ಈ ಹುಡುಗ ಕೈಯಲ್ಲಿ ಮೊಬೈಲ್ ಹಿಡಿದ್ರೆ ಕ್ಷಣ ಮಾತ್ರದಲ್ಲೇ ಡೇಟಾ ಖಾಲಿ ಆಗುತ್ತೆ: ವಿಚಿತ್ರ ಆದ್ರೂ ವಾಸ್ತವ

Written by Soma Shekar

Published on:

---Join Our Channel---

ಸ್ಮಾರ್ಟ್ ಫೋನ್ ಇದ್ದು, ಅದರಲ್ಲಿ ಡೇಟಾ ಇದ್ದು ಮಕ್ಕಳ ಕೈಗೆ ಕೊಟ್ಟರೆ ಅವರು ಅದರಲ್ಲಿ ಗೇಮ್ ಗಳನ್ನು ಆಡುವ ಮೂಲಕವೋ ಅಥವಾ ಮನರಂಜನೆಯನ್ನು ನೀಡುವ ವಿಡಿಯೋಗಳನ್ನು ನೋಡುವ ಮೂಲಕವೋ ಎಲ್ಲಾ ಡೇಟಾ ಖಾಲಿ ಮಾಡಿ ಬಿಡುತ್ತಾರೆ. ಹಿರಿಯರ ಕೈಯಲ್ಲಿ ಆಮೇಲೆ ಬೈಗುಳ ಕೇಳುತ್ತಾರೆ. ಆದರೆ ಇದೆಲ್ಲಕ್ಕಿಂತ ಭಿನ್ನವಾಗಿ, ಒಂದರ್ಥದಲ್ಲಿ ವಿಚಿತ್ರವಾಗಿ ಇಲ್ಲೊಬ್ಬ ಬಾಲಕನ ಕೈಗೆ ಡೇಟಾ ಇರುವ ಮೊಬೈಲ್ ಫೋನ್ ಕೊಟ್ಟರೆ ಸಾಕು, ಕ್ಷಣಾರ್ಧದಲ್ಲಿ ಡೇಟಾ ಖಾಲಿಯಾಗುತ್ತದೆ. ಈ ವಿಷಯ ನಿಮಗೆ ವಿಚಿತ್ರವೆನಿಸಿದರೂ ಕೂಡಾ ಇದು ವಾಸ್ತವವಾಗಿದೆ.

14 ವರ್ಷ ವಯಸ್ಸಿನ ಅಸ್ತಿತ್ವ ಅಗರ್ವಾಲ್ ಎನ್ನುವ ಬಾಲಕನ ಕೈಗೆ ಮೊಬೈಲ್ ಫೋನ್ ನೀಡಿದರೆ ಕೆಲವೇ ಕ್ಷಣಗಳಲ್ಲಿ ಅದರಲ್ಲಿರುವ ಸಂಪೂರ್ಣ ಡೇಟಾ ಖಾಲಿಯಾಗುತ್ತದೆ. ಮೇ 2ರಿಂದ ಈ ಘಟನೆ ನಡೆಯುತ್ತಿದ್ದು ಆರಂಭದಲ್ಲಿ ಮನೆಯವರಿಗೆ ವಿಷಯ ತಿಳಿದಿರಲಿಲ್ಲ. ಆದರೆ ಮನೆಯಲ್ಲಿ ಎಲ್ಲರ ಮೊಬೈಲ್ ಗಳ ಡೇಟಾ ಇದ್ದಕ್ಕಿದ್ದಂತೆ ಖಾಲಿ ಆಗುವುದನ್ನು ನೋಡಿ ತಮ್ಮ ಫೋನುಗಳನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಅವರು ಮೊಬೈಲ್ ಸೇವಾ ಕೇಂದ್ರಕ್ಕೆ ತೆರಳಿದ್ದಾರೆ.

ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ ಸರಿಯಾಗಿಯೇ ಇದೆ ಎಂದು ತಿಳಿದ ಮೇಲೆ ಮನೆಗೆ ವಾಪಸಾಗಿದ್ದಾರೆ. ಆದರೆ ಮನೆಗೆ ಬಂದ ಮೇಲೆ ಸಮಸ್ಯೆ ಮತ್ತೆ ಪ್ರಾರಂಭವಾಗಿದೆ. ಹಳೆಯ ಫೋನ್ ಬದಲಾಗಿ ಹೊಸ ಫೋನನ್ನು ಖರೀದಿ ಮಾಡಿದರೂ ಅವರ ಸಮಸ್ಯೆಗೆ ಪರಿಹಾರ ಮಾತ್ರ ಸಿಗಲೇ ಇಲ್ಲ. ಅನಂತರ ಒಂದು ದಿನ ಮೊಬೈಲ್ ಗಳು ತಮ್ಮ ಮಗನ ಕೈಗೆ ಸೇರಿದರೆ ಡೇಟಾ ಖಾಲಿ ಆಗುತ್ತಿದೆ ಎನ್ನುವ ವಿಚಾರವನ್ನು ಪೋಷಕರು ತಿಳಿದುಕೊಂಡಿದ್ದಾರೆ.

ಅಸ್ತಿತ್ವ್ ನ ತಂದೆ ಗೌರವ್ ಅವರು, ಆಗಸ್ಟ್ ತಿಂಗಳಲ್ಲಿ ರಕ್ಷಾ ಬಂಧನದ ಸಲುವಾಗಿ ತಮ್ಮ ಪತ್ನಿ ಮಗನ ಜೊತೆಗೆ ಅವರು ತಾಯಿಯ ಮನೆಗೆ ಹೋಗಿದ್ದರು. ಆಗ ಅಲ್ಲೂ ಅದೇ ರೀತಿಯ ಸಮಸ್ಯೆ ಕಂಡು ಬಂದಿತ್ತು. ಆಗಲೇ ಮನೆಯವರಿಗೆ ಅಸ್ತಿತ್ವ‌ನ ಕೈಗೆ ಫೋನ್ ಕೊಟ್ಟರೆ ಮೊಬೈಲ್ ಡೇಟಾ ಖಾಲಿ ಆಗುತ್ತಿದೆ ಎನ್ನುವ ವಿಚಾರ ತಿಳಿದು ಬಂತು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಅಸ್ತಿತ್ವ ನಲ್ಲಿ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಬದಲಾವಣೆ ಆಗಿಲ್ಲ. ಆದರೂ ತಂದೆ-ತಾಯಿ ಹಲವು ವೈದ್ಯರನ್ನು ಸಂಪರ್ಕಿಸಿ ವಿಚಾರವನ್ನು ತಿಳಿಸಿದ್ದಾರೆ. ವಿವಿಧ ವೈದ್ಯಕೀಯ ಪರೀಕ್ಷೆಗಳ ನಂತರವೂ ಬಾಲಕನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಜೆ ಪಿ ಆಸ್ಪತ್ರೆಯ ಹಿರಿಯ ನರ ವಿಜ್ಞಾನಿ ಡಾಕ್ಟರ್ ಸಂದೀಪ್ ಅವರು ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಾ.ಸಂದೀಪ್ ಅವರು ಮಾತನಾಡುತ್ತಾ, ಬಾಲಕನಲ್ಲಿ. ಕಂಡುಬಂದಂತಹ ಈ ವಿಚಿತ್ರ ಗುಣವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಆತನನ್ನು ಎಲ್ಲಾ ರೀತಿಯಲ್ಲಿ ಪರೀಕ್ಷಿಸಲಾಗಿದೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತೇವೆ. ಆದರೆ ಈ ವಿಷಯ ಮಾತ್ರ ಸದ್ಯ ಒಗಟಾಗಿ ಉಳಿದಿದೆ ಎಂದು ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.

ಮಕ್ಕಳ ವೈದ್ಯೆ ವಿಭವ ವರ್ಷಿಣಿ ಅವರು ನಾನಿದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿರಾಕರಿಸುತ್ತೇನೆ ಎಂದಿದ್ದಾರೆ. ಆದರೆ ಒಂದು ಶೇಕಡಾ ಸಾಧ್ಯತೆ ಇರಬಹುದಷ್ಟೇ ಎಂದಿರುವ ಅವರು ಕೆಲವೊಮ್ಮೆ ದೇಹದ ಕಾಂತೀಯ ಶಕ್ತಿಯಿಂದಾಗಿ ಇದು ಸಂಭವಿಸಬಹುದು ಎನ್ನುತ್ತಾರೆ. ವಿಕಿರಣದ ಮೂಲಕ ಸಾಫ್ಟ್‌ವೇರ್ ದೋಷಗಳ ಅಪರೂಪದ ಪ್ರಕರಣವೂ ಇದಾಗಿರಬಹುದು ಎನ್ನುವುದು ಅವರ ವಿಚಾರವಾಗಿದೆ.

ಈ ಕುರಿತು ವೈಜ್ಞಾನಿಕತೆ ಇನ್ನೂ ಯಾವುದೇ ಗಮನಾರ್ಹ ಕೆಲಸವನ್ನು ಮಾಡಿಲ್ಲ. ವೈಜ್ಞಾನಿಕ ತನಿಖೆಯ ನಂತರವೇ ಇದರ ಬಗ್ಗೆ ಏನನ್ನಾದರೂ ಹೇಳಬಹುದು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮಾತ್ರ ಅಗತ್ಯವಾಗಿದೆ ಎಂದಿದ್ದು ಕೆಲವೊಮ್ಮೆ ಜನರು ಬೇಗ ಫೇಮಸ್ ಆಗುವ ಹುಚ್ಚಿನಿಂದ ಸಹಾ ಇಂತಹ ಕೆಲಸಗಳನ್ನು ಮಾಡುವುದರಿಂದ ಮೊದಲು ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದಾರೆ.

Leave a Comment