ಈ ವಸ್ತುಗಳು ಮನೆಯಲ್ಲಿ ಇದ್ದರೆ ದುರಾದೃಷ್ಟ ಬೆನ್ನೇರುವುದು ಎನ್ನುತ್ತದೆ ವಾಸ್ತು ಎಚ್ಚರವಿರಲಿ

Written by Soma Shekar

Published on:

---Join Our Channel---

ಜನರು ಕೆಲವೊಂದು ವಸ್ತುಗಳನ್ನು ಖರೀದಿ ಮಾಡಿ ತಮ್ಮ ಮನೆಗೆ ತರುತ್ತಾರೆ. ಆದರೆ ಅವುಗಳನ್ನು ಮನೆಗಳಲ್ಲಿ ದೀರ್ಘಕಾಲ ಇಟ್ಟು ಮರೆತು ಬಿಡುತ್ತಾರೆ ಅವರು ಅದನ್ನು ಬಳಸುವುದಿಲ್ಲ. ವಾಸ್ತು ಪ್ರಕಾರ, ಇಂತಹ ತಪ್ಪುಗಳು ದೋಷಗಳಿಗೆ ಕಾರಣವಾಗುತ್ತವೆ. ಅಡಿಗೆ ಮತ್ತು ಸ್ಟೋರ್ ರೂಂ ನಲ್ಲಿ ಜನರು ಇಂತಹ ತಪ್ಪುಗಳನ್ನು ಆಗಾಗ್ಗೆ ಮಾಡುತ್ತಲೇ ಇರುತ್ತಾರೆ. ಆದ್ದರಿಂದಲೇ ನೀವು ನಿಮ್ಮ ಮನೆಯಿಂದ ಇಂತಹ ವಸ್ತುಗಳನ್ನು ಸೂಕ್ತ ಸಮಯದಲ್ಲಿ ಮನೆಯಿಂದ ತೆಗೆದು ಹೊರಗೆ ಹಾಕಬೇಕು ಎನ್ನುವುದು ನಿಮಗೆ ತಿಳಿದಿರಲಿ.

ಹಿತ್ತಾಳೆಯ ಪಾತ್ರೆಗಳು: ಜನರು ಈ ಪಾತ್ರೆಗಳನ್ನು ತರುವಾಗ ಬಹಳ ಉತ್ಸಾಹದಿಂದ ಮನೆಗೆ ತರುತ್ತಾರೆ. ಆದರೆ ಅನಂತರ ಅವರು ಅವುಗಳನ್ನು ಅಪರೂಪಕ್ಕೊಮ್ಮೆ ಎನ್ನುವ ಹಾಗೆ ಬಳಸುತ್ತಾರೆ. ಇಲ್ಲವೇ ಅಲಂಕಾರಕ್ಕೆ ಎನ್ನುವಂತೆ ಇಟ್ಟು ಬಳಕೆ ಮಾಡುವುದೇ ಇಲ್ಲ. ಅಡುಗೆ ಮನೆಯಲ್ಲಿ ಅಥವಾ ಸ್ಟೋರ್ ರೂಂ ನಲ್ಲಿ ಸ್ಥಳಾವಕಾಶ ಇರುವಾಗ ಅವುಗಳನ್ನು ಇಟ್ಟುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲವಾದರೂ ಹೀಗೆ ಮಾಡುವುದರಿಂದ ಶನಿಯು ಅಲ್ಲಿ ವಾಸಯೋಗ್ಯನಾಗುತ್ತಾನೆ ಮತ್ತು ಅವರ ಕೋಪವನ್ನು ತಪ್ಪಿಸುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತದೆ.

ನಿಂತು ಹೋದ ಅಥವಾ ಕೆಲಸ ಮಾಡದಂತಹ ಗಡಿಯಾರಗಳು: ಜನರು ತಮ್ಮ ಸೋಮಾರಿತನದ ಕಾರಣದಿಂದಾಗಿ ಅಥವಾ ಯಾರೋ ಉಡುಗೊರೆ ನೀಡಿದ್ದಾರೆ ಎನ್ನುವ ಕಾರಣಕ್ಕೆ ಭಾವನಾತ್ಮಕವಾಗಿ ಮನೆಗಳಲ್ಲಿ ಕೆಲಸ ಮಾಡದ ಗಡಿಯಾರಗಳನ್ನು ಇಟ್ಟು ಕೊಂಡಿರುವರು. ಹೀಗೆ ನಿಂತ ಗಡಿಯಾರಗಳು ಒಬ್ಬರ ಪ್ರಗತಿ ಅಥವಾ ಏಳಿಗೆಗೆ ಅಡ್ಡಿಯಾಗಬಹುದು ಎಂದು ಹೇಳಲಾಗುತ್ತದೆ. ಸ್ಟೋರ್ ರೂಂನಲ್ಲಿ, ಜನರು ಹೆಚ್ಚಾಗಿ ಇಂತಹ ಕೆಲಸ ಮಾಡದ ಗಡಿಯಾರವನ್ನು ಎತ್ತಿ ಹಾಕುತ್ತಾರೆ. ನೀವೂ ಸಹಾ ಈ ತಪ್ಪನ್ನು ಮಾಡುತ್ತಿದ್ದರೆ ತಕ್ಷಣ ಅದನ್ನು ಬದಲಿಸಿಕೊಳ್ಳಿ.

ಹೊಲಿಗೆ ಯಂತ್ರ: ಒಂದು ಕಾಲದಲ್ಲಿ ಅಜ್ಜಿಯರು ತಮ್ಮ ಕೈಯಿಂದ ಬಟ್ಟೆ ಹೊಲಿಯುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಜನರು ನೇರವಾಗಿ ಟೈಲರ್ ಬಳಿ ಹೋಗುತ್ತಾರೆ ಅಥವಾ ರೆಡಿಮೇಡ್ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಅಲ್ಲದೇ ಹಳೆ ಹೊಲಿಗೆ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಳ್ಳುವವರೂ ಇದ್ದಾರೆ. ಈ ರೀತಿ ಮಾಡುವುದರಿಂದ ದೇವಿ ಲಕ್ಷ್ಮಿಯನ್ನು ಅವಮಾನಿಸಿದಂತಾಗುವುದು ಎನ್ನಲಾಗಿದ್ದು, ಅದರಿಂದ ಅವರು ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.

ಹಳೆಯ ಬಟ್ಟೆಗಳು : ಬಹುತೇಕ ಮನೆಗಳಲ್ಲಿ ಹಳೆಯ ಬಟ್ಟೆಗಳ ಸಂಗ್ರಹವೇ ಇರುತ್ತದೆ. ಸೋಮಾರಿತನದ ಕಾರಣ ಅನೇಕರು ಅವುಗಳನ್ನು ಆಗಾಗ ತೆಗೆಯುವುದಿಲ್ಲ. ಅಂತಹ ಬಟ್ಟೆಗಳನ್ನು ಸ್ಟೋರ್ ರೂಂನಲ್ಲಿ ಇಡುವುದರಿಂದ ಮನೆಯಲ್ಲಿ ಅಶಾಂತಿ ಮತ್ತು ಬಡತನ ಉಂಟಾಗಬಹುದು. ವಾಸ್ತು ಪ್ರಕಾರ, ಇದು ಇನ್ನಷ್ಟು ದೋಷಗಳನ್ನು ಉಂಟುಮಾಡುತ್ತದೆ, ಇದು ಆರ್ಥಿಕವಾಗಿ ಮತ್ತು ದೈಹಿಕವಾಗಿಯೂ ಸಮಸ್ಯೆಗಳನ್ನು ತರಬಹುದು.

Leave a Comment