ಈ ವಸ್ತುಗಳ ಗುಪ್ತ ದಾನ ಮಾಡಿದರೆ, ನಿಮ್ಮ ಅದೃಷ್ಟ ಖಚಿತವಾಗಿ ಜಾಗೃತಗೊಳ್ಳುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ

Written by Soma Shekar

Published on:

---Join Our Channel---

ಶಾಸ್ತ್ರಗಳ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನವನ್ನು ಮಾಡಬೇಕು, ಏಕೆಂದರೆ ಅದು ಜೀವನದಲ್ಲಿ ಉತ್ತಮವಾದ ಸುಧಾರಣೆಯನ್ನು ತರುತ್ತದೆ ಅಲ್ಲದೇ ಶುಭ ಫಲಗಳನ್ನು ನೀಡುತ್ತದೆ. ಜ್ಯೋತಿಷ್ ಶಾಸ್ತ್ರ ದಲ್ಲಿ ಇಂತಹ ದಾನಗಳ ಬಗ್ಗೆ ಅನೇಕ ಪರಿಹಾರ ಮಾರ್ಗಗಳನ್ನು ನೀಡಲಾಗಿದೆ. ಇದು ಜೀವನದಲ್ಲಿನ ದುಃಖಗಳನ್ನು ನಿವಾರಿಸುವ ಜೊತೆಗೆ ನಮ್ಮ ಆಸೆಗಳನ್ನು ಪೂರೈಸುವಲ್ಲಿಯೂ ನೆರವನ್ನು ನೀಡುತ್ತದೆ. ಇಂತಹ ದಾನಗಳಿಂದ ಗ್ರಹಗಳಿಗೆ ಸಂಬಂಧಿಸಿದ ದೋಷಗಳೂ ದೂರವಾಗುತ್ತವೆ ಎಂದು ಹೇಳಲಾಗಿದೆ.‌ ಇನ್ನು ದಾನಗಳ ವಿಚಾರಕ್ಕೆ ಬಂದರೆ ದಾನಗಳಲ್ಲಿ ಹಲವು ವಿಧಗಳಿವೆ.

ದಾನಗಳಲ್ಲಿ ಮೂರು ವಿಧದ ದಾನದ ಮಹತ್ವವನ್ನು ಹೇಳಲಾಗಿದ್ದು ಅವುಗಳಲ್ಲಿ ದೈನಂದಿನ ದಾನ, ನಿಯಮಿತ ದಾನ ಮತ್ತು ಕಾಮ್ಯ ದಾನದ ಹೆಸರುಗಳು ಸೇರಿವೆ. ಇವು ಮಾತ್ರವೇ ಅಲ್ಲದೇ ರಹಸ್ಯ ದಾನದ ಮೂಲಕವೂ ಪುಣ್ಯವನ್ನು ಗಳಿಸಬಹುದು ಎಂದು ಶಾಸ್ತ್ರಗಳು ಹೇಳುತ್ತವೆ. ಅಂತಹ ದಾನಗಳಲ್ಲಿ ಪರಿಚಯವನ್ನು ಬಹಿರಂಗಪಡಿಸದೆ ಗುಪ್ತವಾಗಿ ದಾನ ಕಾರ್ಯವನ್ನು ಮಾಡಲಾಗುತ್ತದೆ. ಕೆಲವೊಂದು ವಸ್ತುಗಳನ್ನು ಹೀಗೆ ಗುಪ್ತ ದಾನ ಮಾಡುವ ಮೂಲಕ ನಿಮ್ಮ ಅದೃಷ್ಟವನ್ನು ನೀವು ಜಾಗೃತಗೊಳಿಸಬಹುದು. ಅಂತಹ ದಾನದ ಬಗ್ಗೆ ಇಂದು ನಾವು ತಿಳಿಯೋಣ.

ಜಲದಾನ : ಕೆಲವರು ತಮ್ಮ ಪರಿಚಯವನ್ನು ಬಹಿರಂಗಪಡಿಸದೆ ದಾನ ನೀಡಲು ಬಯಸುತ್ತಾರೆ. ನೀವೂ ಕೂಡಾ ಇಂತಹುದೇ ಒಂದು ಗುಪ್ತ ದಾನ ಮಾಡುವ ಮೂಲಕ ಶುಭ ಫಲವನ್ನು ಪಡೆಯಬಹುದು. ಸುಡುಬಿಸಿಲಿನಲ್ಲಿ ದಾರಿಹೋಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ. ಇದಕ್ಕಾಗಿ, ನೀವು ಎಲ್ಲಿ ಬೇಕಾದರೂ ನೀರಿನ ಮಡಕೆಗಳನ್ನು ಇರಿಸಬಹುದು. ಹೀಗೆ ಜನರ ದಾಹವನ್ನು ನೀಗಿಸುವುದರ ಜೊತೆಗೆ ಜಲದಾನವನ್ನು ಸಹಾ ಮಾಡಿದಂತಾಗುತ್ತದೆ.

ಅನ್ನದಾನ: ಹಸಿದ ಅಥವಾ ನಿರ್ಗತಿಕನ ಹೊಟ್ಟೆ ತುಂಬಿಸುವುದು ಒಂದು ಶ್ರೇಷ್ಠ ದಾನವಾಗಿದೆ. ಜನರು ದೇವಸ್ಥಾನ ಮತ್ತು ಇತರ ಸ್ಥಳಗಳಲ್ಲಿ ಇರುವ ಬಡ ಮತ್ತು ಹಸಿದ ಜನರಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹಾರವನ್ನು ನೀಡುತ್ತಾರೆ. ನೀವು ರಹಸ್ಯವಾಗಿ ದಾನ ಮಾಡಲು ಬಯಸಿದರೆ ಇಂತಹ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಹಸಿದವರ ಹೊಟ್ಟೆ ತುಂಬಿಸಲು ಅನ್ನದಾನ ಮಾಡಿಸಿ,‌ಇದರಿಂದ ದೇವಾನುದೇವತೆಗಳು ಪ್ರಸನ್ನರಾಗುತ್ತಾರೆ. ಇದರಿಂದ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದವು ದೊರೆಯುತ್ತದೆ ಎನ್ನಲಾಗಿದೆ.

ಬೆಲ್ಲ ದಾನ : ಬೆಲ್ಲದ ವಿಶೇಷ ಮಹತ್ವವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದ್ದು, ಬೆಲ್ಲವನ್ನು ದಾನವಾಗಿ ನೀಡುವುದರಿಂದ‌ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕಾಣಬಹುದು. ನೀವು ಇಚ್ಛಿಸಿದರೆ ಬೆಲ್ಲವನ್ನು ರಹಸ್ಯವಾಗಿ ದಾನ ಮಾಡಬಹುದು. ಆದರೆ ದಾನ ನೀಡಲು ಸದಾ ಪರಿಚಯವನ್ನು ಮರೆ ಮಾಚಲೇಬೇಕೆಂಬ ನಿಯಮ ಖಂಡಿತ ಇಲ್ಲ. ಒಳ್ಳೆಯ ಮನಸ್ಸಿನಿಂದ ಮಾಡಿದ ಯಾವುದೇ ರೀತಿಯ ದಾನವೇ ಆದರೆ ಅದು ಶುಭ ಫಲವನ್ನು ನೀಡುತ್ತದೆ. ದಾನ ಮಾಡುವುದರಿಂದ ದೇವತೆಗಳಷ್ಟೇ ಅಲ್ಲ, ಪೂರ್ವಜರೂ ಸಹಾ ಪ್ರಸನ್ನರಾಗುತ್ತಾರೆ ಎನ್ನಲಾಗಿದೆ.

Leave a Comment