ಏಯ್! ಏನಿದು? ಎಲ್ಲಿಂದ ಬರ್ತೀರೋ ನೀವೆಲ್ಲಾ? ವೈರಲ್ ಫೋಟೋಗೆ ನೆಟ್ಟಿಗರ ಪ್ರತಿಕ್ರಿಯೆ

Written by Soma Shekar

Published on:

---Join Our Channel---

ಬಿಲ್ಡಿಂಗ್ ಅಂದ ಮೇಲೆ ಅಲ್ಲೊಂದು ಬಾತ್ರೂಂ ಇರುವುದು ಬಹಳ ಸಹಜವಾದ ವಿಷಯವಾಗಿದೆ. ಇನ್ನು ಶೌಚಾಲಯದ ವಿಷಯಕ್ಕೆ ಬಂದರೆ ಒಂದು ಶೌಚಾಲಯದಲ್ಲಿ ಒಂದು ಕಮೋಡ್ ಅಳವಡಿಸುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇಲ್ಲೊಂದು ಆಫೀಸಿನಲ್ಲಿನ ಟಾಯ್ಲೆಟ್ ನಿರ್ಮಾಣವನ್ನು ನೋಡಿದರೆ ಒಂದು ಕ್ಷಣ ಪ್ರತಿಯೊಬ್ಬರೂ ಕೂಡಾ ಆಶ್ಚರ್ಯ ಪಡುವುದು ಮಾತ್ರವಲ್ಲದೇ ಅದು ನೋಡುಗರನ್ನು ದಂಗಾಗುವಂತೆ ಮಾಡುತ್ತಿದೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಸಿಕ್ಕಾಪಟ್ಟೆ ಬದಲಾಗುತ್ತಾ ಸಾಗುತ್ತಿದೆ, ಇದನ್ನು ನೋಡಿದ ನೆಟ್ಟಿಗರು ವೈವಿಧ್ಯಮಯ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ ಮತ್ತು ವ್ಯಂಗ್ಯ ಮಾಡುತ್ತಿದ್ದಾರೆ. ಫೋಟೋಗಳು ಭರ್ಜರಿಯಾಗಿ ಟ್ರೋಲ್ ಸಹಾ ಆಗುತ್ತಿದೆ.

ವೈರಲ್ ಆಗುತ್ತಿರುವ ಫೋಟೋದಲ್ಲಿ ಗಮನಿಸಿದಾಗ ಆಫೀಸ್ ಒಂದರ ಬಾತ್ ರೂಂ ನಲ್ಲಿ ವೆಸ್ಟರ್ನ್ ಶೈಲಿಯಲ್ಲಿ ಟಾಯ್ಲೆಟ್ ನಿರ್ಮಾಣ ಮಾಡಲಾಗಿದೆ. ಆದರೆ ವಿಚಿತ್ರ ಏನೆಂದರೆ ಒಂದೇ ಶೌಚಾಲಯದಲ್ಲಿ ಎರಡು ಕಮೋಡ್ ಗಳನ್ನು ಅಳವಡಿಸಲಾಗಿದೆ. ಎರಡು ಕಮೋಡ್ ಗಳ ನಡುವೆ ಅಡ್ಡವಾಗಿ ಗೋಡೆಯಾಗಲಿ ಇಲ್ಲ ಅಥವಾ ಯಾವುದೇ ಪರದೆ ಯಾಗಲೀ ಅಳವಡಿಸಲಾಗಿಲ್ಲ. ಬಾತ್ ರೂಮಿನೊಳಕ್ಕೆ ಪ್ರವೇಶ ಮಾಡುವ ಎಂಟ್ರಿ ಪಾಯಿಂಟ್ ಕೂಡಾ ಒಂದೇ ಇರುವುದು ಇನ್ನಷ್ಟು ಗಮನಸೆಳೆದಿದೆ. ಇದು ಶ್ರೀಪೆರಂಬದೂರಿನಲ್ಲಿ ಸಿಪ್ಕಟ್ ಇಂಡಸ್ಟ್ರೀಸ್‌ ಪ್ರಾಜೆಕ್ಟ್ ಆಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಎರಡು ದಿನಗಳ ಹಿಂದೆಯಷ್ಟೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಕಟ್ಟಡದ ಉದ್ಘಾಟನೆಯನ್ನು ನಡೆಸಿದ್ದರು. ಸ್ಥಳೀಯ ಎಂಎಲ್ಎ ಅವರು ಸ್ಥಳದಲ್ಲಿ ಹಾಜರಿದ್ದು ಕಾರ್ಯಕ್ರಮದ ಪರಿವೀಕ್ಷಣೆ ಯನ್ನು ನಡೆಸಿದ್ದರು. ಒಂದು ಕೋಟಿ 88 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಕಟ್ಟಡದಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದೆ. ಕಳಪೆ ಕಾಮಗಾರಿಯ ಕಾರಣದಿಂದ ಹೊಸ ಕಟ್ಟಡದ ಗೋಡೆಗಳಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡಿದೆ. ಕಟ್ಟಡದ ಸಾವಿರ ಶೌಚಾಲಯಗಳ ನಿರ್ಮಾಣ ಸಹಾ ಕಳಪೆ ಮಟ್ಟದ್ದಾಗಿದೆ. ಇದನ್ನೆಲ್ಲಾ ಗಮನಿಸಿದ ಜನರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಅಧಿಕಾರಿಗಳು ತಮಗೆ ನೀಡಿರುವ ಗಡುವಿನೊಳಗೆ ನಿರ್ಮಾಣ ಕಾರ್ಯವನ್ನು ಪೂರ್ತಿ ಮಾಡಿದ್ದೇವೆ ಎಂದು ತೋರಿಸಿಕೊಳ್ಳಲು ಇಂತಹದೊಂದು ಕಟ್ಟಡ ನಿರ್ಮಾಣ ಮಾಡಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಇಂತಹುದೇ ಒಂದು ಘಟನೆ ತಮಿಳುನಾಡಿನ ಸರ್ಕಾರಿ ಶಾಲೆಯೊಂದರಲ್ಲಿಯೂ ನಡೆದಿತ್ತು. ಫೋಟೋ ವೈರಲ್ ಆದ ಕೂಡಲೇ ನೆಟ್ಟಿಗರು ಭರ್ಜರಿ ಟ್ರೋಲ್ ಮಾಡುತ್ತಿದ್ದಾರೆ. ತಮಿಳುನಾಡಿನ ಬಹಳಷ್ಟು ಮೀಮ್ ಪೇಜ್ ಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದೆ. ನೆಟ್ಟಿಗರು ಇದೊಂದು ಹೊಸ ಕ್ರಿಯೇಟಿವಿಟಿ ಎಂದು ವ್ಯಂಗ್ಯ ಮಾಡಿದ್ದು, ಆ ಕಮೋಡ್ ನಿರ್ಮಾಣ ಮಾಡಿದವರಿಗೆ ಅದನ್ನು ಉಡುಗೊರೆ ನೀಡಬೇಕು ಎಂದು ವ್ಯಂಗ್ಯ ಮಾಡಿದ್ದಾರೆ.

Leave a Comment