತೋಷವಾಗಿಡುವ ಯುವ ಜನರಿಗೆ ಈ ಕಂಪನಿಯಲ್ಲಿ ಕೆಲಸವನ್ನು ನೀಡಲಾಗುತ್ತದೆ ಎನ್ನಲಾಗಿದ್ದು, ಇಡೀ ದಿನ ಯುವಕರು ವೃದ್ಧರನ್ನು ಚಟುಚಟಿಕೆಯಿಂದ ಇರಿಸಿ ಅವರ ಒಂಟಿತನವನ್ನು ದೂರ ಮಾಡಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಈ ಕಂಪನಿ ಮುಂಬೈನಲ್ಲಿ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲೂ ಆರಂಭ ಮಾಡಲಾಗುವುದು ಎನ್ನಲಾಗಿದೆ.

Leave a Comment