ಪೂರ್ತಿ ಬಟ್ಟೆ ಧರಿಸಿದ್ದಕ್ಕೆ ಆದ ಸಮಸ್ಯೆ, ಮೈ ಎಲ್ಲಾ ಅಲರ್ಜಿ ಆಗಿದೆ: ತನ್ನ ಸಮಸ್ಯೆ ತಿಳಿಸಿದ ಉರ್ಫಿ, ಶಾಕ್ ಆದ ನೆಟ್ಟಿಗರು

Written by Soma Shekar

Published on:

---Join Our Channel---

ನಟಿ ಉರ್ಫಿ ಜಾವೇದ್(Urfi Javed) ಮೈ ತುಂಬಾ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದೇ ಅಪರೂಪ. ನಟಿಯು ಸದಾ ಸಾರ್ವಜನಿಕವಾಗಿ ಕಂಡಾಗಲೆಲ್ಲಾ ತುಂಡು ಉಡುಗೆ ತೊಟ್ಟು ಮಾದ್ಯಮಗಳ ಕ್ಯಾಮರಾ ಗಳಿಗೆ ಪೋಸ್ ನೀಡುತ್ತಾರೆ. ಉರ್ಫಿ ಧರಿಸುವ ಡ್ರೆಸ್ ಗಳನ್ನು ನೋಡಿ ಜನ ಗಾಬರಿಯಾಗಿದ್ದು ಉಂಟು. ನಟಿಯ ಇಂತಹ ವಿಚಿತ್ರವಾದ ವಸ್ತ್ರಗಳನ್ನು ನೋಡಿ ಅನೇಕರು ಟೀಕೆಗಳನ್ನು ಮಾಡಿದ್ದಾರೆ. ಸಾಕಷ್ಟು ಬಾರಿ ನಟಿಯನ್ನು ಟ್ರೋಲ್ ಮಾಡಲಾಗಿದೆ. ಆದರೆ ಉರ್ಫಿ (Urfi) ಮಾತ್ರ ಇದ್ಯಾವುದರ ಬಗ್ಗೆಯೂ ಸಹಾ ತಲೆ ಕೆಡಿಸಿಕೊಂಡಿಲ್ಲ. ಹೊಸ ಹೊಸ ವಿನ್ಯಾಸದ ಡ್ರೆಸ್ ಗಳನ್ನು ಧರಿಸಿ ಮತ್ತೆ ಮತ್ತೆ ಉರ್ಫಿ ಸುದ್ದಿಯಾಗುತ್ತಲೇ ಇರುತ್ತಾರೆ.

ಆದರೆ ಈಗ ಉರ್ಫಿ ಜಾವೇದ್ ಹೇಳಿಕೊಂಡಿರುವ ಹೊಸ ವಿಷಯವನ್ನು ಕೇಳಿ ನೆಟ್ಟಿಗರು ಮತ್ತೊಮ್ಮೆ ಅಚ್ಚರಿ ಪಟ್ಟಿದ್ದಾರೆ. ಕಿರುತೆರೆಯಿಂದ ಜನಪ್ರಿಯತೆ ಪಡೆದ ಉರ್ಫಿ ಜಾವೇದ್(Urfi Javed) ಹಿಂದಿಯ ಬಿಗ್ ಬಾಸ್ ಓಟಿಟಿ ಮೊದಲ ಸೀಸನ್ ಗೆ ಎಂಟ್ರಿ ನೀಡಿ ಅಲ್ಲಿ ಚಿಕ್ಕ ಚಿಕ್ಕ ಡ್ರೆಸ್ ಗಳನ್ನು ಧರಿಸಿ ಸಂಚಲನ ಸೃಷ್ಟಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಉರ್ಫಿ(Urfi Dress) ಅದನ್ನೇ ಮುಂದುವರೆಸುವ ಮೂಲಕ ಸದಾ ಮಾದ್ಯಮಗಳ ಗಮನವನ್ನು ಸೆಳೆಯುತ್ತಾ, ಸಿಕ್ಕಾಪಟ್ಟೆ ಪ್ರಚಾರವನ್ನು ಪಡೆಯುತ್ತಿದ್ದಾರೆ, ಕೆಲವರ ಕೆಂಗಣ್ಣಿಗೆ ಸಹಾ ಗುರಿಯಾಗಿದ್ದಾರೆ.

ಉರ್ಫಿ(Urfi New Video) ಹೊಸ ವೀಡಿಯೋವೊಂದರಲ್ಲಿ ತಾನು ಪೂರ್ತಿ ಬಟ್ಟೆಯನ್ನು ಧರಿಸಿದ್ದರಿಂದ ಅಲರ್ಜಿ ಆಗಿದೆ ಎನ್ನುವುದನ್ನು ತೋರಿಸಿದ್ದಾರೆ. ಉರ್ಫಿಯ ಕಾಲುಗಳ ಮೇಲೆ ಕೈ ಮೇಲೆ ಗುಳ್ಳೆಗಳು ಎದ್ದಿದ್ದು, ಮುಖ ಊದಿದ್ದು, ಅದರಲ್ಲೇ ಮಾತಾಡುತ್ತಾ ನಟಿಯು, ನೋಡಿ ನಾನು ಉಲ್ಲನ್ ಬಟ್ಟೆಯನ್ನು ತೊಟ್ಟ ನಂತರ ಆದ ಅಲರ್ಜಿ ಇದು. ನಾನು ಏಕೆ ಪೂರ್ತಿ ಬಟ್ಟೆ ಹಾಕುವುದಿಲ್ಲ ಎನ್ನುವುದಕ್ಕೆ ನಿಮಗೆ ಉತ್ತರ ಸಿಕ್ಕಿದೆ ಎಂದು ಕೊಳ್ಳುತ್ತೇನೆ. ನನಗೆ ಈ ಸಮಸ್ಯೆ ಇರುವುದರಿಂದ ನಾನು ಪೂರ್ತಿ ಬಟ್ಟೆ ಹಾಕಿದರೆ ನನ್ನ ದೇಹ ರಿಯಾಕ್ಟ್ ಮಾಡುತ್ತದೆ.

ವೀಡಿಯೋ ಲಿಂಕ್: https://www.instagram.com/reel/CnHAgjchKwZ/?igshid=YmMyMTA2M2Y=

ನಾನೇಕೆ ಪೂರ್ತಿ ಬಟ್ಟೆ ಹಾಕುವುದಿಲ್ಲ ಎನ್ನುವುದಕ್ಕೆ ನಿಮಗೆ ಸಾಕ್ಷಿ ಕೊಟ್ಟಿದ್ದೇನೆ. ಆದ ಕಾರಣ ನಾನು ಅರೆ ಬೆತ್ತಲಾಗಿ ಓಡಾಡುತ್ತೇನೆ ಎಂದು ಉರ್ಫಿ ವಿವರಣೆ ನೀಡಿದ್ದಾರೆ. ಉರ್ಫಿಯ(Urfi Video) ಹೊಸ ವೀಡಿಯೋ ವೈರಲ್ ಅಗಿದೆ. ಉರ್ಫಿಯ ಮಾತುಗಳನ್ನು ಕೇಳಿದ ಮೇಲೆ ಕೆಲವರು ಇದು ನಿಜವೋ ಅಥವಾ ಉರ್ಫಿ ಪ್ರಚಾರಕ್ಕಾಗಿ ಮಾಡಿರುವಂತಹ ಹೊಸ ಗಿಮಿಕ್ಕೋ ಎಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Leave a Comment