ಎಲೆನ್ ಮಸ್ಕ್ ಪಾಲಾದ ಟ್ವಿಟರ್: ಬಹುಕೋಟಿ ಮೌಲ್ಯ ನೀಡಿ, ಟ್ವಿಟರ್ ಒಡೆಯನಾದ ವಿಶ್ವದ ಶ್ರೀಮಂತ ವ್ಯಕ್ತಿ??

Written by Soma Shekar

Published on:

---Join Our Channel---

ಕಳೆದ ಕೆಲವು ವಾರಗಳಿಂದಲೂ ಹರಿದಾಡುತ್ತಿದ್ದ ಊಹಾಪೋಹಗಳಿಗೆ ಒಂದು ಕೊನೆಯನ್ನು ಹಾಡಲು ಸಾಮಾಜಿಕ ಜಾಲತಾಣಗಳ ದಿಗ್ಗಜರಲ್ಲಿ ಒಂದಾಗಿರುವ ಟ್ಚಿಟರ್ ಮುಂದಾಗಿದೆ. ಹೌದು, ಟ್ವಿಟರ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೆನ್ ಮಸ್ಕ್ ಟ್ವಿಟರನ್ನು ಖರೀದಿ ಮಾಡಲು ನೀಡಿರುವ ಪ್ರಸ್ತಾಪವನ್ನು ಸ್ವೀಕರಿಸಿದೆ. ಎಲೆನ್ ಮಸ್ಕ್ ಸಾಮಾಜಿಕ ಜಾಲತಾಣಗಳ ಈ ದಿಗ್ಗಜ ವೇದಿಕೆಯನ್ನು ತನ್ನ ಸ್ವಂತ ಮಾಡಿಕೊಳ್ಳಲು ಅಂದರೆ ಇದನ್ನು ಖರೀದಿ ಮಾಡಲು 44 ಶತಕೋಟಿ ಡಾಲರ್ ಗಳ ಮೌಲ್ಯವನ್ನು ನೀಡುವ ಪ್ರಸ್ತಾಪವನ್ನು ಇಟ್ಟಿದ್ದು, ಟ್ವಿಟರ್ ಇದನ್ನು ಸ್ವೀಕರಿಸಿದೆ ಎನ್ನಲಾಗಿದೆ.

ಖರೀದಿಯ ವಹಿವಾಟಿನ ಎಲ್ಲಾ ಒಪ್ಪಂದವು ಸಂಪೂರ್ಣವಾದ ನಂತರ ಹದಿನಾರು ವರ್ಷಗಳ ನಂತರ ಟ್ವಿಟರ್ ಸಾಮಾಜಿಕ ಜಾಲತಾಣವು ಒಂದು ಖಾಸಗಿ ಘಟಕ ವಾಗುತ್ತದೆ. ಮಾತನಾಡುವ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿಯಾಗಿದ್ದು, ಮತ್ತು ಟ್ವಿಟರ್ ಡಿಜಿಟಲ್ ಟೌನ್ ಸ್ಕ್ವೇರ್ ಆಗಿದ್ದು, ಅಲ್ಲಿ ಮಾನವೀಯತೆಯ ಕುರಿತಾಗಿ, ಭವಿಷ್ಯದ ಹಲವು ಪ್ರಮುಖ ಪ್ರಮುಖ ವಿಚಾರಗಳು ಚರ್ಚೆ ಆಗಲಿದೆ ಎನ್ನುವ ಮಾತನ್ನು ಎಲೆನ್ ಮಸ್ಕ್ ಹೇಳಿದ್ದಾರೆ.

ಸರಿಸುಮಾರು 44 ಶತಕೋಟಿ ಡಾಲರ್ ಗಳ ಮೌಲ್ಯದ ವಹಿವಾಟಿನಲ್ಲಿ, ಪ್ರತಿ ಷೇರಿಗೆ 54.20 ಡಾಲರ್ ಗಳ ಮೌಲ್ಯವನ್ನು ನಗದು ರೂಪದಲ್ಲಿ ನೀಡುವ ಮೂಲಕ ಎಲೆನ್ ಮಸ್ಕ್ ಟ್ವಿಟರ್ ಮೇಲೆ ತಮ್ಮ ಅಧಿಕಾರವನ್ನು ಸ್ಥಾಪಿಸಲಿದ್ದಾರೆ. ಈ ವಹಿವಾಟನ್ನು ಟ್ವಿಟರ್ ನ ನಿರ್ದೇಶಕ ಮಂಡಳಿಯ ಸರ್ವಾನುಮತದಿಂದ ಅನುಮೋದಿಸಿದೆ. ಇನ್ನುಳಿದಂತೆ Twitter ಸ್ಟಾಕ್‌ಹೋಲ್ಡರ್‌ಗಳ ಅನುಮೋದನೆ, ಅನ್ವಯವಾಗುವ ನಿಯಂತ್ರಕ ಅನುಮೋದನೆಗಳ ಸ್ವೀಕೃತಿ ಮತ್ತು ಇತರ ಸಾಂಪ್ರದಾಯಿಕ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟು 2022 ರಲ್ಲಿ ಒಪ್ಪಂದವು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಟ್ವಿಟರ್ ನಲ್ಲಿ ಎಲೆನ್ ಮಸ್ಕ್ ಈ ಮೊದಲೇ 9.2% ಪಾಲುದಾರಿಕೆಯನ್ನು ಹೊಂದಿದ್ದರು. ಅಲ್ಲದೇ ಅವರು ಕಂಪನಿಯ ದೊಡ್ಡ ಶೇರ್ ಹೋಲ್ಡರ್ ಸಹಾ ಆಗಿದ್ದರು. ಎಲೆನ್ ಮಸ್ಕ್ ಟ್ವಿಟರ್ ಖರೀದಿ ಮಾಡಲು ಪ್ರಸ್ತಾವನೆಯನ್ನು ಇಟ್ಟಿದ್ದಾರೆ ಎಂದಾಗ ಅವರ ಬಳಿ ಅದನ್ನು ಖರೀದಿ ಮಾಡಲು ಫಂಡ್ ಇದೆಯೇ ಎನ್ನುವ ಪ್ರಶ್ನೆಯೊಂದು ಸಹಾ ಅನೇಕರಲ್ಲಿ ಮೂಡಿತ್ತು ಎನ್ನಲಾಗಿದೆ‌. ಇನ್ನು ಎಲೆನ್ ಮಸ್ಕ್ ಟ್ವಿಟರ್ ನಲ್ಲಿ ಕೆಲವು ಪರಿವರ್ತನೆಗಳು ಆಗಬೇಕಿದ್ದು, ಅದು ಖಾಸಗಿ ವ್ಯಕ್ತಿಯ ಕೈ ಸೇರಬೇಕು ಎಂದು ಸಹಾ ಹೇಳಿದ್ದರು.

Leave a Comment